ಭಟ್ಕಳ : ಕಲಿಯುಗದಲ್ಲಿ ದೇವರ ಅನುಗ್ರಹವನ್ನು ಪಡೆಯುವುದಕ್ಕೆ ಭಜನೆ ಹಾಗೂ ನಾಮ ಸಂಕೀರ್ತನೆ ಒಂದು ಉತ್ತಮ ಮಾರ್ಗವಾಗಿದೆ ಎಂದು ಶ್ರೀ ಕ್ಷೇತ್ರ ಕಡವಿನಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಹಾಗೂ ಕಾರ್ಯದರ್ಶಿ ಪ್ರಕಾಶ ಎನ್. ಭಟ್ಟ ಹೇಳಿದರು.
ಅವರು ಭಟ್ಕಳ ತಾಲೂಕಿನ ಶ್ರೀ ಕ್ಷೇತ್ರ ಕಡವಿನಕಟ್ಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಹೋರಾತ್ರಿ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು. ಶ್ರೀ ದೇವರ ಸನ್ನೀಧಿಯಲ್ಲಿ ಬೇರೆ ಬೇರೆ ಭಜನಾ ತಂಡಗಳು ಬಂದು ದೇವರ ಎದುರಿನಲ್ಲಿ ಹಾಡುವ ಭಜನೆಯಿಂದ ಶ್ರೀ ದೇವಿಯು ಸಂತುಷ್ಟಳಾಗ ಹರಸುತ್ತಾಳೆ ಎಂದರು.
ಅಹೋರಾತ್ರಿ ಭಜನಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರುಗಳಾದ ಮಂಜುನಾಥ ಭಟ್ಟ, ರಾಮಚಂದ್ರ ಭಟ್ಟ, ಶ್ರೀಪಾದ ಭಟ್ಟ ಮುಂತಾದವರು ದೀಪ ಪ್ರಜ್ವಲನೆ ಮಾಡಿದರು. ಪ್ರಶಾಂತ ಭಟ್ಟ ಹಾಗೂ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ರಮೇಶ ಆಚಾರ್ಯ ಸೇರಿದಂತೆ ಜಟ್ಟಾ ನಾಯ್ಕ, ನಾರಾಯಣ ನಾಯ್ಕ, ಭಾಸ್ಕರ ನಾಯ್ಕ, ಶ್ರೀಧರ ನಾಯ್ಕ, ಚಂದ್ರಕಾAತ ನಾಯ್ಕ, ಮಾಸ್ತಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಅಹೋರಾತ್ರಿ ಭಜನಾ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಲಾಗಿದ್ದ ಮಹಾ ಅನ್ನ ಸಂತರ್ಪಣೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಿದರು. ವಿವಿಧ ಕಡೆಗಳಿಂದ ಬಂದಿದ್ದ ಪ್ರಸಿದ್ಧ ಭಜನಾ ತಂಡಗಳಾದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಡವಿನಕಟ್ಟಾ, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮಂಡಳಿ ಕಡವಿನಕಟ್ಟಾ, ಶ್ರೀ ಮಹಾಸತಿ ಭಜನಾ ಮಂಡಳಿ ಸರ್ಪನಕಟ್ಟಾ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶಿರಾಲಿ, ಗಾನಶ್ರೀ ಭಟ್ಕಳ, ತಾರಾ ಭಟ್ ಭಜನಾ ತಂಡ ಹೊನ್ನಾವರ, ಶ್ರೀ ಸಿದ್ಧಿವಿನಾಯಕ ಮಹಿಳಾ ಭಜನಾ ತಂಡ ಜಾಲಿ, ಶ್ರೀ ಸಿದ್ಧಿವಿನಾಯಕ ಮಹಿಳಾ ಭಜನಾ ತಂಡ ಕಟಗಾರಕೊಪ್ಪ, ಶ್ರೀ ಸರ್ವೆಶ್ವರಿ ಭಜನಾ ಮಂಡಳಿ ಮಂಕಿ, ವೀರಜಟಕಾ ಭಜನಾ ಮಂಡಳಿ ತೆಂಗಿನಗುAಡಿ ತಂಡಗಳು ಸುಶ್ರಾವ್ಯವಾಗಿ ಭಜನೆಗಳನ್ನು ಹಾಡಿದರು.

More Stories
ಜನಪರ ವೇದಿಕೆ ಲೋಕೋಪಯೋಗಿ ಸಚಿವರ ಬೇಟಿ
ಜಿಲ್ಲಾ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥ ಡಿ.3 ಕ್ಕೆ ಭಟ್ಕಳದಲ್ಲಿ ಚಾಲನೆ
ಡಿಸೆಂಬರ್ 13 ರಂದು ಬೃಹತ್ ಲೋಕ ಅದಾಲತ್