ಭಟ್ಕಳ: ವೆಂಕಟಾಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಜಾತ್ರೆಯ ವೇಳೆ ಮಹಿಳೆಯೊಬ್ಬರ ಮಂಗಲ್ಯ ಸರ ಕಳ್ಳತನವಾದ ಘಟನೆ ನಡೆದಿದೆ.
ಭಟ್ಕಳದ ಬೆಳ್ನೆ ನಿವಾಸಿ ಶ್ರೀಮತಿ ಕುಪ್ಪು ಕೊಂ ನಾಗಪ್ಪ ಮೋಗೇರ (68) ಅವರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಹೊರಭಾಗದಲ್ಲಿ ನಿಂತಿದ್ದ ತೇರಿನ ಬಳಿ ಜನಸಂದಣಿಯಲ್ಲಿ ಹೂವಿನ ಪ್ರಸಾದ ಪಡೆಯಲು ಮುಂದಾಗಿದ್ದರು. ಈ ಸಂದರ್ಭ ಜನಸಂದಣಿ ಹಾಗೂ ಗದ್ದಲದ ನಡುವೆ, ಅಪರಿಚಿತರು ಅವರ ಗಮನಕ್ಕೆ ಬಾರದಂತೆ ಕುತ್ತಿಗೆಯಲ್ಲಿದ್ದ ಮಂಗಲ್ಯ ಸರವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳ್ಳತನಗೊಂಡ ಮಂಗಲ್ಯ ಸರವು ಸುಮಾರು 20 ವರ್ಷಗಳ ಹಿಂದೆ ಖರೀದಿಸಿದದ್ದಾಗಿದ್ದು, ಅಂದಾಜು 30 ಗ್ರಾಂ ತೂಕ ಮತ್ತು ರೂ.30,000 ಮೌಲ್ಯ ಹೊಂದಿದೆ ಎಂದು ತಿಳಿದುಬಂದಿದೆ.
ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎ.ಎಸ್.ಐ. ಸುನಿಲ್ ಕುಡ್ತಲಕರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ