December 23, 2025

ಸ್ಕೂಬಾ ಡೈವಿಂಗ್ ಸಂಸ್ಥೆಯ ಗೂಗಲ್ ಖಾತೆ ಹ್ಯಾಕ್, ನಕಲಿ ಸಂಖ್ಯೆಯಿ0ದ ಹಣ ವಸೂಲಿ!

ಭಟ್ಕಳ. ಮುರ್ಡೇಶ್ವರ: ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಿದ್ಧ ಸ್ಕೂಬಾ ಡೈವಿಂಗ್ ಸಂಸ್ಥೆ ನೇತ್ರಾಣಿ ಅಡ್ವೆಂಚರ್ಸ್ನ ಅಧಿಕೃತ ಗೂಗಲ್ ವ್ಯವಹಾರಿಕ ಖಾತೆಯನ್ನು ಅಪರಿಚಿತರು ಹ್ಯಾಕ್ ಮಾಡಿ, ಪ್ರೊಫೈಲ್ ವಿವರಗಳನ್ನು ತಿರುಚಿ ನಕಲಿ ಸಂಪರ್ಕ ಸಂಖ್ಯೆಯನ್ನು ಸೇರಿಸಿ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ಸಂಬAಧ ಸಂಸ್ಥೆಯ ಮ್ಯಾನೇಜರ್ ಅವರು ಸೈಬರ್ ಕ್ರೈಂ ವಿಭಾಗಕ್ಕೆ ಅಧಿಕೃತ ದೂರನ್ನು ಸಲ್ಲಿಸಿದ್ದು, ದೂರಿನ ಆಧಾರದ ಮೇಲೆ ತನಿಖೆ ಆರಂಭಗೊAಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನಲ್ಲಿ, ಹ್ಯಾಕರ್ ಸಂಸ್ಥೆಯ ಗೂಗಲ್ ಪ್ರೊಫೈಲ್‌ಗೆ ಪ್ರವೇಶ ಪಡೆದು, 7090059002 ಎಂಬ ನಕಲಿ ವಾಟ್ಸಾಪ್ ಸಂಖ್ಯೆಯನ್ನು ಸೇರಿಸಿ, ಬುಕ್ಕಿಂಗ್‌ಗಾಗಿ ಸಂಪರ್ಕಿಸಿದ ಗ್ರಾಹಕರಿಗೆ ನಂಬಿಕೆ ಮೂಡಿಸಿ ಮೊತ್ತ ಸಂಗ್ರಹಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಂಸ್ಥೆಯ ಮಾಲೀಕರಾದ ಗಣೇಶ್ ಹರಿಕಾಂತ್, ನಮ್ಮ ಸಂಸ್ಥೆಯ ಹೆಸರು ದುರುಪಯೋಗ ಮಾಡಿಕೊಳ್ಳುವಂತಹ ವ್ಯವಹಾರಿಕ ಸೈಬರ್ ಮೋಸುಗಳು ಪ್ರವಾಸೋದ್ಯಮ ಕ್ಷೇತ್ರಕ್ಕೆ ಹಾನಿಕಾರಕ. ಗ್ರಾಹಕರು ಹಣ ಪಾವತಿಸುವ ಮೊದಲು ಅಧಿಕೃತ ಸಂಖ್ಯೆ ಮತ್ತು ಮಾಹಿತಿ ಪರಿಶೀಲಿಸುವುದು ಅಗತ್ಯ ಎಂದು ಎಚ್ಚರಿಕೆ ನೀಡಿದ್ದಾರೆ.ಘಟನೆಯ ಹಿನ್ನೆಲೆಯಲ್ಲಿ ಸೈಬರ್ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಇಂತಹ ಮೋಸಕ್ಕೆ ಬಲಿಯಾಗಿದರೆ ತಕ್ಷಣ ಸೈಬರ್ ಸಹಾಯವಾಣಿ 1930 ಸಂಪರ್ಕಿಸಿ ದೂರು ನೀಡುವಂತೆ ಮನವಿ ಮಾಡಿದ್ದಾರೆ,ಪ್ರಕರಣದ ತನಿಖೆ ಮುಂದುವರಿಯುತ್ತಿದೆ.

About The Author

error: Content is protected !!