
ಭಟ್ಕಳ: ನಕಲಿ ಫೇಸ್‌ಬುಕ್ ಖಾತೆಗಳನ್ನು ಬಳಸಿ ಸಾರ್ವಜನಿಕರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ವಿರುದ್ಧ ಸುಳ್ಳು ಹಾಗೂ ಅವಹೇಳನಕಾರಿ ಪೋಸ್ಟ್ಗಳು ಮತ್ತು ವಿಡಿಯೋ ಹಂಚಿದ ಆರೋಪದ ಮೇಲೆ ಮುರ್ಡೇಶ್ವರ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

ಮೇ 29, 2025 ರಂದು ಮಂಜುನಾಥ ನಾಯ್ಕ ಎಂಬಾತ ಠಾಣೆಗೆ ಬಂದು, “ತೇಜು ನಾಯ್ಕ ಹೊನ್ನಾವರ” ಎಂಬ ನಕಲಿ ಖಾತೆಯಿಂದ ತನ್ನ ಬಗ್ಗೆ ಅಸಭ್ಯ ಶಬ್ದಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ದೂರು ನೀಡಿದ್ದರು. ಇದರ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.

ಇದೇ ರೀತಿಯಲ್ಲಿ, ಜೂನ್ 6, 2025ರಂದು ನಾಗಪ್ಪ ನಾಯ್ಕ ಅವರು ಠಾಣೆಗೆ ಹಾಜರಾಗಿ, “ತೇಜು ನಾಯ್ಕ ಹೊನ್ನಾವರ” ಮತ್ತು “ವಂದನಾ ಪೂಜಾರಿ” ಎಂಬ ನಕಲಿ ಖಾತೆಗಳ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ವಿರುದ್ಧ 1.29 ನಿಮಿಷಗಳ ಸುಳ್ಳು ಹಾಗೂ ಅವಹೇಳನಕಾರಿ ವಿಡಿಯೋ ಹಂಚಲಾಗಿದ್ದು, ಇದರಿಂದ ಸಚಿವರಿಗೆ ಮುಜುಗರ ಉಂಟಾಗಿದೆ ಎಂದು ದೂರಿದ್ದರು. ಈ ಕುರಿತು ಮತ್ತೊಂದು ಪ್ರಕರಣ ದಾಖಲಾಗಿತ್ತು.
ತನಿಖೆಯ ಬಳಿಕ, ಆರೋಪಿತನಾಗಿ ಪುರಂದರ (37), ತಂದೆ ಮಂಜುನಾಥ ನಾಯ್ಕ, ಮೂಲತಃ ದೊಡ್ಡಬಲಸೆ, ಬೈಲೂರ, ಭಟ್ಕಳ ತಾಲೂಕಿನವನಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್‌ಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ.
ಮುರ್ಡೇಶ್ವರ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

More Stories
ಬ್ಯಾಂಕ್ ಎಟಿಎಂ ಭದ್ರತೆ: ಮುರುಡೇಶ್ವರ ಠಾಣೆಯಲ್ಲಿ ಮುನ್ನೆಚ್ಚರಿಕಾ ಸಭೆ
ಮುರುಡೇಶ್ವರ ಸಮುದ್ರದಲ್ಲಿ ಅಲೆಗಳಿಗೆ ಸಿಲುಕಿ ಪ್ರವಾಸಿಗ ಸಾವು
ತಾಲೂಕಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೀನಾ ವೈದ್ಯ ಕಾಲೇಜು ವಿದ್ಯಾರ್ಥಿಗಳ ಸಾಧನೆ.