ಭಟ್ಕಳ: ಶ್ರೀ ಕುದುರೆ ಬೀರಪ್ಪ ಹಾಗೂ ಮುಖ್ಯಪ್ರಾಣ ಹನುಮಂತ ದೇವಸ್ಥಾನ ಅಭಿವೃದ್ಧಿ ಟ್ರಸ್ಟ (ರಿ), ಶ್ರೀ ಕುದುರೆ ಬೀರಪ್ಪ ಯುವಕ ಸಂಘ (ರಿ), ಮತ್ತು ಶ್ರೀ ಕುದುರೆ ಬೀರಪ್ಪ ಮಹಿಳಾ ಮಂಡಳಿ ಇವರ ಆಶ್ರಯದಲ್ಲಿ ರಕ್ತ ನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ ಹಾಗೂ ತಾಲೂಕು ಆಸ್ಪತ್ರೆ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ “ಬ್ರಹತ್ ರಕ್ತದಾನ ಶಿಬಿರ”ವು ಫೆ. 22 ಭಾನುವಾರದಂದು ಇಲ್ಲಿನ ಶ್ರೀ ಕುದುರೆ ಬೀರಪ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಕ್ತದಾನ ಶಿಬಿರವು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆಯ ತನಕ ನಡೆಯಲಿದೆ.
ಕಾರ್ಯಕ್ರಮವನ್ನು ಶ್ರೀ ಕುದುರೆ ಬೀರಪ್ಪ ಹಾಗೂ ಮುಖ್ಯಪ್ರಾಣ ಹನುಮಂತ ದೇವಸ್ಥಾನ ಅಭಿವೃದ್ಧಿ ಟ್ರಸ್ಟ (ರಿ), ಶ್ರೀ ಕುದುರೆ ಬೀರಪ್ಪ ಯುವಕ ಸಂಘ (ರಿ), ಮತ್ತು ಶ್ರೀ ಕುದುರೆ ಬೀರಪ್ಪ ಮಹಿಳಾ ಮಂಡಳಿದ ಅಧ್ಯಕ್ಷರುಗಳು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಭಟ್ಕಳ ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ, ಜನರಲ್ ಸರ್ಜನ್ ಡಾ. ಅರುಣಕುಮಾರ ಎನ್.ಎ. ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಅತಿಥಿಗಳಾಗಿ ಉಡುಪಿ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿ, ಕುಂದಾಪುರ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ಎಮ್. ನಾಯ್ಕ ಹಾಗೂ ಭಟ್ಕಳ ಫ್ರೇಂಡ್ಸ ಜಿಮ್ ಮಾಲೀಕ ವೆಂಕಟೇಶ ನಾಯ್ಕ ಉಪಸ್ಥಿತರಿರಲಿದ್ದಾರೆ.
About The Author


More Stories
ರೈತರ ಕೃಷಿ ರಸ್ತೆಗೆ ಅಡ್ಡಿ ಆರೋಪ: ತಹಶೀಲ್ದಾರ್ ಕಚೇರಿಗೆ ಮನವಿ
ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲೇ ಅಕ್ರಮ ಮರಳು ಸಾಗಾಟಕ್ಕೆ ಬಿಸಿ ಮುಟ್ಟಿಸಿದ ಎಎಸ್ಪಿ ರಾನು ಗುಪ್ತ: 6 ಟಿಪ್ಪರ್ಗಳು, 6 ಮಂದಿ ವಶಕ್ಕೆ
ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳ ವೈದ್ಯರಿಗೆ ಕೆಡಿಸಿಸಿ ಬ್ಯಾಂಕ್ ನೌಕರರಿಂದ ಸನ್ಮಾನ