October 7, 2025

ವಂದೂರು ವ್ಯವಸಾಯ ಸೇವಾ ಕೇಂದ್ರದ ವಾರ್ಷಿಕ ಸರ್ವಸಾಧಾರಣ ಸಭೆ

ಹೊನ್ನಾವರ: ಸಂಘದ ಅಧ್ಯಕ್ಷ ವಿ.ಕೆ.ವಿಶಾಲ ಕಳೆದ ವರ್ಷ ಸಂಘದ ಸದಸ್ಯರ ಸಂಖ್ಯೆ 822 ಇದ್ದು, ಶೇರು ಬಂಡವಾಳ ಕಳೆದ ಅವಧಿಯಲ್ಲಿ 61,41, 361 ರೂಪಾಯಿ ಇದ್ದು ವರದಿ ಸಾಲಿನಲ್ಲಿ 71,68,946 ರೂಪಾಯಿ ಆಗಿ 10,22,585 ರೂಪಾಯಿ ಹೆಚ್ಚಳವಾಗಿದೆ. ಸದಸ್ಯರ ಠೇವು ಕೂಡಾ ಕಳೆದ ವರ್ಷಕ್ಕಿಂತ 3,35,910 ರೂಪಾಯಿ ಹೆಚ್ಚಿಗೆ ಸಂಗ್ರಹವಾಗಿದೆ. 2024/2025 ನೇ ಸಾಲಿನ ಆಡಿಟ್ ವರದಿಯ ಪ್ರಕಾರ ವರದಿ ಸಾಲಿನಲ್ಲಿ 9,21,501 ರೂಪಾಯಿ ಸಂಘಕ್ಕೆ ಲಾಭವಾಗಿದೆ ಎಂದರು.


ನೂತನವಾಗಿ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿರುವ ದರ್ಶನ್ ಭಾಗ್ವತ ವಾರ್ಷಿಕ ವರದಿಯನ್ನು ಮಂಡಿಸಿದರು. ಸದಸ್ಯರು ನೀಡಿದ ಅಭಿಪ್ರಾಯವನ್ನ ಸಂಗ್ರಹಿಸಿ ಕಾರ್ಯಗತಗೊಳಿಸುವ ಭರವಸೆ ನೀಡಿದರು. ವಾರ್ಷಿಕ ಸಭೆಯ ನಂತರ ಸಹಕಾರಿ ಸಂಘದಲ್ಲಿ ರೇಶನ್ ವಿತರಕರಾಗಿ ತಮ್ಮ ವೃತ್ತಿಯನ್ನ ಆರಂಭಸಿ, ಕಾರ್ಯದರ್ಶಿಯಾಗಿ ಸೊಸೈಟಿಯನ್ನು ಒಂದು ಕಪ್ಪು ಚುಕ್ಕೆಯೂ ಇಲ್ಲದೆ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದ ಹಾಗು ಜನಸ್ನೇಹಿಯಾಗಿ ಕಳೆದ 30 ವರ್ಷಗಳಿಂದ ಜನಸಾಮಾನ್ಯ ಕಷ್ಟಗಳಿಗೆ ಸ್ಪಂದಿಸುತ್ತಾ ಸೇವೆ ಸಲ್ಲಿಸಿದ ನಿವೃತ್ತ ಕಾರ್ಯದರ್ಶಿ ಎಂ.ಜಿ.ಹೆಗಡೆ ನೀಲ್ಕೋಡ್ ಅವರನ್ನ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ವಿದ್ವಾನ್ ವಿಘ್ನೇಶ್ವರ ಶಾಸ್ತ್ರಿ ಬುಚ್ಚನ್ ಅವರು ಅಭಿನಂದನಾ ನುಡಿಗಳನ್ನಾಡಿದರು. ಕಡ್ಲೆ ಗ್ರಾ.ಪಂ. ಅಧ್ಯಕ್ಷರು ಸುಬ್ರಹ್ಮಣ್ಯ ಭಟ್, ಸಹಕಾರಿ ಸಂಘದ ಮಾಜಿ ಅಧ್ಯಕ್ಷ ರಾಮಚಂದ್ರ ಭಾಗ್ವತ್, ಕೆ.ಡಿ.ಸಿ.ಸಿ ಬ್ಯಾಂಕ್ ಆರ್ಥಿಕ ಪ್ರತಿನಿಧಿ ಕೃಷ್ಣಾನಂದ ಭಟ್, ವಿಶ್ವನಾಥ ಹೆಗಡೆ, ವಿ.ಡಿ.ಹೆಗಡೆ , ಗೋವಿಂದ ಗೌಡ ವಂದೂರ, ಗಜಾನನ ಮಡಿವಾಳ , ದರ್ಶನ ಭಾಗ್ವತ ಸೇರಿದಂತೆ ಹಲವರು ಎಂ.ಜಿ.ಹೆಗಡೆಯವರ ಸೇವಾ ಅವಧಿಯನ್ನ ಶ್ಲಾಘಿಸಿದರು.


ಸೇವಾ ನಿವೃತ್ತ ಎಂ.ಜಿ.ಹೆಗಡೆಯವರು ತನ್ನ ಸೇವಾ ಅವಧಿಯ ಕರಿತು ಮಾತನಾಡಿ ಸರ್ವರನ್ನ ಅಭಿನಂದಿಸಿದರು. ಸಂಘದ ಉಪಾಧ್ಯಕ್ಷ ಸತೀಶ ಭಟ್, ಸದಸ್ಯರಾದ, ಪರಮೇಶ್ವರ ಭಟ್, ಶ್ರೀಪಾದ ಭಟ್,ಗಣಫತಿ ಹೆಗಡೆ,ಮಂಜುನಾಥ ನಾಯ್ಕ, ಮಂಜುನಾಥ ಗೌಡ, ಇನಾಸ್ ರೋಡ್ರಗೀಸ್, ಸುಮಾ ಭಟ್, ನಾಗಿ ಮುಕ್ರಿ ಸಿಬ್ಬಂದಿಗಳು ಊರಿನ ಪ್ರಮುಖರು, ಉಪಸ್ಥಿತರಿದ್ದರು. ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರ್ವಹಿಸಿದರು.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!