March 4, 2026

ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಮಕ್ಕಳ ಸಂತೆ

ಭಟ್ಕಳ: ಇಲ್ಲಿನ  ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಮಕ್ಕಳ ಸಂತೆಯನ್ನು ವಿಶೇಷವಾಗಿ ಆಯೋಜಿಸಲಾಗಿದ್ದು, ಪಾಲಕರು ಜೊತೆಗೆ ಸಾರ್ವಜನಿಕರು ಸಂತೆಯಲ್ಲಿ ಪಾಲ್ಗೊಂಡು ಮಕ್ಕಳಿಂದ ಖರೀದಿ ಮಾಡಿದರು.

ಈ ಕಾರ್ಯಕ್ರಮವನ್ನು ಶಾಲೆ ಹಳೆ ವಿದ್ಯಾರ್ಥಿ ಹಾಗೂ ಉದ್ಯಮಿ ನಾಗೇಶ ಪೈ ಉದ್ಘಾಟಿಸಿ ಮಾತನಾಡಿ “ಮಕ್ಕಳಲ್ಲಿ ವ್ಯವಹಾರ ಜ್ಞಾನ ಅತಿ ಮುಖ್ಯ. ಶಾಲಾ ಹಂತದಲ್ಲೇ ವಿದ್ಯಾರ್ಥಿಗಳು ವ್ಯವಹಾರದ ಮಾನಸಿಕವಾಗಿ ಸಂಘಟರಾಗಬೇಕು ಮತ್ತು ಕಲಿತ ಶಾಲೆಯನ್ನು ಮರೆಯಬಾರದೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಸೋನಾರಕೇರಿ  ಕ್ಲಸ್ಟರ್ ವಿಭಾಗದ ಸಿ.ಆರ್.ಪಿ. ಹಾಗು ಇಲಾಖೆ ಅನುಷ್ಠಾನಾಧಿಕಾರಿ  ಗೋಪಾಲ ನಾಯ್ಕ ಮಾತನಾಡಿ “ಗಂಡು ಮಕ್ಕಳ ಶಾಲೆಯು ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇರುವ ಚಿಕ್ಕ ಜಾಗದಲ್ಲಿಯೇ ಚೊಕ್ಕದಾಗಿ ವ್ಯವಸ್ಥಿತವಾಗಿ ಶಿಸ್ತು ಬದ್ಧವಾಗಿ ಕಾರ್ಯಕ್ರಮ ಸಂಘಟಿಸಿದ್ದಾರೆ. ಹಳ್ಳಿಯ ಸೊಗಡನ್ನು ತರಲು ಪ್ರಯತ್ನಿಸಿದ್ದು ಅದರಲ್ಲಿ ಯಶಸ್ವಿ ಸಹ ಆಗಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಯಾರು ಹೆಚ್ಚು ಚೌಕಾಸಿ ಮಾಡಬಾರದೆಂದು ಈ ಮಾತು ಹೇಳಿದರು.
ಇನ್ನೋರ್ವ ಅತಿಥಿಗಳಾದ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕಿರಣ ಶಾನಭಾಗ ಮಾತನಾಡಿ “ಶಾಲೆಯಲ್ಲಿ ವಿನೂತನವಾಗಿ ಪ್ರಥಮ ಬಾರಿಗೆ ಮಕ್ಕಳ ಸಂಖ್ಯೆಯನ್ನು ಆಯೋಜಿಸಿ ಮಕ್ಕಳಲ್ಲಿ ವ್ಯವಹಾರ ಜನ ಬೆಳೆಯಲಿಸಲು ಅತಿ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ ಎಂದು ಪ್ರಶಂಶಿಸಿದರು.
ವೇದಿಕೆಯಲ್ಲಿ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ  ರಾಮಚಂದ್ರ ದೇವಾಡಿಗ, ಉಪಾಧ್ಯಕ್ಷೆ ಶ್ರೀಮತಿ ಪಾರ್ವತಿ ನಾಯ್ಕ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಜನಾರ್ಧನ ಮೊಗೇರ ನಿರೂಪಿಸಿದರು.

ಮಕ್ಕಳ ಸಂತೆಯಲ್ಲಿ ವಿಭಿನ್ನವಾದ ಗಿಳಿ ಮಾರಾಟ,  ಸ್ವದೇಶಿ ಉತ್ಪನ್ನಗಳು, ಬೆಂಕಿ ರಹಿತ ಅಡುಗೆ, ಬಟ್ಟೆ ಮಾರಾಟ, ಮಾವಿನ ಮಿಡಿ, ವಿವಿಧ ತರಕಾರಿಗಳು, ಸೊಪ್ಪುಗಳು, ಹಣ್ಣಿನ ಮಳೆಗೆ, ತಂಪು ಪಾನೀಯ ಮಳಿಗೆ, ವಿಡಿಯೋ ಗೇಮ್ ಗಳು, ಸಣ್ಣ ಪ್ರಮಾಣದ ಜಾತ್ರೆಯ ವಾತಾವರಣ ಮೂಡಿತ್ತು.

About The Author

error: Content is protected !!