November 19, 2025

ಮಾವಳ್ಳಿ1 ರುದ್ರಭೂಮಿಗೆ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆ

ಭಟ್ಕಳ:ಮುರುಡೇಶ್ವರ ಮಾವಳ್ಳಿ1ರ ಹಿಂದು ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೀರು ಬೆಳಕು, ಸ್ವಚ್ಛತೆ ಹಾಗೂ ನೆರಳಿನ ಮರಗಳ ವ್ಯವಸ್ಥೆ ಮಾಡುವಂತೆ ಶ್ರೀರಾಮ ಸೇನೆ ಮುಖಂಡರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಮಾರ್ ಮೊಗೇರ್ ಅವರಿಗೆ ಮನವಿ ಸಲ್ಲಿಸಿದರು.

ಮಾವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 1 ಏಕರೆ 20 ಗುಂಟೆ ಜಾಗದಲ್ಲಿರುವ ದೊಡ್ಡ ರುದ್ರಭೂಮಿ 2013ರಲ್ಲಿ ಮುರುಡೇಶ್ವರ ಲಯನ್ಸ್ ಕ್ಲಬ್ ಹಾಗೂ ಪರಿಸರ ಸಂರಕ್ಷಣಾ ಸಮಿತಿಯವರ ಸಹಕಾರದಿಂದ ಚಿತಾಗಾರ ಕಟ್ಟಡ ಮತ್ತು ತಂಗುದಾಣಗಳೊAದಿಗೆ ಸಾರ್ವಜನಿಕರಿಗೆ ಹಸ್ತಾಂತರಗೊAಡಿತ್ತು.

ಆದರೆ ಇದೀಗ ನೀರಿನ ನಳವಿದ್ದರೂ ನೀರು ಬರದೇ ಇರುವುದರಿಂದ ಹಾಗೂ ವಿದ್ಯುತ್ ದೀಪಗಳು ಹಾಳಾಗಿರುವುದರಿಂದ ಶವಸಂಸ್ಕಾರಕ್ಕೆ ಬರುವವರಿಗೆ ತೊಂದರೆ ಆಗುತ್ತಿದೆ. ಜೊತೆಗೆ ಸಮಯೋಚಿತ ಸ್ವಚ್ಛತೆ ಕೊರತೆ ಸಮಸ್ಯೆಯನ್ನು ಹೆಚ್ಚಿಸಿದೆ ಎಂದು ಗ್ರಾಮಸ್ಥರು ವಿಷಾದ ವ್ಯಕ್ತಪಡಿಸಿದ್ದಾರೆ.

ಸೋಲಾರ್ ದೀಪ ಅಳವಡಿಸಿದರೆ ನಿರಂತರ ಬೆಳಕು ದೊರೆಯುತ್ತದೆ. ಬಿಸಿಲಿನಲ್ಲಿ ನೆರಳಿಗಾಗಿ ಮರಗಳನ್ನು ನೆಡುವುದು ಅವಶ್ಯ. ಸುಟ್ಟ ವಸ್ತುಗಳನ್ನು ಅರೆಬರೆ ಬಿಸಾಡದಂತೆ ಸೂಚನಾ ಫಲಕ ಅಳವಡಿಸಬೇಕು ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಮುರುಡೇಶ್ವರ ಪರಿಸರದ ಹಿತದೃಷ್ಟಿಯಿಂದ ಈ ಸಲಹೆಗಳನ್ನು ತಕ್ಷಣ ಕಾರ್ಯರೂಪಕ್ಕೆ ತರಬೇಕು ಎಂದು ಶ್ರೀರಾಮ ಸೇನೆ ಉತ್ತರ ಪ್ರಾಂತ ಉಪಾಧ್ಯಕ್ಷ ಜಯಂತ್ ಜಿ ನಾಯ್ಕ ಒತ್ತಾಯಿಸಿದರು. ಈ ವೇಳೆ ಶ್ರೀರಾಮ ಸೇನೆ ಪ್ರಮುಖರಾದ ಸಂದೀಪ್ ನಾಯ್ಕ, ರಾಮದಾಸ್ ನಾಯ್ಕ ಉಪಸ್ಥಿತರಿದ್ದರು.

About The Author

error: Content is protected !!