ಭಟ್ಕಳ : ಭಟ್ಕಳ ನಾಮಧಾರಿ ನಿಚ್ಚಲಮಕ್ಕಿ ವೆಂಕಟ್ರಮಣ ದೇವರ ಪಾಲಕಿ ಉತ್ಸವ ಸಾವಿರಾರು ಜನರ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ನಡೆಯಿತು. ಪಾಲಕಿ ಉತ್ಸವ ಅಂಗವಾಗಿ ದೇವಾಲಯದಲ್ಲಿ ಅಭಿಷೇಕ, ತುಲಭಾರ ಸೇವೆಗಳು ನಡೆದ ಬಳಿಕ ಉತ್ಸವ ಮೂರ್ತಿಯನ್ನು ಪಾಲಕಿ ಕೂರಿಸಿ ಮಹಾಪೂಜೆ ನಡೆಸಲಾಯಿತು. ಮಹಾಪೂಜೆ ಬಳಿಕ ನಡೆದ ಅನ್ನಸಂತರ್ಪಣೆಯಲ್ಲಿ 5 ಸಾವಿರಕ್ಕೂ ಹೆಚ್ಚೂ ಜನರು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು. ಸಂಜೆ 4 ಘಂಟೆಗೆ ಪಾಲಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಟ್ಟಣದ ಮಾರ್ಗವಾಗಿ ತೆರಳಿದ ಉತ್ಸವ ಮೂರ್ತಿಗೆ ಜನರು ಭಕ್ತಿಬಾವದಿ ಹಣ್ಣುಕಾಯಿ ಅರ್ಪಿಸಿ ಪುನೀತರಾದರು.

ಚಂಡೆವಾದನ. ತಟ್ಟೆರಾಯ ಕುಣಿತ, ಮಹಿಳಾ ಭಜನಾ ಕುಣಿತ, ಛದ್ಮವೇಷ ಧಾರಿಗಳು ಮೆರವಣಿಗೆಯ ಮೆರಗು ಹೆಚಿಸಿದರು. ಮೆರವಣಿಗೆಯಲ್ಲಿ ಸಾವಿರಾರು ಜನರು ಶುಭ್ರ ಶ್ವೇತ ವಸ್ತ್ರಧಾರಿಗಲಾಗಿ ಗೋವಿಂದ ನಾಮ ಮೆಲುಕುತ್ತಾ ಸಾಗಿದರು. ರಾತ್ರಿ 12 ಘಂಟೆಗೆ ಪಾಲಕಿಯೂ ತನ್ನ ಮೆರವಣಿಗೆ ಮುಗಿಸಿ ಪುರಪ್ರವೇಶ ಮಾಡಿತು.

More Stories
ಶ್ರೀ ಗುರುಸುಧೀಂದ್ರ ಕಾಲೇಜಿನಲ್ಲಿ B.Sc. ಕ್ರಿಮಿನಾಲಜಿ & ಫೋರೆನ್ಸಿಕ್ ಸೈನ್ಸ್ ಕೋರ್ಸ್ಗೆ ಚಾಲನೆ: ಎಸ್ಪಿ ದೀಪನ್ ಎಂ.ಎನ್. ಉದ್ಘಾಟನೆ
ಭಟ್ಕಳದಲ್ಲಿ ‘ಶೌರ್ಯ’ ವಿಪತ್ತು ನಿರ್ವಹಣಾ ಪಡೆಗೆ NDRF ನಿಂದ ತರಬೇತಿ ಕಾರ್ಯಕ್ರಮ
ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ತಪ್ಪಿಸಿರುವುದು ಜನರ ಧ್ವನಿಯನ್ನೇ ಕಟ್ಟಿಹಾಕಿದಂತೆ: ಮಂಕಿ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ನಾಯ್ಕ್ ಆಕ್ರೋಶ