November 19, 2025

ಅನಿರ್ಧಿಷ್ಟಾವಧಿ ಧರಣಿ 17ನೇ ದಿನಕ್ಕೆ ಕಾಲಿಟ್ಟಿದ್ದು, ಪಂಜಿನ ಮೆರವಣಿಗೆ

ಬೈಂದೂರು : ಈಗಿರುವ ಪಟ್ಟಣ ಪಂಚಾಯತಿನಿAದ ಗ್ರಾಮೀಣ ಪ್ರದೇಶಗಳನ್ನು ಬೇರ್ಪಡಿಸಿ ಗ್ರಾಮ ಪಂಚಾಯತಿ ರಚನೆ ಮಾಡಬೇಕೆಂದು ಆಗ್ರಹಿಸಿ ರೈತ ಸಂಘ ಬೈಂದೂರು ಇದರ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ 17ನೇ ದಿನಕ್ಕೆ ಕಾಲಿಟ್ಟಿದ್ದು ಬುಧವಾರ ಸಂಜೆ ಬೈಂದೂರು ಸೇನೇಶ್ವರ ದೇವಸ್ಥಾನದಿಂದ ಬೈಂದೂರು ಮಿನಿ ವಿಧಾನ ಸೌಧ ತನಕ ಪಂಜಿನ ಮೆರವಣಿಗೆ ನಡೆಯಿತು.

ಬೈಂದೂರು ರೈತರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪಂಚಿನ ಮೆರೆವಣಿಗೆ ಉದ್ದೇಶಿಸಿ ಮಾತನಾಡಿ, ಇಂದು ನಾವು ರೈತರು 17 ದಿನ ದಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದು, ಜಿಲ್ಲಾಧಿಕಾರಿಯವರು, ಸರ್ಕಾರದ ಜನ ಪ್ರತಿನಿಧಿಗಳು ನಮ್ಮ ಹೋರಾಟಕ್ಕೆ ಯಾವುದು ರೀತಿಯಲ್ಲಿ ಸ್ಪoದಿಸುತ್ತಿಲ್ಲ, ಇದರಿಂದ ನಾವು ಇಂದಿನಿAದ ಉಗ್ರ ಹೋರಾಟ ಪಂಜಿನ ಮೆರವಣಿಗೆ ನಡೆಸುತ್ತೀದ್ದೇವೆ. ಮುಂದಿನ ದಿನಗಳಲ್ಲಿ ನಾವು ತಾಲೂಕು ಕಛೇರಿ, ಪಟ್ಟಣ ಪಂಚಾಯತ್ ಕಛೇರಿ ಬಿಗ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ , ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಧರ್ಮ ಗುರು ಸನ್ನಿ ಜೋಶ್ ರಘುರಾಮ ಕೆ.ಪೂಜಾರಿ, ಸುಭಾಷ ಗಂಗನಾಡು, ಮ್ಯಾಥ್ಯ ಕೆ.ಎಸ್, ರವೀಂದ್ರ ಶೆಟ್ಟಿ ಪಟೇಲ್, ಹೆರಿಯ ಪೂಜಾರಿ, ಚಿಕ್ಕು ಪೂಜಾರಿ, ಪದ್ಮಾಕ್ಷ ಗೋಳಿಬೇರು, ಕೃಷ್ಣ ದೇವಾಡಿಗ, ಸುರ್ ಪೂಜಾರಿ, ದೊಟ್ಟಯ್ಯ ಪೂಜಾರಿ, ವೆಂಕಟ ಪೂಜಾರಿ ಶಿರೂರು, ಗ್ರಾಮೀಣ ಭಾಗದ ರೈತರು ಪಂಜಿನ ಮೆರವಣಿಗೆ ಯಲ್ಲಿ ಭಾಗವಹಿಸಿದ್ದರು.

ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೀರಭದ್ರ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.
ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು

About The Author

error: Content is protected !!