March 4, 2026

ಡಿಜೆವಿಎಸ್ ಪ್ರೌಢಶಾಲೆಯಲ್ಲಿ ವನಚೇತನ ಶಿಬಿರ

ಕುಮಟಾ : ಪ್ರಾತ್ಯಕ್ಷಿಕ ಸ್ವಾನುಭವದೊಂದಿಗೆ ಪ್ರಾಕೃತಿಕ ಮಹತ್ವವನ್ನು ಪ್ರಚುರ ಪಡಿಸುವ ಮೂಲಕ ಲೋಕಪ್ರಸಿದ್ಧವಾದ ಸೈಹ್ಯಾದ್ರಿ ವಿದ್ಯಾಗಮ ಟ್ರಸ್ಟ್ ಮಂಗಳೂರು ಇದರ ಸಂಘಟನೆಯ ಅಡಿಯಲ್ಲಿ ದಿನಾಂಕ 25-11-2025 ರಂದು ಡಿಜೆವಿಎಸ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವನಚೇತನ ಶಿಬಿರವನ್ನು ಏರ್ಪಡಿಸಲಾಯಿತು.

ಸಂಘಟಕರಾದ ದಿನೇಶ್ ಹೊಳ್ಳ ಮಂಗಳೂರು ಇವರು ಪ್ರಾರಂಭದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಶುದ್ಧ ಪರಿಸರದಿಂದ ಶುದ್ಧ ಆಹಾರ ಶುದ್ಧ ಆಹಾರದಿಂದ ಆರೋಗ್ಯಕರ ಜೀವನ ಸಾಧ್ಯ ಪ್ರಕೃತಿಯ ಸಹಜತೆಯ ಸ್ಥಿರತೆ ಮಾನವನ ಪ್ರಥಮ ಆದ್ಯತೆಯಾದಾಗ ನಮ್ಮ ಅಸ್ತಿತ್ವ ಭದ್ರವಾಗಿರಲು ಸಾಧ್ಯ ಎಂದರಲ್ಲದೇ ಪರಿಸರ ಸಮತೋಲನ ಪ್ರಾಣಿಗಳ ಉಳಿವಿನಲ್ಲಿದೆ. ನೈಜ ವಾತಾವರಣ ಮಾನವನ ನಲಿವಿನ ಅನಾವರಣ ಎಂದು ಅಭಿಪ್ರಾಯಿಸಿದರು. ಮುಂದುವರಿದು ಮಾತನಾಡಿದ ಅವರು ಹಿಂದೆ ಮಾಡಿದ ತಪ್ಪುಗಳನ್ನು ನಮ್ಮಿಂದ ಆಗದಂತೆ ಜಾಗ್ರತೆ ವಹಿಸಬೇಕಾಗಿದೆ. ಪರಿಸರದ ಉಳಿವಿನ ಗಂಭೀರತೆಯನ್ನು ಸದಾ ನಿಮ್ಮಲ್ಲಿ ಜಾಗ್ರತೆಯಾಗಿರುವಂತೆ ನೋಡಿಕೊಳ್ಳಿ. ಪ್ರತೀವರ್ಷ ಒಂದೊAದು ಗಿಡವನ್ನಾದರೂ ನೆಟ್ಟು ಪೋಷಿಸಿ. ಸಕಲ ಪ್ರಾಣಿಗಳ ಮೇಲೆ ದಯೆ ತೋರಿಸಿ ಎಂದು ಹಿತ ನುಡಿದರು. ವಿದ್ಯಾರ್ಥಿಗಳಿಗೆ ಪರಿಸರ ಪೂರಕವಾದ ವಿವಿಧ ಪ್ರಾಣಿಗಳ ಚಿತ್ರ ನಿರ್ಮಾಣ ಭಾಷಾಕ್ರೀಡೆ ಸುಂದರ ಲೇಖನ ಕೌಶಲ್ಯ ಪಠ್ಯಪೂರಕವಾದ ವಿವಿಧ ಮನೋರಂಜಕ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ನೀಡಿ ಪುರಸ್ಕರಿಸಿದರು. ಶ್ರೀಮತಿ ಶರಣ್ಯಾ ಅಂಕೋಲಾ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಂದೆAದೂ ಆರದ ಪ್ರೀತಿಯನ್ನು ನಿಮ್ಮಲ್ಲಿ ಕಾಣುತ್ತಿದ್ದೇನೆ,ನೀವು ತೋರುತ್ತಿರುವ ಪ್ರೀತಿಯಿಂದ ನನ್ನ ಹೃದಯ ತುಂಬಿದೆ. ಸಾರ್ಥಕ ಬದುಕಿಗೆ ಸಾಧನೆ ಅಗತ್ಯ, ಸಾಧನೆಗಾಗಿ ಬದುಕಿ ಎಂದು ಹಿತನುಡಿದರಲ್ಲದೇ ತಾವೇ ಸ್ವತಃ ತಯಾರಿಸಿ ತಂದ ಬೆಲ್ಲದಿಂದ ತಾವೇ ಸ್ವತಃ ಪಾಯಸವನ್ನು ಮಾಡಿ ಮಕ್ಕಳಿಗೆ ಬಡಿಸಿದ್ದು ಒಂದು ವಿಶೇಷವಾಗಿತ್ತು. ಮಕ್ಕಳೊಂದಿಗೆ ಮಕ್ಕಳಂತೆ ಭಾಗವಹಿಸಿ ಮನಗೆದ್ದ ಮನೋರಂಜನೆ ಕಾರ್ಯಕ್ರಮದಿಂದ ಮಕ್ಕಳ ಬತ್ತದ ಉತ್ಸಾಹ ಎಲ್ಲರ ಧನ್ಯತೆಗೆ ಕಾರಣವಾಯಿತು. ಪರಿಸರ ಪ್ರೇಮಿ ಮಂಜುನಾಥ ಗೌಡ ಅಂಕೋಲಾ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮುಖ್ಯಾಧ್ಯಾಪಕರಾದ ಭಾಸ್ಕರ್ ಜಿ ಭಟ್ ಎಲ್ಲರನ್ನೂ ಸ್ವಾಗತಿಸಿದರು. ಸಹ್ಯಾದ್ರಿ ವಿದ್ಯಾಗಮ ಟ್ರಸ್ಟ್ ನ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಶಿಕ್ಷಕರಾದ ಪಾಂಡುರAಗ ಆರ್ ದೀವಗಿ ಇವರು ಅಭಿನಂದಿಸಿದರು. ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಹಾಜರಿದ್ದು ಸಹರಿಸಿದರು.

About The Author

error: Content is protected !!