
ಹೊನ್ನಾವರ: ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆ ಅನುಷ್ಠಾನಕ್ಕೆ ಸಂಬAಧಿಸಿದAತೆ ಗುರುವಾರ ಗೇರುಸೊಪ್ಪಾದ ಶ್ರೀ ಗುತ್ತಿಕನ್ನಿಕಾ ದೇವಾಲಯದ ಸಭಾಭವನದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಅಹವಾಲು ಆಲಿಕೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. 10,500 ಕೋಟಿ ರೂ, ವೆಚ್ಚದಲ್ಲಿ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ಶೇಖರಣೆ ಮಾಡುವ ಶರಾವತಿ ಪಂಪ್ ಸ್ಟೋರೇಜ್ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ವಿದ್ಯುತ್ ನಿಗಮ ಮುಂದಾಗಿದೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಯೋಜನೆಯ ಬಾಧಿತ ಪ್ರದೇಶವಾಗಿವೆ. ಸಾರ್ವಜನಿಕರ ಅಹವಾಲು ಆಲಿಕೆ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಕೆ.ಪಿಸಿ ಅಧಿಕಾರಿಗಳು ಯೋಜನೆಯ ಕುರಿತು ಮಾಹಿತಿ ನೀಡಿದರು.
ಗೇರುಸೊಪ್ಪಾ ಶ್ರೀಕ್ಷೇತ್ರ ವಿರಾಂಜನೇಯ ದೇವಸ್ಥಾನದ ಮಾರುತಿ ಗುರೂಜಿ ಮಾತನಾಡಿ ಸಾರ್ವಜನಿಕರ ಅಹವಾಲು ಕೇಳುವ ವ್ಯವದಾನ ಇದ್ದರೆ ಮಾತ್ರ ಸಭೆ ಕರೆಯಿರಿ. ಈ ಯೋಜನೆಯಿಂದ ಶರಾವತಿ ನದಿ ತೀರದ ನಿವಾಸಿಗಳ ಇಡೀ ಜೀವನ ಹೋಗತ್ತದೆ. ನೂರಾರು ವರ್ಷಗಳ ಕಾಲ ಬಾಳಿ ಬದುಕಿದವರ ಜೀವನಕ್ಕೆ ಹಾನಿಯಾಗಲಿದೆ. ಜನರ ಧ್ವನಿ ಹತ್ತಿಕ್ಕುವ ಕೆಲಸ ಸರ್ಕಾರ ಹಾಗೂ ಅಧಿಕಾರಿಗಳು ಮಾಡಬಾರದು. ಅಧಿಕಾರಿಗಳು ಸರ್ಕಾರಕ್ಕೆ ಜನರ ಅಹವಾಲನ್ನು ತಲುಪಿಸಬೇಕು. ನೀವು ಓದಿದ್ದು ಹರಿಕಥೆಯಂತಾಗಿದೆ. ಮೊದಲು ಕನ್ನಡದಲ್ಲಿ ಮುದ್ರಿಸಿ ಓದಲು ಜನಸಾಮನ್ಯರಿಗೆ ನೀಡಿ ಸಾರ್ವಜನಿಕ ಅಹವಾಲು ಸಭೆ ಕರೆಯಿರಿ. ಆ ನಂತರ ಸಭೆ ನಡೆಸಿ ಚರ್ಚಿಸೋಣ ಎಂದರು.
ಯೋಜನೆ 2006ರ ಪ್ರಾರಂಭದಲ್ಲಿ ನಾಲ್ಕು ಸಾವಿರ ಕೋಟಿ ಇದೀಗ 10 ಸಾವಿರ ಕೋಟಿ ತಲುಪಿದೆ. ಅಧಿಕಾರ ಒಂದು ಭಾಗವಾದರೆ ಮಾನವೀಯತೆ ದೃಷ್ಠಿಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳಿ. ಶಾಲೆ ಕಟ್ಟುವಾಗ ಮಾಲಿನ್ಯ ಮಂಡಳಿಯವರು ಸತಾಯಿಸುವವರು, ಯಾವ ಆಧಾರದ ಮೇಲೆ, ಕಾಂಚಾಣದ ಮೇಲೆ ಜಾರಿ ಮಾಡಿದ್ದೀರಿ. 120 ಮಿಲಿಯನ್ ಇತಿಹಾಸದ ಕಾಡು ಮರುಸೃಷ್ಠಿಸಲು ಸಾಧ್ಯವಿದೆಯಾ? ವಿದ್ಯುತ್ ಉತ್ಪಾದನೆಗೆ ಪರ್ಯಾಯ ವ್ಯವಸ್ಥೆ ಇದ್ದರೂ ಈ ಯೋಜನೆ ಜಾರಿ ಮಾಡುವ ಹಿಂದೆ ಕುರುಡು ಕಾಂಚಾಣದ ಕೈವಾಡದ ಅನುಮಾನ ಬರುತ್ತಿದೆ.
ಅಪರೂಪದ ಸಸ್ಯತಳಿಯಾದ ಬಿಲ್ವ ಪತ್ರೆ ಹೊಂದಿರುವ ಈ ಪ್ರದೇಶ ಯುನೆಸ್ಕೋ ಹಣ ಪಡೆದು ಅಭಿವೃದ್ದಿಯಾಗುತ್ತಿದೆ ಅವರಿಂದ ಯೋಜನೆ ಜಾರಿಗೆ ಪರವಾನಗಿ ಪಡೆದಿದೆಯಾ? ಈಗಾಗಲೇ ಕಾಡುಪ್ರಾಣಿಗಳು ಊರಿಗೆ ಬರುತ್ತಿದೆ. ಈ ಯೋಜನೆ ಜಾರಿಯಾದ ನಂತರ ಮತ್ತಷ್ಟು ಪ್ರಾಣಿಗಳು ಬರಲಿದೆ. ಗೇರುಸೊಪ್ಪಾ ಡ್ಯಾಂ ಸಿ.ಸಿ.ಆರ್. ಇಷ್ಟು ವರ್ಷ ಹಣ ಕೊಡದೇ ಈ ವರ್ಷ ಮೂವತ್ತಾರು ಕೋಟಿ ನೀಡುದು ಯಾಕೆ? ಎಂದು ಪ್ರಶ್ನಿಸಿದರು.
ಈ ಯೋಜನೆ ನಿರ್ಮಾಣಕ್ಕೂ ನನ್ನದು ಜಾಗ ಹೋಗಲಿದೆ. ನನ್ನ ಎದೆಯ ಮೇಲೆ ಮೊದಲು ಜೆಸಿಬಿ ಹಚ್ಚಿ ಮುಂದೆ ಹೋಗಬಹುದು. ಪ್ರಕೃತಿ ಹಾಗೂ ನೀರನ್ನು ಉಳಿಸಿಕೊಂಡು ಕರೆಂಟ್ ಉತ್ಪಾದನೆ ಮಾಡಲು ಯಾಕೆ ಸಾಧ್ಯವಿಲ್ಲ. ಒಂದು ಲಕ್ಷ ಅರವತ್ತು ಸಾವಿರಗಿಂತ ಹೆಚ್ಚಿನ ಎಕರೆ ಅಧಿಕ ಜಾಗ ಕೃಷಿ ಭೂಮಿ ಅಳವಡಿಸಿಕೊಂಡು ಈ ನದಿ ಇದೆ. ನಮ್ಮ ನೀರನ್ನು ಬೆಂಗಳೂರಿಗೆ ಹೋಗಲು ಎಂದಿಗೂ ಬಿಡುವುದಿಲ್ಲ. ಸರ್ಕಾರ ಹಾಗೂ ರಾಜಕೀಯ ಇಚ್ಚಾಶಕ್ತಿ ಕೊಡಲಿ. ಇರುವ ಪ್ರಕೃತಿಯನ್ಮು ಒಡೆದು ಮಾಡುವುದು ಅಭಿವೃದ್ದಿಯಲ್ಲ, ಸಮಾಜಕ್ಕೆ ಮಾಡುವ ದ್ರೋಹ ಎಂದು ಗಂಭೀರ ಆರೋಪಿಸಿದರು.
ಎಸ್. ಆರ್.ಎಲ್. ಮುಖ್ಯಸ್ಥ ವೆಂಕ್ರಟಮಣ ಹೆಗಡೆ ಮಾತನಾಡಿ ರೈಲ್ವೆ ಯೋಜನೆ, ಮತ್ತಿತರ ಯೋಜನೆ ಜಿಲ್ಲೆಯಲ್ಲಿ ಜಾರಿ ಮಾಡುವಾಗ ಭೂಕುಸಿತ ವಲಯ ಎಂದು ಬೊರ್ಡ್ ಹಾಕಿದ್ದರಿ ಇದಕ್ಕೆ ಭೂ ಕುಸಿತ ವಲಯ ಎನ್ನುವುದಕ್ಕೆ ಅನ್ವಯಿಸುದಿಲ್ಲವಾ ? ಎಂದು ಪ್ರಶ್ನಿಸಿ ಜಿಲ್ಲೆಯ ಜನರ ಬೇಡಿಕೆ ಈಡೇರಿಸಿ ಎಂದು ಒತ್ತಾಯಿಸಿದರು.
ಪರಿಸರವಾದಿ ಅಖಿಲೇಶ್ ಚಿಪಳಿಗೆ ಮಾತನಾಡಿ ಈ ಯೋಜನೆಯಿಂದ ಜಾಗ ಕಳೆದುಕೊಳ್ಳುವ 350 ಕುಟುಂಬದ 1050 ಜನರು ನಮಗೆ ವಿಷ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. "ಸತ್ಯಕ್ಕೆ ಹರಿಶ್ಚಂದ್ರ ಆದರೆ, ಸುಳ್ಳಿಗೆ ಕೆಪಿಸಿಯವರು". ಕೇಂದ್ರದಿAದ ಈ ಯೋಜನೆಗೆ ಅನುಮತಿ ಸಿಕ್ಕಿಲ್ಲ. ರಾಜ್ಯದ ಸಚೀವರು ಶಾಸಕರು ಎಲ್ಲಾ ಅನುಮತಿ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಸುಳ್ಳಿಗೆ ಬಲಿಯಾಗಬೇಡಿ. ನಾಗರಿಕ ಸಮಾಜಕ್ಕೆ ಹೊರೆಯಾಗಿ, ಜನರ ತೆರಿಗೆ ಹಣ ಲೂಟಿ ಮಾಡುವ ಯೋಜನೆಯಾಗಿದೆ. ಈ ಯೋಜನೆ ವಿರುದ್ದದ ಕೂಗು ವಿಧಾನಸೌದಕ್ಕೆ ತಲುಪಬೇಕು. ಯೋಜನೆ ಮಾಡಲು ಮುಂದಾಗುವವರ ಮಂತ್ರಿ ಕುರ್ಚಿ ಅಲುಗಾಡುವ ಮಟ್ಟಕ್ಕೆ ನಮ್ಮ ಧ್ವನಿ ಗಟ್ಟಿಯಾಗಬೇಕು ಎಂದು ಕರೆ ನೀಡಿದರು.
ಶಾಸಕ ದಿನಕರ ಶೆಟ್ಟಿ ಕೆಪಿಸಿ ಅಧಿಕಾರಿಗಳು ಪತ್ರಿಕೆಯಲ್ಲಿ ತಪ್ಪುಮಾಹಿತಿ ನೀಡುತ್ತಾ ಬಂದಿದ್ದೀರಿ. ಎಲ್ಲಿಯವರೆಗೂ ಈ ಯೋಜನೆ ನಿಲ್ಲಿಸುದಿಲ್ಲವೋ ಅಲ್ಲಿಯವರೆಗೆ ಹೋರಾಟ ನಡೆಯಲಿದೆ. ವಿದ್ಯುತ್ ಸೋರುವಿಕೆ ಬಂದ್ ಮಾಡಿದರೆ, ಮತ್ತೊಂದು ಯೋಜನೆಯ ಮಾಡಲು ಮುಂದಾಗುದಿಲ್ಲ. ಕೆಪಿಸಿ ವರ್ತನೆಗೆ ಈಗಾಗಲೇ ಜನ ರೋಸಿ ಹೋಗಿದ್ದಾರೆ. ಜನರ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ. ಪೊಲೀಸ್ ಮಿಲಿಟರಿ ತಂದರು ನಾವು ಬಗ್ಗುವುದಿಲ್ಲ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಶಾಸಕನಾಗಿ ಮುಂದೆ ನಿಂತು ಯೋಜನೆ ವಿರುದ್ದ ಹೋರಾಟಕ್ಕೆ ಬೆಂಬಲ ನೀಡುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ ವಿರೋಧ ನಡುವೆಯು ಕಾಮಗಾರಿ ನಡೆಸಲು ಮುಂದಾದರೆ, ದೊಡ್ಡ ಮಟ್ಟದ ವಿರೋಧ ಮಾಡುತ್ತೇವೆ ಎಂದು ಎಚ್ಚರಿಸಿದರು. ಈ ಹಿಂದೆ ಸ್ಥಳಿಯರಿಗೆ ಉದ್ಯೋಗ, ಕರೆಂಟ್ ನೀಡುತ್ತೇವೆ ಎಂದು ಆರಂಭಿಸಿ ಮೋಸ ಮಾಡಿದ್ದೀರಿ. ಇವರ ಕರ್ಮಕಾಂಡವನ್ನು ನಾವು ನೋಡಿದ್ದೇವೆ. ಕೆಪಿಸಿಯವರಿಗೆ ಕರೆಂಟ್ ಪ್ರೀ ನಾವು ದುಡ್ಡು ಕೊಟ್ಟರೂ ಕರೆಂಟ್ ನೀಡುವುದಿಲ್ಲ ನಮ್ಮನ್ನು ಮಂಗ ಮಾಡಬೇಡಿ ಎಂದರು.
ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ ನಮ್ಮ ಜಿಲ್ಲೆಯ ಸಂಪತ್ತನು ರಾಜ್ಯಕ್ಕೆ ಕೊಟ್ಟಿದ್ದೇವೆ. ಜಿಲ್ಲೆಯ ಮೇಲೆ ಮಾರಕವಾದ ಯೋಜನೆ ತಂದು ಬರಡು ಮಾಡಿದ್ದಾರೆ. ಈ ಯೋಜನೆಗೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಯೋಜನೆಯ ವಿರುದ್ದ ರೈತ ಮುಖಂಡ ಕೊಡಿಹಳ್ಳಿ ಚಂದ್ರಶೇಖರ, ಅರಣ್ಯ ಅತಿಕ್ರಮಣ ಹೋರಾಟಗಾರರಾದ ರವೀಂದ್ರನಾಥ ನಾಯ್ಕ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಗೊವಿಂದ ನಾಯ್ಕ ಗೇರುಸೊಪ್ಪಾ, ಸೇರಿದಂತೆ ವಿವಿಧ ಪಕ್ಷದ ಮುಖಂಡರು, ಸಂಘಟನೆಯ ಪ್ರಮುಖರು, ಸಾರ್ವಜನಿಕರು ಯೋಜನೆಯಿಂದಾಗುವ ಹಾನಿಯ ಕುರಿತು ಅಹವಾಲು ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ ವಿವಿಧ ಪಕ್ಷದ ಮುಖಂಡರು, ಹೋರಾಟಗಾರರು, ಕಾಲೇಜು ವಿದ್ಯಾರ್ಥಿಗಳು, ಪರಿಸರವಾದಿಗಳು ಸುಮಾರು ಐದು ಸಾವಿರದಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು, ತಾಲೂಕಿನ ಕಂದಾಯ ಪೊಲಿಸ್ ಸೇರಿದಂತೆ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
ಅತಿವೇಗದ ಬಸ್ ಡಿಕ್ಕಿ, ಸ್ಕೂಟಿ ಸವಾರ ಸ್ಥಳದಲ್ಲೇ ದುರ್ಮರಣ
ಭಟ್ಕಳದ ದರ್ಶನ ನಾಯ್ಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟಕ್ಕೆ ಭಟ್ಕಳದ ಕೀರ್ತಿ
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ