ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ಗೆ ಸೇರಿದ CVSK ಹೈಸ್ಕೂಲ್‌ನ ವಿದ್ಯಾರ್ಥಿ ಕುಮಾರ್ ಕೆ.ಬಿ. ಅನೀಶ್, ಮಲೇಶಿಯಾದ ಕುಯಾಲಾಲಂಪುರದಲ್ಲಿ ಜನವರಿ 18, 2026ರಂದು ನಡೆದ ವಿಶ್ವ ಯೋಗ ಮತ್ತು ಕ್ರೀಡಾ ಶಿಕ್ಷಣ ಮಂಡಳಿ ಇಂಡೋ–ಮಲೇಶಿಯಾ ಯುವ ಚಾಂಪಿಯನ್‌ಷಿಪ್ನಲ್ಲಿ ಕಲಾತ್ಮಕ ಯೋಗ ಹಾಗೂ ಸಾಂಪ್ರದಾಯಿಕ ಯೋಗ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದಾರೆ.
ಈ ಸಾಧನೆಯ ಮೂಲಕ ಅನೀಶ್ ಅವರು ತಮ್ಮ ಶಾಲೆ, ರಾಜ್ಯ ಮಾತ್ರವಲ್ಲದೆ ದೇಶದ ಗೌರವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಈಗಾಗಲೇ ಹೆಸರು ಪಡೆದಿರುವ CVSK ಹೈಸ್ಕೂಲ್, ಈ ಸಾಧನೆಯೊಂದಿಗೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಅನೀಶ್ ಅವರ ಈ ಅಪೂರ್ವ ಸಾಧನೆಗೆ ತಂದೆ ಕಲಾಧರ ಭಾಗಿಲ ವೈದ್ಯ, ಶಾಲೆಯ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯ ಶಿಕ್ಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಪೋಷಕರು ಹಾಗೂ ಎ ಎಮ್ ಶ್ರೀನಿವಾಸ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಭವಿಷ್ಯದಲ್ಲೂ ಇನ್ನಷ್ಟು ಉನ್ನತ ಸಾಧನೆ ಮಾಡುವಂತೆ ಶುಭಾಶಯಗಳನ್ನು ಕೋರಿದ್ದಾರೆ.
ಯುವ ಪ್ರತಿಭೆಗಳಿಗೆ ಪ್ರೇರಣೆಯಾದ ಅನೀಶ್ ಅವರ ಈ ವಿಜಯ, ಭಾರತೀಯ ಯೋಗ ಪರಂಪರೆಯ ಜಾಗತಿಕ ಮಹತ್ವವನ್ನು ಮತ್ತೊಮ್ಮೆ ಸಾರಿದೆ.

More Stories
ಮಕ್ಕಳ ಕಲಿಕೆಯಲ್ಲಿ ಹಾಡಿಗೆ ತುಂಬಾ ಮಹತ್ವವಿದೆ.
ಸಮ್ಮೇಳದ ಸರ್ವಾಧ್ಯಕ್ಷರಾದ ಸಾಹಿತಿ ಸುರೇಶ ನಾಯ್ಕ ಅವರಿಗೆ ಆಮಂತ್ರಣ
ಸಿಂಧೂರ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಹೊನ್ನಾವರ (ಉತ್ತರ ಕನ್ನಡ) ಉದ್ಘಾಟನಾ ಸಮಾರಂಭ