ಗೋಕರ್ಣ, ಜೂನ್ 18: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ್ಕೇರಿ–ಕಡಮೆಗೆ ಹನೇಹಳ್ಳಿ ಕ್ಲಸ್ಟರ್ನ ಸಿ.ಆರ್.ಪಿ. ಶ್ರೀ ಕೇಶವ ನಾಯ್ಕ ಹಾಗೂ ಕೂಜಳ್ಳಿ ಕ್ಲಸ್ಟರ್ನ ಸಿ.ಆರ್.ಪಿ. ಶ್ರೀ ರಾಜೀವ ನಾಯಕ ಭೇಟಿ ನೀಡಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಪರಿಶೀಲಿಸಿದರು.
ಪರಿಶೀಲನಾ ಸಂದರ್ಭದಲ್ಲಿ ದ್ವಿಭಾಷಾ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ಸೇತುಬಂಧ ಕಾರ್ಯಕ್ರಮದ ಅನುಷ್ಠಾನ, ವಿದ್ಯಾರ್ಥಿಗಳ ಕಲಿಕಾ ಸಾಧನೆ ಹಾಗೂ ಸೃಜನಶೀಲತೆಯನ್ನು ಪ್ರತಿಬಿಂಬಿಸುವ ಕೃತಿಸಂಪುಟಗಳ (ಪೋರ್ಟ್ಫೋಲಿಯೊ) ನಿರ್ವಹಣೆ, ಪರಿವರ್ತನ ಅವಧಿಯ ವಿವಿಧ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಶಾಲೆಯ ಶೈಕ್ಷಣಿಕ ದಾಖಲಾತಿಗಳನ್ನು ತರಗತಿವಾರು ವೀಕ್ಷಿಸಿ ಮೌಲ್ಯಮಾಪನ ನಡೆಸಲಾಯಿತು.
ಇದೇ ವೇಳೆ ನೂತನವಾಗಿ ಆರಂಭಗೊಂಡಿರುವ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕಾ ಚಟುವಟಿಕೆಗಳು ಹಾಗೂ ಪ್ರಗತಿಯನ್ನು ಪರಿಶೀಲಿಸಿದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಒಟ್ಟಾರೆ ಶೈಕ್ಷಣಿಕ ವಾತಾವರಣ, ಶಿಕ್ಷಕರ ಬದ್ಧತೆ ಹಾಗೂ ವಿದ್ಯಾರ್ಥಿಗಳ ಕಲಿಕಾ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ ಅಧಿಕಾರಿಗಳು, ಮುಂದಿನ ದಿನಗಳಲ್ಲಿ ಕಲಿಕಾ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಲು ಅಗತ್ಯ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕಿ ಜ್ಯೋತಿ ಜಿ. ನಾಯಕ, ಶಿಕ್ಷಕರಾದ ರಾಜೀವ ಗಾಂವಕರ, ದೇವಯಾನಿ ನಾಯಕ, ನಯನಾ ಜೆ.ಪಿ., ವೈಶಾಲಿ ನಾಯಕ, ವಿದ್ಯಾ ಗೌಡ ಹಾಗೂ ಸುರಕ್ಷಾ ಕವಿಮನೆ ಉಪಸ್ಥಿತರಿದ್ದರು.

More Stories
ಬರ್ಗಿಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ
ಹಿರೇಗುತ್ತಿ ಹೈಸ್ಕೂಲ್ ವಿದ್ಯಾರ್ಥಿನಿ ಎನ್.ವಿ. ಇಂಪನಾ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ತೃತೀಯ ಸ್ಥಾನ
“ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ : ರವಿ ಎಚ್. ನಾಯಕ” 🌿🌍