ಭಟ್ಕಳ: ಮಂಗಳೂರು ಕಡೆಗೆ ಚಿಕಿತ್ಸೆಗಾಗಿ ತೆರಳುತ್ತಿದ್ದ ವೇಳೆ ರೈಲಿನಿಂದ ಕೆಳಗೆ ಬಿದ್ದು ವೃದ್ಧನೊಬ್ಬ ಮೃತಪಟ್ಟ ಶಿರಾಲಿ ಚಿತ್ರಾಪುರ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ.
ಮೃತರನ್ನು ಕಾರವಾರ ತಾಲೂಕಿನ ಅಮದಳ್ಳಿ ಟೋಲ್ ನಾಕಾ ಸಮೀಪದ ನಿವಾಸಿ ಬಾಬು ಪಾಂಡುರಂಗ ಪಡ್ತಿ (70) ಎಂದು ಗುರುತಿಸಲಾಗಿದೆ.
ಅಸ್ವಸ್ಥಗೊಂಡಿದ್ದ ಬಾಬು ಪಡ್ತಿ ಅವರನ್ನು ಚಿಕಿತ್ಸೆಗಾಗಿ ಪುತ್ರ ಅಕ್ಷಯ ಪಡ್ತಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾರವಾರದಿಂದ ಮತ್ತ್ವಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
ಬೆಳಿಗ್ಗೆ ಸುಮಾರು 4.30ರ ಸುಮಾರಿಗೆ ರೈಲು ಶಿರಾಲಿ ಚಿತ್ರಾಪುರ ರೈಲ್ವೆ ನಿಲ್ದಾಣದ ಸಮೀಪ ತಲುಪಿದಾಗ ಬಾಬು ಪಡ್ತಿ ಶೌಚಾಲಯಕ್ಕೆ ತೆರಳಿದ್ದರು. ಬಳಿಕ ಬೋಗಿಯಲ್ಲಿ ಕೈ ತೊಳೆಯುವ ವೇಳೆ ಆಕಸ್ಮಿಕವಾಗಿ ಬಾಗಿಲು ತೆರೆದು ನಿಯಂತ್ರಣ ತಪ್ಪಿ ರೈಲಿನಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಪರಿಣಾಮ ಗಂಭೀರ ರಕ್ತಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಕುರಿತು ಪುತ್ರ ಅಕ್ಷಯ ಪಡ್ತಿ ಗ್ರಾಮೀಣ ಪೋರ ಠಾಣೆಯಲ್ಲಿ
ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

More Stories
ಯೋಗದಿಂದ ಆರೋಗ್ಯ – ಭಟ್ಕಳದಲ್ಲಿ 23 ದಿನಗಳ ವಿಶೇಷ ತರಬೇತಿ ಆರಂಭ
*ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ನಲ್ಲಿ AITM ವಿದ್ಯಾರ್ಥಿಗಳಿಗೆ ಪ್ರಥಮ ಪ್ರಶಸ್ತಿ
ವಿದ್ಯೆಯ ಜೊತೆ ನೈತಿಕತೆ, ವಿನಯವೂ ಅಗತ್ಯ: ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ