ಹೊನ್ನಾವರ : ದೈಹಿಕ ಹಾಗೂ ಮಾನಸಿಕವಾಗಿ ಸದೃಡವಾಗಲೂ ಕ್ರೀಡೆ ಬಹುಮುಖ್ಯ ಪಾತ್ರ ವಹಿಸಲಿದ್ದು, ಇಳಿ ವಯಸ್ಸಿನಲ್ಲಿ ಕ್ರೀಡೆಯ ಸಾಧನೆಯು ಯುವಕರಿಗೆ ಪ್ರೇರಣೆಯಾಗಿದೆ ಎಂದು ನಿವೃತ್ತ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಪಿ.ಎಂ.ಹೆಗಡೆ ಅಭಿಪ್ರಾಯಪಟ್ಟರು.

ಹೊನ್ನಾವರ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿ.ಪಂ. ಉತ್ತರಕನ್ನಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲೆ ಮತ್ತು ತಾಲೂಕ ಸರ್ಕಾರಿ ನಿವೃತ್ತಿ ನೌಕರರ ಸಂಘ ಆಶ್ರಯದಲ್ಲಿ "ವಿಶ್ವ ಹಿರಿಯರ ನಾಗರಿಕ ದಿನಾಚರಣೆ, ವಿಶ್ವ ವಿಕಲಚೇತನರ ದಿನಾಚರಣೆ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತವು ವಿವಿಧ ಜಾತಿ ಮತಗಳಿಂದ ಕೂಡಿದೆ. ನಮ್ಮನ್ನಾಳುವ ಸರ್ಕಾರ ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗೆ ವಿಶೇಷ ಒತ್ತು ನೀಡುತ್ತಾ ಬಂದಿದೆ. ಹಲವು ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವತ್ತ ವಿಶೇಷ ಒತ್ತು ನೀಡುತ್ತಾ ಬಂದಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ ವನಿತಾ ದೇಶಭಂಡಾರಿ ಮಾತನಾಡಿ ನಾವು ಆರೋಗ್ಯವಂತಾರಾಗಿರಲು, ಕ್ರೀಡೆ, ವಾಯುವಿಹಾರದಲ್ಲಿ ಸದಾ ತೊಡಗಿರಬೇಕು. ಸಾಧನೆ ಮಾಡಲು ಯಾವುದೇ ಅಂಗವಿಲ್ಲ ಎನ್ನುವ ಅಡ್ಡಿ ಬೇಡ. ಎಲ್ಲವನ್ನು ಮೆಟ್ಟಿನಿಂತು ಸಾಧಿಸಬಹುದು ಎನ್ನುವ ಗುರಿ ಇಟ್ಟು ಜೀವನದಲ್ಲಿ ಮುನ್ನಡೆಯಿರಿ ಎಂದು ಸಲಹೆ ನೀಡಿದರು.
ವಿಶೇಷಚೇತನರಿಗೆ, ಹಿರಿಯ ನಾಗರಿಕರಿಗೆ ಆಯೋಜಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೆ ವೇಳೆ ಪುರಸ್ಕರಿಸಲಾಯಿತು. ವಿಕಲಚೇತನ ಸಂಘದ ಅಧ್ಯಕ್ಷ ವಿಜಯ ನಾಯ್ಕ, ನಿವೃತ್ತ ದ್ವಿತೀಯ ದರ್ಜೆ ಸಹಾಯಕರಾದ ಎಸ್.ಡಿ.ಫರ್ನಾಂಡಿಸ್ ಫಲಾನುಭವಿಗಳು ಮಾತನಾಡಿದರು.
ತಾಲೂಕ ನಿವೃತ್ತ ನೌಕರ ಸಂಘದ ಅಧ್ಯಕ್ಷ ಆರ್.ಪಿ. ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮನೋರಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜಿಲ್ಲಾ ಸಬಳಿಕರಣ ಅಧಿಕಾರಿ ರಾಘವೇಂದ್ರ ಭಟ್ ಸ್ವಾಗತಿಸಿ, ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ


More Stories
ನೀಲಗೋಡ ಯಕ್ಷಚೌಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಅಮವಾಸ್ಯೆ ವಿಶೇಷ ಪೂಜೆ: ಭಕ್ತರ ಕಷ್ಟ ಕಾರ್ಪಣ್ಯ ನೀಗಿಸುವ ಶಕ್ತಿ ಕ್ಷೇತ್ರ
ಹೊನ್ನಾವರ ತಾಲೂಕಾ ಒಕ್ಕಲಿಗರ ಸಂಘಕ್ಕೆ ನೂತನ ಆಡಳಿತ ಮಂಡಳಿ ಆಯ್ಕೆ: ಅಧ್ಯಕ್ಷರಾಗಿ ಕೃಷ್ಣ ಜಟ್ಟಿ ಗೌಡ ಅವಿರೋಧ ಆಯ್ಕೆ
ಶಿಕ್ಷಣದೊಂದಿಗೆ ಬದುಕಿನ ಕೌಶಲ್ಯ ಹಾಗೂ ವ್ಯವಹಾರವನ್ನು ಕಲಿಯುವುದು ಮುಖ್ಯ: ರೋ. ಡಾ. ಅನಂತಮೂರ್ತಿ ಶಾಸ್ತ್ರಿ