March 13, 2026

ಹೃದಯಕ್ಕೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಮೂತ್ರಪಿಂಡಕ್ಕೂ ಕೊಡಿ– ಡಾ|| ಶ್ರೀನಿವಾಸ್ ನಾಯಕ

ಹೊನ್ನಾವರ ಮಾ. 12: ಹೃದಯ ಆರೋಗ್ಯಕ್ಕೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಮೂತ್ರಪಿಂಡ ಆರೋಗ್ಯಕ್ಕೆ ನೀಡಬೇಕಾಗಿದೆ. ವರ್ಷದಿಂದ ವರ್ಷಕ್ಕೆ ಮೂತ್ರಪಿಂಡ ತೊಂದರೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೊನ್ನಾವರ ತಾಲೂಕ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ತಜ್ಞ ವೈದ್ಯರಾದ ಡಾ|| ಶ್ರೀನಿವಾಸ್ ನಾಯಕ ಹೇಳಿದರು. ಅವರು ಆಸ್ಪತ್ರೆಯ ಡಯಾಲಿಸಿಸ್ ವಿಭಾಗದಲ್ಲಿ ನಡೆದ ವಿಶ್ವ ಮೂತ್ರಪಿಂಡ ದಿನಾಚರಣೆ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು. ಅಧಿಕ ರಕ್ತದೊತ್ತಡ, ಮಧುಮೇಹದ ತೊಂದರೆಯಿAದ ಬಳಳುತ್ತಿರುವವರು, ಅತಿಯಾದ ಔಷಧಗಳ ಸೇವನೆಯಿಂದ ಕಿಡ್ನಿ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ನಾವು ತಿನ್ನುವ ಆಹಾರ ಕೃತಕಬಣ್ಣಗಳಿಂದ ಕೂಡಿದ್ದರೆ, ರಾಸಾಯನಿಯುಕ್ತವಾಗಿದ್ದರೆ ಮೂತ್ರಪಿಂಡ ಆರೋಗ್ಯಕ್ಕೆ ಮೇಲೆ ಪರಿಣಾಮ ಬೀರುತ್ತದೆ. ರಕ್ತದ ಒತ್ತಡ ಬಗ್ಗೆ ಸದಾ ಜಾಗೂರಕಾಗಿರಬೇಕು. ನಿಯಮಿತ ದಿನಗಳಲ್ಲಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು. ದೇಹದ ತೂಕ ಹೆಚ್ಚುವಿಕೆ ಕೂಡ ಮೂತ್ರಪಿಂಡ ತೊಂದರೆ ಕೊಡುತ್ತದೆ. ಚಿಕ್ಕ ಪುಟ್ಟ ಆರೋಗ್ಯದ ತೊಂದರೆಗಳಿಗೆ ಸ್ವಯಂ ಪ್ರೇರಿತರಾಗಿ ಔಷಧಿಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ. ಮೂತ್ರಪಿಂಡ ತನ್ನ ಕಾರ್ಯ ಸರಿಯಾಗಿ ಮಾಡದಿದ್ದಾಗ ಡಯಾಲಿಸಿಸ್ ಪ್ರಕ್ರಿಯೆ ಮೂಲಕ ಉತ್ತಮ ಪಡಿಸುವ ಪ್ರಯತ್ನ ಮಾಡಲಾಗುತ್ತದೆ. ಇದಕ್ಕೆ ಡಯಾಲಿಸಿಸ್ ಸಾಶ್ವತ ಪರಿಹಾರವಲ್ಲ. ಆದ್ದರಿಂದ ಎಲ್ಲರೂ ಸರಿಯಾದ ನಿದ್ರೆ, ಒತ್ತಡ ಮುಕ್ತ ಜೀವನ ಶೈಲಿ, ನೈಸರ್ಗಿಕ ಆಹಾರ ಪದ್ದತಿ, ಮಧುಮೇಹದಿಂದ ದೂರವಿರುವುದು, ಸಕಾಲದಲ್ಲಿ ಆರೋಗ್ಯದ ಚೆಕಪ್, ಕಾಲ ಕಾಲಕ್ಕೆ ಕಿಡ್ನಿ ಆರೋಗ್ಯ ಬಗ್ಗೆ ಟೆಸ್ಟ ಮಾಡಿಸಿಕೊಳ್ಳುವರ ಮೂಲಕ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ ಕಿಣಿ ಮಾತನಾಡಿ ನಮ್ಮ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸದ್ಯಕ್ಕೆ ಎರಡು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು 38 ಜನ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನಸಾಮನ್ಯರು ಕಿಡ್ನಿ ಆರೋಗ್ಯ ಬಗ್ಗೆ ಕಾಳಜಿ ವಹಿಸುವದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಯುಷ ವೈದ್ಯಾಧಿಕಾರಿಗಳಾದ ಡಾ|| ಗುರುದತ್ತ ಕುಲಕರ್ಣಿ, ಡಯಾಲಿಸಿಸ್ ಸಿಬ್ಬಂಧಿ ಪದ್ಮಾ, ಡಾ|| ವಿಘ್ನೇಶ, ಸೇರಿದಂತೆ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

About The Author

error: Content is protected !!