October 5, 2025

ಭಟ್ಕಳ ಅರಣ್ಯದಲ್ಲಿ ನೂರಾರು ಗೋವುಗಳ ಬುರುಡೆ ಪತ್ತೆ, ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭ

ಭಟ್ಕಳ: ಭಟ್ಕಳ ತಾಲ್ಲೂಕಿನ ಮುಗ್ದಮ್ ಕಾಲೋನಿ ಬಳಿಯ ಬೆಳ್ನೆ ಅರಣ್ಯ (ಸರ್ವೇ ನಂ.74) ವ್ಯಾಪ್ತಿಯಲ್ಲಿ ನೂರಾರು ಗೋವುಗಳ ಬುರುಡೆ ಹಾಗೂ ಸಾವಿರಾರು ಎಲುಬುಗಳು ಪತ್ತೆಯಾಗಿರುವ ಘಟನೆ ಸ್ಥಳೀಯರಲ್ಲಿ ಅಚ್ಚರಿ ಹಾಗೂ ಆತಂಕ ಮೂಡಿಸಿದೆ.

ಮೊದಲಿಗೆ ಈ ಘಟನೆ ಹಳೆಯ ವಿಡಿಯೋ ಎಂದು ಕೆಲವರು ತಳ್ಳಿ ಹಾಕಿದರೂ, ಜಿಪಿಎಸ್ ಸಮಯ ನೊಂದಣಿಯಿAದ ಅದು ಇತ್ತೀಚಿನದ್ದೇ ಎಂದು ದೃಢಪಟ್ಟಿದೆ. ಹೀಗಾಗಿ ಹಿಂದೂಪರ ಸಂಘಟನೆಗಳ ಒತ್ತಾಯದ ಹಿನ್ನೆಲೆಯಲ್ಲಿ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಸ್ಥಳೀಯರು ಅರಣ್ಯ ಪ್ರದೇಶದಲ್ಲಿ ಅಸ್ಥಿಪಂಜರಗಳನ್ನು ಗಮನಿಸಿ ಹಿಂದೂ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದು, ಅವರು ಚಿತ್ರೀಕರಿಸಿದ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ಕೂಡಲೇ ಅಸ್ಥಿಪಂಜರಗಳನ್ನು ಅನಾಮಿಕರು ಬೇರೆಡೆ ಸಾಗಿಸಿರುವುದು ಬೆಳಕಿಗೆ ಬಂದಿದೆ. ಸಾಗಿಸುವ ವೇಳೆ ಪುರಸಭೆಯ ಕಸದ ಟ್ಯಾಂಕ್‌ನಲ್ಲಿಯೂ ಎಲುಬುಗಳನ್ನು ಎಸೆಯಲಾಗಿದೆ ಎಂಬುದು ದೃಢವಾಗಿದೆ.

ಘಟನೆಯ ಗಂಭೀರತೆಯನ್ನು ಮನಗಂಡು ರಾಶಿ ರಾಶಿ ಮೂಳೆ ಪತ್ತೆಯಾದ ಸ್ಥಳಕ್ಕೆ ಡಿವೈಎಸ್ ಪಿ ಮಹೇಶ ಕೆ,ನಗರ ಠಾಣೆ ಪಿಎಸೈ ನವೀನ ನಾಯ್ಕ,ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ,ಪಶುವೈದ್ಯಾಧಿಕಾರಿ,ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಈ ಸಂಬAಧ ಭಟ್ಕಳ ಉಪ-ವಲಯ ಅರಣ್ಯಾಧಿಕಾರಿ ಮಾರುತಿ ಗಣಪತಿ ಸೊರಗಾಂವಿ ಅವರು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ ಜಾನುವಾರುಗಳನ್ನು ಹತ್ಯೆ ಮಾಡಿ, ಉಳಿದ ಭಾಗಗಳನ್ನು ಅರಣ್ಯ ಪ್ರದೇಶದಲ್ಲಿ ಬಿಸಾಡಲಾಗಿದೆ. ಅರಣ್ಯ ಅಪರಾಧಗಳ ಅಂಶಗಳು ಕಂಡು ಬಂದಿರುವುದರಿAದ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಪರಾಧಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಕರಣದ ತನಿಖೆ ಪ್ರಾರಂಭವಾಗಿದೆ. ನಿಜಾಂಶ ಶೀಘ್ರದಲ್ಲೇ ಬಹಿರಂಗವಾಗಲಿದೆ.ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಹೇಳಿದ್ದಾರೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗೋವುಗಳ ಹತ್ಯೆ ನಡೆದು ದೀರ್ಘಕಾಲ ಯಾರಿಗೂ ಗೊತ್ತಾಗದಿರುವುದು ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ. ಇದರ ಹಿಂದೆ ಯಾರು? ಯಾರ ಬೆಂಬಲ ಎಂಬ ಕುತೂಹಲಕ್ಕೆ ಉತ್ತರ ತನಿಖೆಯಿಂದಲೇ ದೊರಕಬೇಕಿದೆ.

About The Author

error: Content is protected !!