ಕುಮಟಾ : ತಾಲ್ಲೂಕಿನ ಮಾಸೂರಿನ ಶ್ರೀ ಬಬ್ರುಲಿಂಗೇಶ್ವರ ಪ್ರೌಢ ಶಾಲೆಯ ವಾರ್ಷಿಕೋತ್ಸವದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯಾಧ್ಯಾಪಕರಾದ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿರುವ ಹಿಂದಿ ವಿಶೇಷ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಚಂದ್ರರನ್ನು ಆಪ್ತವಾಗಿ ಮಾನಿಸಲಾಯಿತು.
ಶಿವಚಂದ್ರರು ದೂರದ ಚಿತ್ರದುರ್ಗದವರಾದರು ಕುಮಟಾದ ಸ್ಥಳೀಯರಂತಿದ್ದು ಶಾಲೆಯನ್ನು ಪರಿಣಾಮಕಾರಿಯಾಗಿ ಮುನ್ನಡೆಸಿ ಜನಮಾನಸದಲ್ಲಿ ಛಾಪು ಮೂಡಿಸಿದ್ದನ್ನು ಶ್ಲಾಘಿಸಿ ಅವರನ್ನು ಸನ್ಮಾನಿಸಲಾಯಿತು.
ಶಿವಚಂದ್ರರ ಶಾಲೆಯ ಮತ್ತು ವಿದ್ಯಾರ್ಥಿಗಳ ಕುರಿತಾದ ಸೆಳೆತ ಹಾಗೂ ಸಮಾಜಮುಖಿಯಾದ ಎಳೆತವು ಪ್ರಶಂಸನೀಯವಾಗಿದ್ದು, ದೈಹಿಕ ಆಘಾತದ ನಡುವೆಯೂ ವಿಚಲಿತರಾಗದೇ ಶಾಲೆಯ ಶ್ರೇಯೋಭಿವೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡ ಅವರದು ಅನನ್ಯವಾದ ವ್ಯಕ್ತಿತ್ವವೆಂದು ಹೆಗಡೆ ಗ್ರಾಮ ಪಂಚಾಯತದ ಸವ್ಯಸಾಚಿ ಅಧ್ಯಕ್ಷರಾದ ಮಂಜುನಾಥ ಪಟಗಾರರು ತುಂಬ ಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿ ಉಪಸ್ಥಿತರಿದ್ದ ಕರ್ಕಿಯ ಶ್ರೀ ಚನ್ನಕೇಶ್ವರ ಪ್ರೌಢ ಶಾಲೆಯ ಹೆಸರಾಂತ ಮುಖ್ಯಾಧ್ಯಾಪಕರಾದ ಎಲ್. ಎಂ. ಹೆಗಡೆಯವರು ಶಿವಚಂದ್ರರಂತಹ ಮುಖ್ಯಾಧ್ಯಾಪಕರು ಶಾಲಾ ಶಿಕ್ಷಣ ಇಲಾಖೆಯ ಭಾಗ್ಯವೆಂದರು.
ಮಹನೀಯರ ಉಪಸ್ಥಿತಿಯಲ್ಲಿನ ಸಭಾ ಕಾರ್ಯಕ್ರಮದ ನಂತರದಲ್ಲಿನ ವಿದ್ಯಾರ್ಥಿಗಳಿಂದ ಪ್ರದರ್ಶಿತವಾದ ವೈವಿಧ್ಯಮಯವಾದ ಮನರಂಜನೆಯು ಶಾಲಾ ವಾರ್ಷಿಕೋತ್ಸವಕ್ಕೆ ವಿಶೇಷವಾದ ಕಳೆಯನ್ನು ಕಟ್ಟಿತು.

More Stories
ಚಂದ್ರಶೇಖರ ಅಚ್ಯುತ ಗಾಂವಕರ ನಿಧನ
ವಿಶೇಷ ಚೇತನ ಮಕ್ಕಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಹಿರೇಗುತ್ತಿಯ ಹೈಸ್ಕೂಲ್ ವಿದ್ಯಾರ್ಥಿನಿಗೆ ತೃತೀಯ ಸ್ಥಾನ
ಬರ್ಗಿಯ ನಾಗನೆಲೆಯಲ್ಲಿ ವಂದೇ ಮಹಾಲಿಂಗಶಿವಮನ್ನಣೆಗೆ ಪಂಡಿತ್- ಸಮೀರ್