ಕೇರಳ ಕಾಸರಗೊಡು ಜ. ೧೮: ಉತ್ತರ ಕನ್ನಡ ಜಿಲ್ಲೆಯ ಪ್ರತಿಭಾನ್ವಿತ ಲೇಖಕರು ಗಾಯಕರಾದ ಉಮೇಶ ಮುಂಡಳ್ಳಿ ಅವರಿಗೆ ಕೇರಳ ಕಾಸರಗೋಡು ಕನ್ನಡ ಭವನದ ೩೦೨೬ ನೇ ಸಾಲಿನ ಪ್ರತಿಷ್ಠಿತ ಅಂತರ್ ರಾಜ್ಯ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ ರವಿವಾರ ಪ್ರಧಾನ ಮಾಡಲಾಯಿತು.
ಕಾಸರಗೋಡು ಕನ್ನಡ ಭವನದಲ್ಲಿ ರವಿವಾರ ನಡೆದ ಕನ್ನಡ ಭವನ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಕೇರಳ ಹಾಗೂ ಕರ್ನಾಟಕದ ಅನೇಕ ಸಾಧಕರೊಡನೆ ಸಾಹಿತ್ಯ ಸಂಗೀತ ಮತ್ತು ಕಲಾ ಕ್ಷೇತ್ರದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ
ಉಮೇಶ ಮುಂಡಳ್ಳಿ ಭಟ್ಕಳ ಇವರಿಗೂ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕನ್ನಡದ ಭವನದ ಸಂಸ್ಥಾಪಕ ಅಧ್ಯಕ್ಷ ಡಾ ವಾಮನ್ ರಾವ್ ಬೇಕಲ್ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಡಾ.ಎಂ.ಜಿ.ಆರ್.ಅರಸು ಮೈಸೂರು ಅವರು ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಮುಂಡಳ್ಳಿ ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕೌಸ್ತುಬ ಪತ್ರಿಕೆ ಸಂಪಾದಕರಾದ ರತ್ನಾ ಹಾಲಪ್ಪ ಗೌಡ ಮೈಸೂರು, ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ,ಡಾ.ಕೆ.ಎಸ್.ವೆಂಕಟರಮಣ ಹೊಳ್ಳೆ, ಸಂಧ್ಯಾರಾಣಿ ಬೇಕಲ್,ಅರಿಬೈಲು ಗೋಪಾಲ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ