March 12, 2026

ದೇವಸ್ಥಾನಗಳು ಮನುಷ್ಯನ ಮನಸ್ಸಿಗೆ ನೆಮ್ಮದಿ ಶಾಂತಿಯನ್ನು ನೀಡುತ್ತವೆ. ಸುತ್ತೂರು ಶ್ರೀಗಳು

ಗುಂಡ್ಲುಪೇಟೆ: ತಾಲೂಕಿನ ಬರಗಿ ಗ್ರಾಮದಲ್ಲಿ ನಡೆದ ಶ್ರೀ ಬಸವೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ವಿಮಾನ ಗೋಪುರ ಕಳಸಾರೋಹಣ ಸಮಾರಂಭದ ಕಾರ್ಯಕ್ರಮಕ್ಕೆ ದಿವ್ಯಸಾನಿಧ್ಯವನ್ನು ವಹಿಸಿದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಮುತ್ತು ಪರಮಪೂಜ್ಯ ನಿರಂಜನ ಪ್ರಣವ ಸ್ವರೂಪಿ ಶ್ರೀ ಶಿವಸಿದ್ದೇಶ್ವರ ಸ್ವಾಮಿಗಳು ಸಿದ್ದಗಂಗಾ ಮಠ ಕಿರಿಯ ಶ್ರೀಗಳು ಹಾಗೂ ತಾಲೂಕಿನ ಹರ ಗುರು ಚರಮೂರ್ತಿಗಳು ಒಟ್ಟಾಗಿ ಸೇರಿ ಕಾರ್ಯಕ್ರಮಕ್ಕೆ ದೀಪವನ್ನು ಬೆಳಗುವುದರ ಮೂಲಕ ಚಾಲನೆಯನ್ನು ನೀಡಿದರು.

ನಂತರ ಸುತ್ತೂರು ಶ್ರೀಗಳು ಧಾರ್ಮಿಕ ಸಭೆಯಲ್ಲಿ ಆಶೀರ್ವದಿಸುತ್ತ ದೇವಸ್ಥಾನಗಳು ಮನುಷ್ಯನ ಮನಸ್ಸಿಗೆ ಮುದವನ್ನು, ನೆಮ್ಮದಿ ಶಾಂತಿಯನ್ನು ನೀಡುವಂತಹ ತಾಣಗಳಾಗಿವೆ. ಪ್ರಾಚೀನ ಪರಂಪರೆಯಲ್ಲಿ ದೇವಸ್ಥಾನಗಳನ್ನು ಗಮನಿಸಿದರೆ ಅದು ಕೇವಲ ಪೂಜಾ ಕೇಂದ್ರಗಳಾಗಿಲ್ಲ ಶಿಕ್ಷಣ ಕೇಂದ್ರಗಳಾಗಿ ,ನ್ಯಾಯದ ಸ್ಥಾನಗಳಾಗಿ, ಕಲಾ ಕೇಂದ್ರಗಳಾಗಿ, ಇವೆ ಕೆಲಸ ಮಾಡುತ್ತಾ ಬಂದಿವೆ. ಹಾಗಾಗಿ ಅವುಗಳನ್ನ ಉಳಿಸಿಕೊಂಡು ಹೋಗಬೇಕು ಎಂದುಭಕ್ತರಿಗೆ ತಿಳಿಸಿದರು. ಶ್ರೀಕೋಡಿ ಬಸವೇಶ್ವರ ಭಜನ ಸಂಘ ಹೊಂಗಳ್ಳಿ ರವರಿಂದ ಅದ್ಭುತವಾಗಿ ಭಜನೆ ಕಾರ್ಯಕ್ರಮವನ್ನು ನೆರವೇರಿಸಿದರು. ಮನರಂಜನೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಂದ ಬರಗಿ ಗ್ರಾಮಸ್ಥರು ಏರ್ಪಡಿಸಿದ್ದರು .

ಈ ಸಂದರ್ಭದಲ್ಲಿ ನಿರಂಜನ ಪ್ರಣವ ಸ್ವರೂಪಿ ಶ್ರೀ ಮಹಾಂತ ಸ್ವಾಮಿಗಳವರು ಗುರುಮಲ್ಲೇಶ್ವರ ಮಠ ದೇವನೂರು, ದಿವ್ಯ ಅಧ್ಯಕ್ಷತೆಯನ್ನು ನಿರಂಜನ ಪ್ರಣವ ಸ್ವರೂಪಿ ಶ್ರೀಶಿವಲಿಂಗೇAದ್ರಸ್ವಾಮಿಗಳು ಆಡವಿ ಮಠಪಡುಗೂರು, ಮಾದಾಪಟ್ಟಣ ತೋಂಟದಾರ್ಯ ಸ್ವಾಮಿಗಳು, ಜಡೆ ಸ್ವಾಮಿಗಳು ಹಂಗಳದ ಮಠ, ಇಮ್ಮಡಿ ಉದ್ದಾನ ಸ್ವಾಮಿಗಳು ಮೂಡುಗೂರು ಮಠ, ಗುರುಸಿದ್ಧ ಸ್ವಾಮಿಗಳವರು ಕಬ್ಬಳ್ಳಿ ಮಠ, ಚೆನ್ನವೀರ ಸ್ವಾಮಿಗಳವರು ಶಿವಪೂಜ ಮಠ ಚಿಕ್ಕತುಪ್ಪುರು, ಶ್ರೀ ಗಂಗಾಧರೇಶ್ವರ ಸ್ವಾಮಿಗಳು ಕಬ್ಬಿನ ಕೊಲೆಶ್ವರ ಮಠ ಗೋಪಾಲಪುರ, ಶ್ರೀ ಸಿದ್ದೇಶ್ವರ ಸ್ವಾಮಿಗಳವರು ಸಿದ್ದಪ್ಪಾಜಿ ಗದ್ದುಗೆ ಗೋಪಾಲಪುರ ಹಾಗೂ ನಿರೂಪಕರಾಗಿ ಪ್ರಭುಸ್ವಾಮಿ ರವರು ಸೇರಿದಂತೆ ಗ್ರಾಮಸ್ಥರುಗಳು ಅಕ್ಕ ಪಕ್ಕದ ಗ್ರಾಮಸ್ಥರುಗಳು ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ : ಸದಾನಂದ ಕಣ್ಣೆಗಾಲ ಗುಂಡ್ಲುಪೇಟೆ

About The Author

error: Content is protected !!