ಭಟ್ಕಳ: ಹೈದರಾಬಾದ್ ಮೂಲದ ವಂದನ ಎಂಬ ಮಹಿಳೆ ರಚಿಸಿರುವ ಮಹಾ ಮುರುಡೇಶ್ವರ ಹಾಗೂ ರಾಜಗೋಪುರದ ಅದ್ಭುತ ಚಿತ್ರಕಲೆ ಭಕ್ತರ ಮನಸೂರೆಗೊಂಡಿದೆ.
ಮಹಾ ಮುರುಡೇಶ್ವರ ಶಿವನ ಭವ್ಯ ಪ್ರತಿಮೆ ಹಾಗೂ ದೇವಸ್ಥಾನದ ರಾಜಗೋಪುರವನ್ನು ಒಂದೇ ಚಿತ್ರಪಟದಲ್ಲಿ ಆಕರ್ಷಕವಾಗಿ ಮೂಡಿಸಿರುವುದು ಈ ಕೃತಿಯ ವಿಶೇಷತೆ. ಚಿತ್ರದಲ್ಲಿ ಮುರುಡೇಶ್ವರ ದೇವಾಲಯದ ಮಹಾದೇವನ ಮೂರ್ತಿಯನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿರುವುದು ಗಮನ ಸೆಳೆಯುತ್ತದೆ.
ಇನ್ನೊಂದೆಡೆ, ರಾಜಗೋಪುರದ ಕಲಾತ್ಮಕ ವಿನ್ಯಾಸವನ್ನೂ ಸೂಕ್ಷ್ಮ ರೇಖಾಚಿತ್ರಗಳ ಮೂಲಕ ಮನೋಜ್ಞವಾಗಿ ಮೂಡಿಸಲಾಗಿದೆ. ವಂದನ ಅವರ ಈ ಚಿತ್ರಕಲೆ ಭಕ್ತರಲ್ಲಿ ಭಕ್ತಿ ಭಾವನೆ ಹೆಚ್ಚಿಸುವುದರ ಜೊತೆಗೆ, ಕಲಾ ಪ್ರೇಮಿಗಳಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.

More Stories
ಎಸ್.ಡಿ.ಎಂ ಸಂಭ್ರಮ-2026 ಹಳೆಯ ವಿದ್ಯಾರ್ಥಿಗಳ ಬೃಹತ್ ಸಮಾವೇಶ, ಏಪ್ರಿಲ್ 4 ಮತ್ತು 5 ರಂದು
ಅತಿವೇಗಕ್ಕೆ ಬೆಲೆ: ಸ್ಕೂಟರ್ಗಳ ನಡುವೆ ಡಿಕ್ಕಿ, ಇಬ್ಬರಿಗೆ ಗಾಯ
ಕೃಷಿ ಭೂಮಿಗೆ ಮಣ್ಣು ತುಂಬುವ ವಿಷಯ ವಿರೋಧ: ಮುಂಡಳ್ಳಿ ಪಂಚಾಯತ್ ಕಚೇರಿ ಮುತ್ತಿಗೆ, ಅಧಿಕಾರಿಗಳ ವಿರುದ್ಧ ಆಕ್ರೋಶ