October 5, 2025

ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ “ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ” ಕಾರ್ಯಕ್ರಮ.

ಮುರ್ಡೇಶ್ವರ : ದಿನಾಂಕ 26.09.2025 ಶುಕ್ರವಾರದಂದು ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ್ ರೋಶನಿ ಆಡಿಟೋರಿಯಂ ನಲ್ಲಿ ಸಪ್ತಮಿ ಮಾತಾ ಸರಸ್ವತಿಯ ಸ್ಥಾಪನಾ ದಿನ ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮ ವಿಜೃಂಭಣೆಯಿAದ ನಡೆಯಿತು.
ಕಾರ್ಯಕ್ರಮಕ್ಕೆ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ಆಡಳಿತ ನಿರ್ದೇಶಕಿಯಾದ ಡಾ.ಪುಷ್ಪಲತಾ ಮಂಕಾಳ್ ವೈದ್ಯರವರು ಶಾರದಾ ಮೂರ್ತಿಗೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮ ಪ್ರಾರಂಭಿಸಿದರು. ವಿದ್ಯಾರ್ಥಿಗಳಿಂದ ದೇವರ ಪ್ರಾರ್ಥನೆ ಭಕ್ತಿಗೀತೆಗಳು ಜರುಗಿದವು, ಅಕ್ಷರಾಭ್ಯಾಸ ಕಾರ್ಯಕ್ರಮವನ್ನು 1 ವರ್ಷ ಮೇಲ್ಪಟ್ಟ ಹಾಗೂ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕಲ್ಪಿಸಲಾಗಿದ್ದು ನೂರಾರು ಮಕ್ಕಳು ಹಾಗೂ ಪೋಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

About The Author

error: Content is protected !!