March 30, 2026

ಶ್ರೇಯಸ್ ಪೇಪರ್ ಮಿಲ್‌ನಲ್ಲಿ ಭಾರೀ ಅಗ್ನಿ ಅವಘಡ

ದಾಂಡೇಲಿ:  ಕೆರವಾಡಾ ಪ್ರದೇಶದಲ್ಲಿರುವ ಶ್ರೇಯಸ್ ಪೇಪರ್ ಮಿಲ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ

ಕಂಪನಿ ಆವರಣದಲ್ಲಿ ಸಂಗ್ರಹಿಸಿದ್ದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ ಪರಿಣಾಮ ಅದು ನಿಯಂತ್ರಣ ತಪ್ಪಿ ವೇಗವಾಗಿ ಹರಡಿದೆ

ಬೆಂಕಿ ಮಿಲ್ ಸುತ್ತಮುತ್ತಲಿನ ಪ್ರದೇಶಗಳಿಗೆ ವಿಸ್ತರಿಸುತ್ತಿದ್ದು ಪರಿಸ್ಥಿತಿ ಆತಂಕಕಾರಿ ಆಗಿದೆ

ಹತ್ತಿರದ ಗ್ರಾಮಗಳು ಮತ್ತು ಅರಣ್ಯ ಪ್ರದೇಶಕ್ಕೂ ಬೆಂಕಿ ವ್ಯಾಪಿಸುವ ಭೀತಿ ಎದುರಾಗಿದೆ

ಸ್ಥಳೀಯರಲ್ಲಿ ಭಾರೀ ಆತಂಕ ನಿರ್ಮಾಣವಾಗಿದ್ದು ತಕ್ಷಣ ಕ್ರಮಕ್ಕೆ ಒತ್ತಾಯ ಹೆಚ್ಚಾಗಿದೆ

ಘಟನಾ ಸ್ಥಳಕ್ಕೆ ತಹಶೀಲ್ದಾರ ಶೈಲೇಶ್ ಪರಮಾನಂದ ಹಾಗೂ ಸಿ ಪಿ ಐ ಶಿವಾನಂದ ಅಂಬಿಗೇರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಹಳಿಯಾಳ ಮತ್ತು ಜೊಯಿಡಾ ಭಾಗಗಳಿಂದ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ

ಆದರೂ ಬೆಂಕಿ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ

ಇದೇ ಸ್ಥಳದಲ್ಲಿ ಸುಮಾರು ಹದಿನೈದು ದಿನಗಳ ಹಿಂದೆ ಕೂಡ ಇದೇ ರೀತಿಯ ಅಗ್ನಿ ಅವಘಡ ಸಂಭವಿಸಿತ್ತು

ಆ ಸಂದರ್ಭದಲ್ಲಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ಮತ್ತೆ ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿಬಂದಿದೆ

ಕಂಪನಿ ಮಾಲೀಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

ಪರಿಸ್ಥಿತಿ ಹದಗೆಟ್ಟರೆ ಮಿಲ್ ಕಟ್ಟಡ ಮತ್ತು ಇತರೆ ಆಸ್ತಿಗಳಿಗೆ ಭಾರೀ ಹಾನಿ ಸಂಭವಿಸುವ ಸಾಧ್ಯತೆ ಇದೆ

About The Author

error: Content is protected !!