October 6, 2025

ಮುರ್ಡೇಶ್ವರದಲ್ಲಿ ಸಮುದ್ರದ ಅಲೆಗೆ ಎಂಟು ವರ್ಷದ ಬಾಲಕ ಬಲಿ

ಭಟ್ಕಳ: ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಕುಟುಂಬದ ಸಮುದ್ರದ ಅಲೆಯಲ್ಲಿ ಸಿಲುಕಿ ಎಂಟು ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡ ದುರ್ಘಟನೆ ಸೋಮವಾರ ನಡೆದಿದೆ.

ಬೆಂಗಳೂರು ಬಿದರಳ್ಳಿಯ ಕೆ. ರವಿ ರೆಡ್ಡಿ (39) ತಮ್ಮ ಕುಟುಂಬ ಸಮೇತರಾಗಿ ಸೆಪ್ಟೆಂಬರ್ 21ರ ರಾತ್ರಿ ಮುರ್ಡೇಶ್ವರಕ್ಕೆ ಬಂದು ತಂಗಿದ್ದರು. ಸೋಮವಾರ ಬೆಳಿಗ್ಗೆ ದೇವಸ್ಥಾನದ ಎಡಬದಿಯ ಕಡಲ ತೀರದಲ್ಲಿ ಆಟವಾಡುತ್ತಿದ್ದಾಗ ಭಾರಿ ಅಲೆ ಅಪ್ಪಳಿಸಿತು. ಅಲೆಯಲ್ಲಿ ಸಿಲುಕಿದ ವಸಂತಾ ಕೆ. (27) ಅಸ್ವಸ್ಥಳಾಗಿ ಆರ್.ಎನ್.ಎಸ್. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ರವಿ ರೆಡ್ಡಿಯ ಕಿರಿಯ ಮಗ ಕೃತೀಕ (8) ಅಲೆಯ ಹೊಡೆತಕ್ಕೆ ತತ್ತರಿಸಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಘಟನೆಯ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

About The Author

error: Content is protected !!