ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿ ಗುರುವಾರ ಸಂಜೆ ಸುಮಾರು 5 ಗಂಟೆಗೆ ಅಧಿಕಾರಿಗಳಿಂದ ದಾಳಿ ನಡೆಸಲಾಯಿತು.
ದಂಡಾಧಿಕಾರಿ ಮತ್ತು ಆಹಾರ ನಿರೀಕ್ಷಕರ ನೇತೃತ್ವದಲ್ಲಿ ನಗರದ ವಿವಿಧ ಹೋಟೆಲ್, ಟೀ ಅಂಗಡಿ ಹಾಗೂ ಎಗ್ ರೈಸ್ ಅಂಗಡಿಗಳ ಮೇಲೆ ಪರಿಶೀಲನೆ ನಡೆಯಿತು.
ಪರಿಶೀಲನೆ ವೇಳೆ ಕಮರ್ಷಿಯಲ್ ಸಿಲಿಂಡರ್ ಬಳಸಬೇಕಾದ ಸ್ಥಳಗಳಲ್ಲಿ ಗ್ರಹಬಳಕೆ (ಡೊಮೆಸ್ಟಿಕ್) ಸಿಲಿಂಡರ್ ಬಳಸಿರುವುದು ಪತ್ತೆಯಾಯಿತು.
ಒಟ್ಟು 5 ಸಿಲಿಂಡರ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು.

ತಹಶೀಲ್ದಾರ ಶೈಲೇಶ್ ಪ್ರಮಾಣಂದ್ ಅವರು ಮಾತನಾಡಿ,ನಗರದ ವಿವಿಧ ಭಾಗಗಳಲ್ಲಿ ಈ ರೀತಿಯ ದಾಳಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಆಹಾರ ನಿರೀಕ್ಷಕ ಗೋಪಿ ಚೌಹಾನ್ ಎಚ್ಚರಿಕೆ ನೀಡಿದ್ದು,ಕಮರ್ಷಿಯಲ್ ಸಿಲಿಂಡರ್ ಕೊರತೆ ತಾತ್ಕಾಲಿಕವಾಗಿದ್ದು,ಹೋಟೆಲ್ ಮಾಲೀಕರು ಗ್ರಹಬಳಕೆ ಸಿಲಿಂಡರ್ ಬಳಸಬಾರದು ಎಂದು ತಿಳಿಸಿದ್ದಾರೆ.
ಇಂತಹ ದುರುಪಯೋಗದಿಂದ ಸಾರ್ವಜನಿಕರಿಗೆ ಸಿಲಿಂಡರ್ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದರು.
ಈ ಕಾರ್ಯಾಚರಣೆಯಲ್ಲಿ ಗೋಪಿ ಚೌಹಾನ್ ಹಾಗೂ ದಯಾನಂದ್ ಉಪಸ್ಥಿತರಿದ್ದರು.
About The Author


More Stories
ಜಿ+2 ಮನೆಗಳ ಅವ್ಯವಸ್ಥೆ ವಿರುದ್ಧ ಆಕ್ರೋಶ: ಸಮಗ್ರ ಹೋರಾಟ ಸಮಿತಿಯಿಂದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ.
ಹಳಿಯಾಳ: ದಾಂಡೇಲಿ ಸಮಸ್ಯೆಗಳ ಕುರಿತು ಸಂಸದ ಕಾಗೇರಿಗೆ ಮನವಿ
ದಾಂಡೇಲಿ ಜಿ+2 ಮನೆಗಳ ವಿವಾದ ತೀವ್ರ – ಸಾಮಗ್ರಿ ಸ್ಥಳಾಂತರಕ್ಕೆ ಯತ್ನಕ್ಕೆ ಆಕ್ರೋಶ