October 6, 2025

ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ವಿದ್ಯಾರ್ಥಿಗಳ ವಾರ್ಷಿಕ ಬಹುಮಾನ ವಿತರಣೆ ಮತ್ತು ದೀಪದಾನ ಸಮಾರಂಭ

ಭಟ್ಕಳ; ಶಿಕ್ಷಕರಾದವರು, ತಾವು ಪಾಠ ಮಾಡುವ ವಿಷಯದಲ್ಲಿ ಪ್ರಭುದ್ಧತೆಯನ್ನು ಹೊಂದಿದರೆ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಹೊನ್ನಾವರದ ಎಂ.ಪಿ.ಇ ಸೊಸೈಟಿ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲರಾದ ಡಾ. ವಿಜಯಲಕ್ಷಿö್ಮ ನಾಯ್ಕ ಹೇಳಿದರು. ಅವರು ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಬಿ.ಎಡ್ ವಿದ್ಯಾರ್ಥಿಗಳ ವಾರ್ಷಿಕ ಬಹುಮಾನ ವಿತರಣೆ ಮತ್ತು ದೀಪದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಹಗ್ಗದಿಂದ ಬಾವಿಯಲ್ಲಿ ಇಳಿಬಿಟ್ಟ ಕೊಡ ನೀರು ತುಂಬಿಸಿಕೊಳ್ಳುವಾಗ ಬಾಗುವಂತೆ, ತುಂಬಿದ ನೀರನ್ನು ಬಿಂದಿಗೆಗೆ ಹಾಕುವಾಗ ಮತ್ತೆ ಬಾಗುವಂತೆ ಶಿಕ್ಷಕರು ಜ್ಞಾನವನ್ನು ಹೊಂದಿ ಪರಿಪೂರ್ಣರಾಗಿರಬೇಕು ಎಂದು ಹೇಳಿದರು.

ಭಟ್ಕಳ ಎಜುಕೇಶನ್ ಟ್ರಸ್ಟಿನ ಟ್ರಸ್ಟಿ ಸುಮಿತ್ರಾ ಕೌಶಿಕ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಭಾಗ ಉಪಸ್ಥಿತರಿದ್ದರು. ಉಪನ್ಯಾಸಕ ನಾಗರಾಜ ಮಡಿವಾಳ ವರದಿ ವಾಚಿಸಿದರು. ಉತ್ತಮ ಭಾವಿಶಿಕ್ಷಕಿ ಪ್ರಶಸ್ತಿಯನ್ನು ಲಕ್ಷಿö್ಮ ಪಡೆದುಕೊಂಡರೆ, ವಿಶ್ರಾಂತ ಪ್ರಾಂಶುಪಾಲ ಡಾ. ಅಜಾತಸ್ವಾಮಿ ಅವರು ಅವರ ತಂದೆಯವರಾದ ಎಚ್.ಎಂ.ಜಿ ಮೂರ್ತಿ ಅವರ ಸ್ಮರಣಾರ್ಥ ನೀಡುವ ಉತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಪ್ರವೀಣ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನಾಗರಾಜ ಮಡಿವಾಳ ಪಡೆದುಕೊಂಡರು. ಪ್ರಿಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಪ್ರಿಯಾಂಕಾ ದೇವಾಡಿಗ ಸ್ವಾಗತಿಸಿದರು, ಸಿಂಧೂ ಖಾರ್ವಿ ವಂದಿಸಿದರು. ಸಂಕಲ್ಪ, ಪ್ರತಿಕ್ಷಾ, ನಾಗರತ್ನ, ಭಾರ್ಗವಿ, ಸಿಂಧೂ ಆಚಾರ್ಯ ಮತ್ತು ಅನಿಲ ನಿರೂಪಿಸಿದರು.

About The Author

error: Content is protected !!