December 23, 2025

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಸ್ತಿಮಕ್ಕಿಯಲ್ಲಿರುವ ಆಚಾರ್ಯ ಭವನಕ್ಕೆ ಭೇಟಿ

ಭಟ್ಕಳ: ಮುರ್ಡೇಶ್ವರಕ್ಕೆ ಭೇಟಿ ನೀಡಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಸ್ತಿಮಕ್ಕಿಯಲ್ಲಿರುವ ಆಚಾರ್ಯ ಭವನಕ್ಕೆ ಭೇಟಿ ನೀಡಿ ಕೆಲಕಾಲ ತಂಗಿದ್ದರು. ಆಚಾರ್ಯ ಭವನವನ್ನು ನೋಡಿ ವಿವರವನ್ನು ಪಡೆದ ಅವರು ಆಚಾರ್ಯ ಭವನದ ರೂವಾರಿ ಕೃಷ್ಣಾನಂದ ಭಟ್ಟ ದಂಪತಿಗಳನ್ನು ಆಶೀರ್ವಾದ ಪೂರ್ವಕ ಹರಸಿದರು.
ಇದೇ ಸಂದರ್ಭದಲ್ಲಿ ಭಟ್ಕಳ ಹವ್ಯಕ ವಲಯದಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಶಾಲು ಹೊದಿಸಿ, ಫಲ ಪುಷ್ಪಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭಟ್ಕಳ ಹವ್ಯಕ ವಲಯದ ವೈವಾಹಿಕ ಘಟಕದ ಪ್ರಮುಖರಾದ ಕೃಷ್ಣಾನಂದ ಭಟ್ಟ ಬಲ್ಸೆ, ಮಾಲಿನಿ ಭಟ್ಟ, ವಲಯ ಅಧ್ಯಕ್ಷ ಎಂ.ವಿ.ಹೆಗಡೆ, ಉಪಾಧ್ಯಕ್ಷ ರಾಧಾಕೃಷ್ಣ ಭಟ್ಟ, ಹವ್ಯಕ ಮಂಡಳದ ಶಂಭು ಹೆಗಡೆ, ರೇಷ್ಮಾ ಭಟ್ಟ ಹಾಗೂ ಭಟ್ಕಳ ಹವ್ಯಕ ವಲಯದ ಪಿ.ಎನ್.ಭಟ್ಟ, ಶ್ರೀಕಾಂತ ಹೆಗಡೆ, ಅನಂತ ಹೆಗಡೆ, ಸಾಧನಾ ಭಟ್ಟ ಮುಂತಾದವರು ಉಪಸ್ಥಿತರಿದ್ದರು.

About The Author

error: Content is protected !!