

ಹೊನ್ನಾವರ : ತಾಲೂಕಿನ ಕೆಳಗಿನ ಮೂಡ್ಕಣಿ ಗ್ರಾಮದ ನಿವಾಸಿಯಾದ ಬಸ್ಟ್ಯಾಂವ್ ಡಯಾಸ್ ದಂಪತಿಗಳ ಪುತ್ರಿ ಕು.ಮಾಪ್ರೇಡ್ ಡಯಾಸ್ ಇವರು ಸಿವಿಲ್ ನ್ಯಾಯಾದೀಶರಾಗಿ ನೇಮಕಗೊಂಡಿದ್ದಾರೆ.

ತೀರಾ ಬಡತನದಲ್ಲಿ ಬೆಳೆದ ಮಾಪ್ರೇಡ್ ಡಯಾಸ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಿರಿಯ ಪ್ರಾಥಮಿಕ ಶಾಲೆ ಕೆಳಗಿನ ಮೂಡ್ಕಣಿಯಲ್ಲಿ ಮುಗಿಸಿ,ನಂತರ ಪ್ರೌಢ ಶಿಕ್ಷಣವನ್ನು ಜಳವಳ್ಳಿ ಪ್ರೌಢ ಶಾಲೆಯಲ್ಲಿ ಪಡೆದು ,ಪದವಿ ಶಿಕ್ಷಣವನ್ನು ಹೊನ್ನಾವರ ಎಸ್. ಡಿ. ಎಮ್. ಕಾಲೇಜಿನಲ್ಲಿ ಮುಗಿಸಿದ ನಂತರ ಕಾನೂನು ಶಿಕ್ಷಣವನ್ನು ಉಡುಪಿಯಲ್ಲಿ ಪಡೆದರು. ಇತ್ತೀಚೆಗೆ ನಡೆದ ಸಿವಿಲ್ ನ್ಯಾಯಾದೀಶರ ನೇಮಕಾತಿ ಪರೀಕ್ಷೆಯಲ್ಲಿ ಮೊದಲ ಹಂತದಲ್ಲಿಯೇ ತೇರ್ಗಡೆಗೊಂಡು ಸಿವಿಲ್ ನ್ಯಾಯಾದೀಶರಾಗಿ ನೇಮಕಗೊಂಡಿದ್ದಾರೆ.

ಈ ಕುರಿತಂತೆ ಹರ್ಷ ವ್ಯಕ್ತಪಡಿಸಿರುವ ಊರ ನಾಗರೀಕರು ಮತ್ತು ಸಂಬಂಧಿಗಳು ನ್ಯಾಯಾಧೀಶರಾಗಿ ನೇಮಕಗೊಂಡಿರುವ ಮಾಪ್ರೆಢ ಅವರನ್ನು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.

ಮಾಪ್ರೆಡ್ ಡಯಾಸ ಅವರು ಕಳೆದ ಡಿಸೆಂಬರ್ ತಿಂಗಳಲ್ಲಿ ಹೊನ್ನಾವರ ಪಟ್ಟಣದ ಗಾಂಧಿ ನಗರದ ನಿವಾಸಿ, ಇಗ್ನೇಷಿಯಸ್ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಬಸ್ ಚಾಲಕರಾಗಿರುವ ಜೋಸೆಫ್ ಪರ್ನಾಂಡಿಸ್ ದಂಪತಿಗಳ ಪುತ್ರನನ್ನು ವಿವಾಹವಾಗಿ ಈಗ ಹೊನ್ನಾವರ ನಿವಾಸಿಯಾಗಿದ್ದಾರೆ.


ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ
About The Author




More Stories
ಹೊನ್ನಾವರ ಅರ್ಬನ್ ಬ್ಯಾಂಕ್ನ 107 ನೇ ವಾರ್ಷಿಕ ಮಹಾಸಭೆ: ರೂ. 1.25 ಕೋಟಿ ನಿಕ್ಕಿ ಲಾಭ, ಶೇ. 8 ಡಿವಿಡೆಂಡ್ ಘೋಷಣೆ
ಹೊನ್ನಾವರದಲ್ಲಿ 34ನೇ ಕೊಂಕಣಿ ಮಾನ್ಯತಾ ದಿನಾಚರಣೆ: ‘ಕೊಂಕಣಿ ಕಲಾ ಕುಟಮ್’ ವತಿಯಿಂದ ವಿಜೃಂಭಣೆಯ ಆಚರಣೆ!
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!