March 11, 2026

ಮಾ.೧೫ಕ್ಕೆ ಜಡ್ಡಿಗದ್ದೆಯಲ್ಲಿ ‘ಹಿಂದೂ ಸಮಾವೇಶ’: ಹುಕ್ಕೇರಿ ಶ್ರೀ ಭಾಗಿ


ಶಿರಸಿ: ತಾಲೂಕಿನ ಜಡ್ಡಿಗದ್ದೆಯ ಮಂಡಲ ವ್ಯಾಪ್ತಿಯಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಆಶ್ರಯದಲ್ಲಿ ಮಾರ್ಚ್ 15ರಂದು ಭಾನುವಾರ ಮಧ್ಯಾಹ್ನ ಬೃಹತ್ ‘ಹಿಂದೂ ಸಮಾವೇಶ’ ಆಯೋಜಿಸಲಾಗಿದೆ.


ಕಾರ್ಯಕ್ರಮದ ಅಂಗವಾಗಿ ಅಂದು ಮಧ್ಯಾಹ್ನ 2:30 ಗಂಟೆಗೆ ಜಡ್ಡಿಗದ್ದೆಯ ದೇವಸ್ಥಾನದ ಆವರಣದಿಂದ ಸಮಾವೇಶ ನಡೆಯುವ ಸ್ಥಳದವರೆಗೆ ‘ಭಾರತ ಮಾತೆಯ ಭವ್ಯ ಶೋಭಾಯಾತ್ರೆ’ ಜರುಗಲಿದೆ. 3:30 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ. ಬೆಳಗಾವಿಯ
ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಪ.ಪೂ. ಡಾ|| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಮಾವೇಶದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ದಿಕ್ಸೂಚಿ ಭಾಷಣಕಾರರಾಗಿ ವಿಶ್ವ ಹಿಂದೂ ಪರಿಷತ್‌ನ ರಾಜ್ಯ ಸಂಚಾಲಕ ಸೂರ್ಯನಾರಾಯಣ ಆಗಮಿಸಲಿದ್ದಾರೆ.


ಜಡ್ಡಿಗದ್ದೆ ಮಂಡಲದ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಅಧ್ಯಕ್ಷ ಶಿವರಾಮ ನಾ. ಭಟ್ಟ, ಹೊಸ್ಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಉಪಸ್ಥಿತರಾಗಿ ಮಾತಾಭಗಿನಿಗಳಾದ ಗಿರಿಜಾ ಶಂಕರ ಹೆಗಡೆ (ಗೋಡೆಮನೆ) ಹಾಗೂ ಭವಾನಿ ನಾರಾಯಣ ನಾಯ್ಕ (ದೂಳಳ್ಳಿ) ಉಪಸ್ಥಿತರಿರುವರು.


ಸನಾತನ ಹಿಂದೂ ಧರ್ಮದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಹಾಗೂ ಸಮಾಜವನ್ನು ಸಂಘಟಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.

About The Author

error: Content is protected !!