ಭಟ್ಕಳ :ಪಟ್ಟಣದ ವೆಲ್ಪೇರ್ ಆಸ್ಪತ್ರೆಯ ವತಿಯಿಂದ ವೆಲ್ಪೇರ್ ಆಸ್ಪತ್ರೆ ಎದುರು ನಿರ್ಮಿಸಲಾದ ಶುದ್ಧ ಕುಡಿಯು ನೀರು ಘಟಕವನ್ನು ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಝುಬೇರ್ ಮೌಲಾನಾ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಶುದ್ಧ ಕುಡಿಯುವ ನೀರು ಘಟಕದಿಂದ ನೀರು ಒಯ್ಯುವವರಿಗೆ ಅನುಕೂಲವಾಗಲಿದೆ. ಪ್ರತಿಯೊಬ್ಬರೂ ಶುದ್ಧ ಕುಡಿಯುವ ನೀರಿನ ಅಗತ್ಯವಿದೆ. ಜನರ ಅಗತ್ಯ ಮನಗಂಡು ಆಸ್ಪತ್ರೆಯಿಂದ ಶುದ್ಧ ನೀರು ಘಟಕ ಆರಂಭಿಸಲಾಗಿದೆ ಎಂದರು. ನಗರ ಠಾಣೆಯ ಪಿಎಸ್ಐ ನವೀನ ನಾಯ್ಕ ಮಾತನಾಡಿ, ಶುದ್ಧ ನೀರು ಘಟಕ ಆರಂಭಿಸಿದ ವೆಲ್ಪೇರ್ ಆಸ್ಪತ್ರೆ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ ಮಾತನಾಡಿ, ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರಿನ ಅವಶ್ಯಕತೆ ಇದೆ. ಈ ಭಾಗದ ಜನರು ಇದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದರು.
ವೆಲ್ಪೇರ್ ಆಸ್ಪತ್ರೆಯ ಡಾ. ಜಹೀರ್ ಕೋಲಾ ಮಾತನಾಡಿ, ಶುದ್ಧ ನೀರು ಘಟಕದಲ್ಲಿ 2 ರೂಪಾಯಿಗೆ 2 ಲೀಟರ್ ನೀರು ಮತ್ತು 5 ರೂಗೆ 20 ಲೀಟರ್ ನೀರು ದೊರೆಯಲಿದೆ. ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕೆಂದರು. ಈ ಸಂದರ್ಭದಲ್ಲಿ ವೆಲ್ಪೇರ್ ಆಸ್ಪತ್ರೆಯ ಅಧ್ಯಕ್ಷ ಎಸ್ ಎಂ ಶಕೀಲ್, ಆಸ್ಪತ್ರೆಯ ವ್ಯವಸ್ಥಾಪಕ ಅಬುಲಾಲ್ ಬರ್ಮಾವರ, ಜಾಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಇಮ್ರಾನ್ ಲಂಕಾ, ಸುಧಾಕರ್ ಸೇರಿದಂತೆ ವೆಲ್ಪೇರ್ ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

More Stories
ಭಟ್ಕಳದಲ್ಲಿ ಶಾಲಾ ಮಕ್ಕಳನ್ನ ಸಾಗಿಸುತ್ತಿದ್ದ ವಾಹನ ಪಲ್ಟಿ: 13 ವಿದ್ಯಾರ್ಥಿಗಳಿಗೆ ಸಣ್ಣ ಗಾಯ
ಭಟ್ಕಳದಲ್ಲಿ ಸಂಭ್ರಮದ ಹೋಳಿ ಹಬ್ಬ
ಬ್ಯಾಂಕ್ ದಾಖಲೆ ಪಡೆದು ವಂಚನೆ: ಠಾಣೆಯಲ್ಲಿ ಪ್ರಕರಣ