

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಜನರು ಸೌಮ್ಯ ಸ್ವಭಾವದವರು. ಪ್ರಕೃತಿ ದೇವರ ಸ್ರಷ್ಠಿ. ಪ್ರಕೃತಿಗೆ ವಿರುದ್ಧವಾಗಿ ಪರಿಸರ ಮತ್ತು ಜನರ ಬದುಕಿಗೆ ಮಾರಕವಾಗುವ ಪಂಪ್ಡ ಸ್ಟೋರೇಜ ಸಹಿತ ಯಾವುದೇ ಮಾರಕ ಯೋಜನೆಗಳ ಅನುಷ್ಠಾನದ ವಿರುದ್ಧ ಜನರು ಮೌನ ಮುರಿದು ಸಂಘಟಿತ ಹೋರಾಟ ನಡೆಸಿದರೆ ಜನರೊಂದಿಗೆ ಇದ್ದು ಹೋರಾಟಕ್ಕೆ ಶಕ್ತಿ ತುಂಬಲು ತಾನು ಸದಾ ಸಿದ್ಧ ಎಂದು ರಾಮಚಂದ್ರಾಪುರ ಮಠದ ಪೀಠಾದೀಶರಾದ ರಾಘವೇಶ್ವರ ಭಾರತಿ ಸ್ವಾಮಿಗಳು ಮಂಗಳವಾರ ಹೊನ್ನಾವರದಲ್ಲಿ ಶರಾವತಿ ಪಂಪ್ಡ ಸ್ಟೋರೇಜ ಭೂಗತ ವಿದ್ಯುತ ಯೋಜನೆಯ ವಿರುದ್ಧ ಹೊನ್ನಾವರದ ಶರಾವತಿ ಉಳಿಸಿ ಹೋರಾಟ ಸಮಿತಿಯ ಆಶ್ರಯದಲ್ಲಿ ನಡೆದ ಪ್ರತಿ ಭಟನಾ ಜನಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತ ತಮ್ಮ ಆಶೀರ್ವಚನ ನೀಡಿ “ಎಲ್ಲ ಜೀವಿಗಳಿಗೆ ಹಾಗೂ ಮುಂದಿನ ತಲೆಮಾರಿಗೆ ಪ್ರಕೃತಿಯಲ್ಲಿ ಜೀವಿಸುವ ಹಕ್ಕಿದೆ. ಜೀವನೀಡಿದ ಶರಾವತಿ ಶೋಷಣೆ ಮಾಡುವುದು ತಾಯಿಯ ರಕ್ತ ಕುಡಿದ ಪಾಪಕ್ಕೆ ಸಮಾನ .ರಾಜಕಾರಣಿಗಳು ಹಾಗೂ ಮಠಾದೀಶರು ಒಗ್ಗಟ್ಟಾಗಿ ಪರಿಸರ ನಾಶಕ್ಕೆ ಕಾರಣವಾಗುವ ಈ ಯೋಜನೆ ವಿರುದ್ಧ ಹೋರಾಡೋಣ”ಎಂದು ರಾಘವೇಶ್ವರ ಶ್ರೀಗಳು ಕರೆನೀಡಿದರು.

ಉದ್ದೇಶಿತ ಶರಾವತಿ ಪಂಪ್ಡ ಸ್ಟೋರೇಜ ಭೂಗತ ಜಲ ವಿದ್ಯುತ ಯೋಜನೆಯ ಅನುಷ್ಠಾನದ ವಿರುದ್ಧ ಇಂದಿನ ಜನ ಸಮಾವೇಶದ ದಿವ್ಯ ನೇತೃತ್ವ ಮತ್ತು ಸಾನ್ನಿಧ್ಯ ವಹಿಸಿರುವ ರಾಮಚಂದ್ರಾಪುರ ಮಠದ ಪೀಠಾದೀಶರಾದ ಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ನೀಡಿದ ಅಪ್ಪಣೆಯಂತೆ ಮಂಗಳವಾರ ಹೊನ್ನಾವರದಲ್ಲಿ ನಡೆದ ಶರಾವತಿ ಪಂಪ್ಡ ಸ್ಟೋರೇಜ ವಿದ್ಯುತ ಯೋಜನೆ ವಿರುದ್ಧ ನಡೆದ ಪ್ರತಿಭಟನಾ ಜನಸಮಾವೇಶದಲ್ಲಿ ಕೆಳಗಿನಂತೆ ನಿರ್ಣಯ ಅಂಗೀಕರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಕ್ಕೋತ್ತಾಯ ಮಾಡಿದೆ.

- ಶರಾವತಿಕೊಳ್ಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶರಾವತಿ ಪಂಪ್ಡ ಸ್ಟೋರೇಜ ಯೋಜನೆಯನ್ನು ಕೂಡಲೇ ಕೈಬಿಡಬೇಕು
- ವಿದ್ಯುತ ಕೊರತೆಯನ್ನು ನೀಗಿಸಲು ಬೇರೆ ಬದಲೀ ಸುರಕ್ಷಿತ ಇಂದನ ಮೂಲಗಳ ಮೋರೆ ಹೋಗಬೇಕು
- ಜಿಲ್ಲೆಯ ಧಾರಣಾಸಾಮರ್ಥ್ಯದ ಅಧ್ಯಯನ ಆಗದೇ ಜಿಲ್ಲೆಯ ಜನರನ್ನು ಅತಂತ್ರಸ್ತರನ್ನಾಗಿಸುವ ಪರಿಸರ ನಾಶಮಾಡುವ ಯಾವುದೇ ಯೋಜನೆಯ ಹೇರಿಕೆ ಮಾಡುವದನ್ನು ಸರ್ಕಾರಗಳು ಇನ್ನು ಮುಂದಾದರೂ ನಿಲ್ಲಿಸಬೇಕು. ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.
- ಜಿಲ್ಲೆಯ ಯುವಕರಿಗೆ ಉದ್ಯೋಗ ಕಲ್ಪಿಸುವ ಐಟಿ ಹಬ್ ಗಳ ಸ್ಥಾಪನೆ,ಜಿಲ್ಲೆಯನ್ನು ಸ್ವಚ್ಛ ಪ್ರವಾಸೋದ್ಯಮ ಜಿಲ್ಲೆಯನ್ನಾಗಿ ಅಭಿವ್ರದ್ಧಿಪಡಿಸಲು ಕ್ರಮಗಳು ಆಗಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಹಕ್ಕೊತ್ತಾಯ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ.
ಈ ದಿಶೆಯಲ್ಲಿ ಜಿಲ್ಲೆಯ ಮಾನ್ಯ ಉಸ್ತುವಾರಿ ಸಚಿವರು ,ಮಾನ್ಯ ಸಂಸದರು, ಶಾಸಕರು,ಸರ್ವಪಕ್ಷಗಳ ಪ್ರಮುಖರು ಇನ್ನೂ ಹೆಚ್ಚಿನ ಇಚ್ಛಾಶಕ್ತಿ ತೋರಬೇಕು ಎಂಬ ನಿರ್ಣಯವನ್ನು ಸ್ವೀಕರಿಸಿದೆ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ ಪಂಪ್ಡ ಸ್ಟೋರೇಜ ಯೋಜನೆಯು ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಮಂಜೂರಾಗಿದ್ದು ಅಂದೇ ತಾವು ಈ ಯೋಜನೆಯನ್ನು ತನ್ನ ಕ್ಷೇತ್ರದ ಜನರ ಹಿತದೃಷ್ಟಿಯಿಂದ ತಾನು ವಿರೋದಿಸಿದ್ದು ಅಂದಿನ ಮುಂಗಡ ಪತ್ರದಲ್ಲಿನ ದಾಖಲೆಗಳ ವಿವರಗಳನ್ನು ಉಲ್ಲೇಖಿಸಿ, ತನ್ನ ಬಗ್ಗೆ ವ್ಯಕ್ತಿಗತವಾಗಿ ಟೀಕೆ ಮಾಡುತ್ತಿರುವ ಬಲಸೆ ಮಾಸ್ತಪ್ಪ ನಾಯ್ಕರನ್ನು ಅವರ ಸಮ್ಮುಖದಲ್ಲಿಯೇ ಅವರ ಫೇಸ್ಬುಕ್ ಟೀಕೆಗಳಿಗೆ ಹಿಗ್ಗಾ ಮುಗ್ಗಾ ಮಾತಿನಲ್ಲಿ ಜಾಡಿಸಿ ಬೆವರಿಳಿಸಿದ್ದು ನಡೆಯಿತು. ರಾಘವೇಶ್ವರ ಶ್ರೀಗಳು ನೀಡುವ ಆದೇಶವನ್ನು ತಾನು ಶಿರಸಾ ವಹಿಸಿ ಪಾಲಿಸುತ್ತೇನೆ. ಶರಾವತಿ ಪಂಪ್ಡ ಸ್ಟೋರೇಜ ಯೋಜನೆಯ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ. ಹೋರಾಟ ಸಮಿತಿಯ ಮತ್ತು ಜನರ ಬೆಂಬಲಕ್ಕೆ ತಾನು ನಿಲ್ಲುವದಾಗಿ ಗುರುಗಳ ಮುಂದೆ ಇಂದೇ ಪ್ರಮಾಣ ಮಾಡುವದಾಗಿ ಘೋಸಿಸಿ, ಸೇರಿದ ಜನರು ಆಶ್ಚರ್ಯ ಪಡುವಂತೆ ಆದದ್ದು ಇಂದಿನ ಸಮಾವೇಶದ ವೈಶಿಷ್ಟ್ಯವಾಗಿತ್ತು.
ನಂತರ ಡಾ.ಪ್ರಣವಾನಂದ ಸ್ವಾಮೀಜಿ,ಬಂಗಾರಮಕ್ಕಿಯ ಧರ್ಮಾದಿಕಾರಿ ಮಾರುತಿ ಗುರೂಜಿ,ಶಾಸಕ ದಿನಕರ ಕೆ.ಶೆಟ್ಟಿ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ, ಸುನೀಲ ಬಿ.ನಾಯ್ಕ, ಜಿಲ್ಲಾ ಕಾಂಗ್ರೆಸ್ಸ ಅಧ್ಯಕ್ಷ ಸಾಯಿ ಗಾಂವ್ಕರ, ಬಿ.ಜೆ.ಪಿ.ಜಿಲ್ಲಾದ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ,ಜನತಾದಳ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ,ಬ್ಲಾಕ ಕಾಂಗ್ರೆಸ್ಸ ಅಧ್ಯಕ್ಷ ಗೋವಿಂದ ಎಸ್ ನಾಯ್ಕ ,ಮಹೇಶ ನಾಯ್ಕ,ಜನತಾದಳ ಬ್ಲಾಕ ಅಧ್ಯಕ್ಷ ಟಿ.ಟಿ.ನಾಯ್ಕ, ಬಿಜೆಪಿಯ ಮಂಡಲ ಅಧ್ಯಕ್ಷ ಮಂಜುನಾಥ ಎಂ.ನಾಯ್ಕ, ಶರಾವತಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಜೆ.ಟಿ.ಪೈ,ಅಧ್ಯಕ್ಷ ವೆಂಕಟರಮಣ ಹೆಗಡೆ ಕವಲಕ್ಕಿ, ಕಾರ್ಯಾಧ್ಯಕ್ಷ ಚಂದ್ರಕಾAತ ಕೊಚರೇಕರ, ಕ್ರಾಂತಿರAಗದ ಅಧ್ಯಕ್ಷ ಮಂಗಲದಾಸ ನಾಯ್ಕ, ಪಟ್ಟಣ ಪಂಚಾಯತಿ ಅಧ್ಯಕ್ಷ ವಿಜಯ ಕಾಮತ ,ಮಾಸ್ತಪ್ಪ ನಾಯ್ಕ, ಮತ್ತಿತರರು ವೇದಿಕೆಯಲ್ಲಿದ್ದರು.ಶರಾವತಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಸ್ವಾಗತಿಸಿದರು,ಕಾರ್ಯಾಧ್ಯಕ್ಷ ಚಂದ್ರಕಾAತ ಕೊಚರೇಕರ ಪ್ರಾಸ್ತಾವಿಕ ಗೈದರು,ಕೇಶವ ನಾಯ್ಕ ಬಳ್ಕೂರ ವಂದನಾರ್ಪಣೆ ಮಾಡಿದರು.ವಿಶ್ವನಾಥ ನಾಯಕ ನಿರೂಪಣೆ ಗೈದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.