April 17, 2026

ಸಿ.ಎ ಕನಸು ಹೊತ್ತ ಗ್ರಾಮೀಣ ಪ್ರತಿಭೆ ಚಿನ್ನಯಿ ಶೆಟ್ಟಿ, ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ

ಹೊನ್ನಾವರ; ಸಾಧನೆಗೆ ಅಸಾಧ್ಯವಾದದು ಯಾವುದು ಇಲ್ಲ. ಆದರೆ ಸಾಧಿಸುವ ಛಲ ಬೇಕು, ಅಂತಹ ಸಾಧನೆಯ ಮೂಲಕ ಎಲ್ಲರ ಗಮನ ಸೆಳೆದ ಚಿನ್ನಯಿ ಶೆಟ್ಟಿ ಈ ಬಾರಿ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ತಾಲೂಕಿನ ಹಡಿನಬಾಳ ಸಮೀಪದ ಮಾಸುಕಲ್ಲಮಕ್ಕಿ ಎನ್ನುವ ಪುಟ್ಟ ಗ್ರಾಮದ ಗೀತಾ ಮತ್ತು ಮಂಜುನಾಥ ಶೆಟ್ಟಿ ಇವರ ಪುತ್ರಿಯಾದ ಚಿನ್ನಯಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ನಡೆಸಿ ಇತ್ತೀಚಿಗೆ ಬಂದ ಫಲಿತಾಂಶದಲ್ಲಿ 99.33 ಪ್ರತಿಶತ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.‌


ಗ್ರಾಮೀಣ ಪ್ರದೇಶದವರಾದ ಇವರ ತಂದೆ ಮಂಜುನಾಥ ಶೆಟ್ಟಿ ಹೊನ್ನಾವರ ಪಟ್ಟಣದಲ್ಲಿ 23 ವರ್ಷದಿಂದ ಚಿಕ್ಕದಾದ ಗೂಡಂಗಡಿಯಲ್ಲಿ ತಿಂಡಿ ತಯಾರಿಸಿ ಮಾರಾಟ ನಡೆಸುತ್ತಾ ಬಂದಿದ್ದಾರೆ. ತಾಯಿ ಗೀತಾ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಂಪತಿಗಳಿಗೆ ಒರ್ವರೆ ಪುತ್ರಿಯಾಗಿರುವ ಇವರು ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣವನ್ನು ಖರ್ವಾದ ಸಿದ್ದಿವಿನಾಯಕ ಶಾಲೆಯಲ್ಲಿ ಅಧ್ಯಯನ ನಡೆಸಿ ಎರಡು ವರ್ಷದ ಹಿಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 96% ಅಂಕ ಗಳಿಸಿ ಸಾಧನೆ ಮಾಡಿದರು. ಸಾಮಾನ್ಯವಾಗಿ ಇತ್ತೀಚಿನ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದವರು, ನೆರೆ ಜಿಲ್ಲೆಗೆ ವ್ಯಾಸಂಗ ಮುಂದುವರೆಸುವರ ಮಧ್ಯೆ ಹೊನ್ನಾವರದಲ್ಲೆ ಇವರು ವ್ಯಾಸಂಗ ಮುಂದುವರೆಸುವ ಬಯಕೆ ವ್ಯಕ್ತಪಡಿಸಿದರು. ಮಗಳ ಇಚ್ಚೆಯಂತೆ ಎಸ್.ಡಿ.ಎಂ. ಕಾಲೇಜಿಗೆ ಪದವಿಪೂರ್ವ ಶಿಕ್ಷಣದಲ್ಲಿ ವಾಣಿಜ್ಯ ವಿಭಾಗ ಆಯ್ಕೆ ಮಾಡಿಕೊಳ್ಳುವ ಮೂಲಕ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಇಂಗ್ಲೀಷ್ ವಿಷಯದಲ್ಲಿ 96 ಅಂಕ ಪಡೆದಿದ್ದು, ಉಳಿದೆಲ್ಲ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಕಾಲೇಜಿಗಷ್ಟೆ ಅಲ್ಲದೇ, ಜಿಲ್ಲೆಗೆ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಹಾಗೂರಾಜ್ಯಕ್ಕೆ ಐದನೇ ಸ್ಥಾನ ಪಡೆದಿರುವುದು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಸಿ.ಎ ಮಾಡುವ ಕನಸು ಹೊಂದಿದ್ದು ಮನೆಯವರ ಪೊತ್ಸಾಹ, ಸ್ನೇಹಿತರ ಸಹಕಾರ, ಉಪನ್ಯಾಸಕರ ಮಾರ್ಗದರ್ಶನವೇ ಈ ಸಾಧನೆಗೆ ಕಾರಣವಾಗಿದೆ ಎಂದು ವಾಹಿನಿಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!