ಭಟ್ಕಳ: ಮಂಗಳೂರುದಿAದ ಗೋವಾ ತಿವಿಂಗೆ ಪ್ರಯಾಣಿಸುತ್ತಿದ್ದ ಕುಟುಂಬದೊಬ್ಬರಿಗೆ ರೈಲಿನಲ್ಲಿ ಕಳ್ಳತನದ ಘಟನೆ ಸಂಭವಿಸಿದೆ.
ಸುದರ್ಶನ್ ಭಟ್ಟರು ಉಧ್ನಾ ವಿಶೇಷ ರೈಲು-09058 ನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದಾಗ, ಮಂಗಳೂರು ಮತ್ತು ಕುಮಟಾ ನಿಲ್ದಾಣಗಳ ನಡುವೆ, ಯಾರೋ ಕಳ್ಳರು ಅವರ ತಾಯಿಯ ವೆನಿಟಿ ಬ್ಯಾಗ್ ಕಳವು ಮಾಡಿಕೊಂಡಿದ್ದಾರೆ. ಬ್ಯಾಗಿನಲ್ಲಿದ್ದವು 63 ಗ್ರಾಂ ಚಿನ್ನದ ಒಡವೆ (ರೂ 3,60,000), ರೂ 30,000 ನಗದು, ಮತ್ತು ರೂ 25,000 ಮೌಲ್ಯದ ಎರಡು ಮೊಬೈಲ್‌ಗಳು, ಒಟ್ಟು ರೂ 4,15,000 ಮೌಲ್ಯದ ವಸ್ತು ಕಳವುಗೊಂಡಿದೆ.
ಫಿರ್ಯಾದಿ ಸುದರ್ಶನ್ ತಂದೆ ಸೂರ್ಯನಾರಾಯಣ ಭಟ್ಟ, ಮೂಲತಃ ಪುತ್ತೂರು ತಾಲ್ಲೂಕಿನ ಅಂಜೆಕಾವು ಇವರು ಭಟ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ