March 16, 2026

ಶ್ರೇಯಸ್ ಸಾಧನೆಗೆ ಬರ್ಗಿ ವಿದ್ಯಾಪೀಠದ ಪೇಟ


ಅಂಕೋಲಾ : ಕೆನರಾ ಬ್ಯಾಂಕ್ ಹಾಗೂ ಕರ್ನಾಟಕ ವಿಕಾಸ್ ಬ್ಯಾಂಕ್ ಗಳ ಪ್ರೊಬೆಶ್ನರಿ ಅಧಿಕಾರಿ ಯಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಲಿಪಿಕ ವರ್ಗದ, ಸ್ಟಾಫ್ ಸಿಲೆಕ್ಷನ್ ಕಮಿಷನ್ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿ ಹುದ್ದೆಗಳು ಸೇರಿದಂತೆ ಒಟ್ಟು ಏಕಕಾಲದಲ್ಲಿ ಐದು ಉನ್ನತ ಹುದ್ದೆಗಳಿಗೆ ಆಯ್ಕೆಗೊಂಡು, ಕೆನರಾ ಬ್ಯಾಂಕಿನ ಪ್ರೊಫೆಷನರಿ ಅಧಿಕಾರಿ ಹುದ್ದೆಗೆ ಕರ್ತವ್ಯಕ್ಕೆ ಹಾಜರಾಗುತ್ತಿರುವ ತಾಲ್ಲೂಕಿನ ಆಚವೆ – ಚನಗಾರ ಮೂಲದ ಬಳಲೆಯ ನಿವಾಸಿಯಾದ ಶ್ರೇಯಸ್ ರಾಮ ನಾಯಕರವರನ್ನು ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾ ಪೀಠದಿಂದ ” ಸಾಧನ ಶ್ರೇಯಸ್ ” ಅಭಿದಾನದೊಂದಿಗೆ ಆಪ್ತವಾಗಿ ಮಾನಿಸಲಾಯಿತು.


ಭಟ್ಕಳದ ಅಂಜುಮನ್ ಮಹಾ ವಿದ್ಯಾಲಯದ ಹೆಸರಾಂತ ಕನ್ನಡ ಪ್ರಾಧ್ಯಾಪಕರಾಗಿ ಇತ್ತೀಚೆಗಷ್ಟೇ ನಿವೃತ್ತರಾದ ಪ್ರೊ. ಆರ್. ಎಸ್. ನಾಯಕ ಹಾಗೂ ಕುಮಟಾದ ಸರ್ಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದ ವಾಣಿಜ್ಯ ವಿಷಯದ ಪ್ರಾಧ್ಯಾಪಕರಾದ ಪ್ರೊ. ರೇಣುಕಾ ಗಾಂವಕರ್ ದಂಪತಿಗಳ ಸುಪುತ್ರರಾದ ಶ್ರೇಯಸ್ ನಾಡಿನ ಪ್ರಖ್ಯಾತ ವಾಗ್ಮಿ, ಲೇಖಕ, ಯಕ್ಷನಟ, ಅಂಕಣಕಾರ, ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್ ಬರ್ಗಿಯವರ ಸೋದರಳಿಯರಾಗಿದ್ದು, ಎಳವೆಯಿಂದಲೂ ಸಜ್ಜನಿಕೆಯ ನಡವಳಿಕೆಯೊಂದಿಗಿನ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಪದವಿಯಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ಸ್ವರ್ಣ ಪದಕಗಳೊಂದಿಗೆ ರಾಂಕ್ ಗಳಿಸಿದ್ದು, ಕನ್ನಡ ಸ್ನಾತಕೋತ್ತರ ಪದವಿಯಲ್ಲಿದ್ದಾಗಲೇ ನೆಟ್ ಮತ್ತು ಸೆಟ್ ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾಗಿದ್ದು, ಯಾವುದೇ ಕೋಚಿಂಗ್ ಅನ್ನು ಪಡೆಯದೇ, ನಿರಂತರವಾದ ಸ್ವಯಂ ಅಭ್ಯಾಸದಿಂದ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಉನ್ನತ ಸ್ಥಾನಕ್ಕೇರಿರುವುದು ಅಭಿಮಾನದ ವಿಷಯವೆಂದು “ಕನ್ನಡ ಭಾರತಿ ಪ್ರಪಂಚದ ಸಂಚಾಲಕ” ರಾದ ನಾರಾಯಣ ನಾಗು ನಾಯಕರವರು ನುಡಿದರು.


ಈ ಸಂದರ್ಭದಲ್ಲಿ ಕ್ರಿಕೆಟ್ ಕೋಚರ್ ವಿಶ್ವಖ್ಯಾತಿಯ ರಾಘವೇಂದ್ರ ದಿವಗಿಯವರ ತೀರ್ಥರೂಪರಾದ ವಿಶ್ರಾಂತ ಅಧ್ಯಾಪಕರಾಗಿರುವ ಮೋಹನ್ ಭಂಡಾರಿ, ನಿವೃತ್ತ ಶಿಕ್ಷಕರಾದ ಬಾಲಚಂದ್ರ ಗಾಂವಕರ್ ಪಡುವಣಿ, ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಕೋಶಾಧ್ಯಕ್ಷರಾದ ಮಾಸೂರಿನ ಶ್ರೀ ಬಬ್ರುಲಿಂಗೇಶ್ವರ ವಿದ್ಯಾಲಯದ ಮುಖ್ಯಾಧ್ಯಾಪಕರಾದ ಶಿವಚಂದ್ರ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಸುಧೀರ ನಾಯಕ, ಕೇಣಿಯ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ಹರ್ಷಿತಾ, ಅಭಿಯಂತರರಾದ ದೀಕ್ಷಾ ಮತ್ತು ದೀಪಿತ್ ಮೊದಲಾದವರಿದ್ದರು.

About The Author

error: Content is protected !!