ಭಟ್ಕಳ: ಸ್ಥಳೀಯ ಬ್ಯಾಂಕ್‌ಗಳು, ಎಟಿಎಂ ಕೇಂದ್ರಗಳು, ಸಹಕಾರಿ ಸಂಘಗಳು ಹಾಗೂ ಹಣಕಾಸು ಸಂಸ್ಥೆಗಳ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಸಭೆ ನಡೆಯಿತು.

ವಿವಿಧ ಸಂಸ್ಥೆಗಳ ಮ್ಯಾನೇಜರ್‌ರನ್ನು ಠಾಣೆಗೆ ಕರೆಯಿಸಿ ಮಾತನಾಡಿದ ಪೊಲೀಸರು, ಆಸ್ತಿ ಪಾಸ್ತಿ ರಕ್ಷಣೆಗೆ ಅಗತ್ಯ ಕ್ರಮಗಳನ್ನು ತಕ್ಷಣ ಜಾರಿಗೊಳಿಸಲು ಮುರುಡೇಶ್ವರ ಠಾಣೆ ಪಿಎಸೈ ಹನುಮಂತ ಬಿರಾದಾರ ಸೂಚಿಸಿದರು.
ಪೊಲೀಸರು ನೀಡಿದ ಸೂಚನೆಗಳು
ಅತ್ಯಾಧುನಿಕ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು, ಸುರಕ್ಷಿತ ಹಾಗೂ ಬರ್ಗ್ಲರ್ ಅಲಾರಂ, ಅನುಮಾನಾಸ್ಪದ ಚಲನವಲನ ಪತ್ತೆಗೆ ಮೋಶನ್ ಸೆನ್ಸರ್ ಲೈಟ್ ವ್ಯವಸ್ಥೆ ಇರಬೇಕು, ಬ್ಯಾಂಕ್ ಹಾಗೂ ಎಟಿಎಂ ಕೇಂದ್ರಗಳಲ್ಲಿ ರಾತ್ರಿ ಪಾಳಿಯಲ್ಲಿ ಸುರಕ್ಷತಾ ಸಿಬ್ಬಂದಿಯನ್ನು ನೇಮಿಸಿ, ಅವರಿಗೆ ಅಗತ್ಯವಾದ ರಕ್ಷಣಾ ಉಪಕರಣಗಳು ಒದಗಿಸಬೇಕು, ಸಾರ್ವಜನಿಕರಿಗೆ ಗೋಚರಿಸುವಂತೆ ಪೋಲೀಸ್ ಠಾಣೆಯ ಸಂಪರ್ಕ ಸಂಖ್ಯೆ ಹಾಗೂ 112 ತುರ್ತು ಸಹಾಯವಾಣಿ ವಿವರಗಳನ್ನು ಸ್ಪಷ್ಟವಾಗಿ ಫಲಕದಲ್ಲಿ ಪ್ರದರ್ಶಿಸಬೇಕು. ಬ್ಯಾಂಕ್‌ಗಳ ಭದ್ರತೆ ಸಾರ್ವಜನಿಕರ ನಂಬಿಕೆಗೆ ಸಂಬAಧಿಸಿದ್ದು, ಎಲ್ಲ ಸಂಸ್ಥೆಗಳು ಸೂಚನೆಗಳನ್ನು ಗಂಭೀರವಾಗಿ ಪಾಲಿಸಬೇಕೆಂದು ಅಧಿಕಾರಿಗಳು ಹಿತೋಕ್ತಿಪಾಠ ಮಾಡಿದರು. ಈ ಸಂದರ್ಭದಲ್ಲಿ ಪಿಎಸೈ ಲೋಕನಾಥ್ ರಾಠೋಡ್ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

More Stories
ಮುರುಡೇಶ್ವರ ಸಮುದ್ರದಲ್ಲಿ ಅಲೆಗಳಿಗೆ ಸಿಲುಕಿ ಪ್ರವಾಸಿಗ ಸಾವು
ತಾಲೂಕಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೀನಾ ವೈದ್ಯ ಕಾಲೇಜು ವಿದ್ಯಾರ್ಥಿಗಳ ಸಾಧನೆ.
ಮಂಗಳಮುಖಿಯರ ನಾಟಕ! ಯುವಕನ ಸರ ಕಿತ್ತು ಪರಾರಿಯಾಗಿದ್ದ ನಾಲ್ವರ ಬಂಧನ