November 19, 2025

ಹನೀಪಾಬಾದ್‌ನಲ್ಲಿ ಓ.ಸಿ ಮಟಕಾ ಆಟ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ

ಭಟ್ಕಳ: ಹನೀಪಾಬಾದ್ ಪೆಟ್ರೋಲ್ ಪಂಪ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದ ಇಬ್ಬರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿಗಳಾದ ಮಂಜುನಾಥ ತಂದೆ ನಾರಾಯಣ ನಾಯ್ಕ ,ಕೋಟೇಬಾಗಿಲು ಶಿರಾಲಿ ಹಾಗೂ ರೋಹಿದಾಸ ತಂದೆ ಭೈರಪ್ಪ ನಾಯ್ಕ,ಚಿತ್ರಾಮರ,ಇವರು ಓ.ಸಿ ಮಟಕಾದಿಂದ ಸಂಗ್ರಹಿಸಿದ ಹಣವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರೆAಬ ಗುಪ್ತ ಮಾಹಿತಿಯ ಆಧಾರದಲ್ಲಿ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ದಾಳಿ ನಡೆಸಿದ್ದಾರೆ. ನಗದು ಹಾಗೂ ಇತರೆ ವಸ್ತುಗಳು ವಶಕ್ಕೆ ಪಡೆದ್ದು ಕೊಂಡಿದ್ದಾರೆ.

About The Author

error: Content is protected !!