August 25, 2026

ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಪರಿಶೀಲನೆ

ಶಿರಸಿ : ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಪರಿಶೀಲನೆಗಾಗಿ ತನಿಖಾ ತಂಡ ಇಂದು ಶಿರಸಿಗೆ ಆಗಮಿಸಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಈ ಕೆಳಗಿನ ಗ್ರಾಮ ಪಂಚಾಯಿತಿಗಳನ್ನು 2025 ನೇ ಸಾಲಿನ ಕ್ಷಯ ಮುಕ್ತ ಪಂಚಾಯಿತಿಗಳೆಂದು ಘೋಷಿಸಲು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಉತ್ತರ ಕನ್ನಡರವರಿಗೆ ವರದಿಯನ್ನು ಸಲ್ಲಿಸುವರು.


ಶಿರಸಿ ತಾಲೂಕಿನ 2025 ರ ಕ್ಷಯ ಮುಕ್ತ ಪಂಚಾಯತಿಗೆ ಆಯ್ಕೆ ಆದ ಗ್ರಾಮ ಪಂಚಾಯತಿಗಳು:
ಬಿಸಿಲಕೊಪ್ಪ, ಹುತಗಾರ, ಸದಾಶಿವಳ್ಳಿ, ಮಂಜುಗುಣಿ, ಉಂಚಳ್ಳಿ, ಅಂಡಗಿ, ಬನವಾಸಿ, ಶಿವಳ್ಳಿ, ವಾನಳ್ಳಿ, ಜಾನ್ಮನೆ, ಕಾನಗೋಡು, ಹುಣಸೆ ಕೊಪ್ಪ, ಬಂಕನಾಳ.
ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಳ ಆಯ್ಕೆಯ ಮಾನದಂಡಗಳು:

1.ಸಂಬಂಧಿಸಿದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿ ಒಂದು ಸಾವಿರ ಜನಸಂಖ್ಯೆಗೆ 30ಕ್ಕಿಂತ ಅಧಿಕ ಕಪ ಪರೀಕ್ಷೆಗಳು ಆಗಿರಬೇಕು

2, ಪ್ರತಿ ಸಾವಿರ ಜನಸಂಖ್ಯೆಗೆ ಒಂದು ಅಥವಾ ಒಂದಕ್ಕಿಂತ ಕಡಿಮೆ ಸಂಖ್ಯೆಯ ಕ್ಷಯರೋಗಿಗಳು ಪತ್ತೆಯಾಗಿರಬೇಕು.

3.ಪತ್ತೆಯಾಗಿ ಚಿಕಿತ್ಸೆ ಒದಗಿಸಿದ ಎಲ್ಲಾ ಕ್ಷಯ ರೋಗಿಗಳಿಗೆ ಸರ್ಕಾರದಿಂದ ನೀಡುವ ಕನಿಷ್ಠ ಒಂದು ಕಂತನ್ನಾದರೂ ಡಿ.ಬಿ.ಟಿ ಮುಖಾಂತರ ಹಣ ಪಾವತಿ ಆಗಿರಬೇಕು.

4.ಚಿಕಿತ್ಸೆ ಮುಗಿಯುವ ಒಳಗೆ ಯಾವುದಾದರೂ ದಾನಿಗಳ ಮೂಲಕ ಪೌಷ್ಟಿಕ ಆಹಾರದ ಕಿಟ್ ವಿತರಣೆ ಮಾಡಿರಬೇಕು.

5, ಎಲ್ಲಾ ಕ್ಷಯ ರೋಗಿಗಳಿಗೆ ಯು.ಡಿ.ಎಸ್‌.ಟಿ. ಪರೀಕ್ಷೆ ಆಗಿರಬೇಕು.


ಈ ಮೇಲ್ಕಾಣಿಸಿದ ಮಾನದಂಡಗಳು ಪೂರೈಸಿರುವ ಗ್ರಾಮ ಪಂಚಾಯಿತಿಗಳನ್ನು ಕ್ಷಯ ಮಕ್ತ ಗ್ರಾಮ ಪಂಚಾಯಿತಿಗಳೆಂದು ತನಿಖಾತಂಡವು ಪರಿಶೀಲಿಸಿ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ರವರಿಗೆ ವರದಿಯನ್ನು ಸಲ್ಲಿಸುವರು. ಮಾನ್ಯ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸರಕಾರಕ್ಕೆ ವರದಿಯನ್ನು ಸಲ್ಲಿಸಿ ಮಾರ್ಚ್ 24 ವಿಶ್ವ ಕ್ಷಯ ರೋಗ ದಿನಾಚರಣೆ ಯಂದು ಮಾನ್ಯ ಮುಖ್ಯಮಂತ್ರಿಗಳು ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಳ ಯಾದಿಯನ್ನು ಪ್ರಕಟಿಸುವರು.

ಸಿರಸಿ ತಾಲೂಕಿನ 13ಗ್ರಾಮ ಪಂಚಾಯತಿಗಳು ಕ್ಷಯ ಮುಕ್ತ ಪಂಚಾಯತ ಎಂದು ಆಯ್ಕೆ ಆಗಿದ್ದು ಇದಕ್ಕೆ ಶ್ರಮಿಸಿದ ಎಲ್ಲಾ ಸಂಬಂದಪಟ್ಟ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಹಾಗೂ ಸಿಬ್ಬಂದಿಗಳಿಗೆ, ಕ್ಷಯ ರೋಗ ಘಟಕದ ಸಿಬ್ಬಂದಿಗಳಿಗೆ ಹಾಗೂ ಸಹಕರಿಸಿದ ತಾಲೂಕಿನ ಎಲ್ಲಾ ಸಿಬ್ಬಂದಿಗಳಿಗೆ ಮಾನ್ಯ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಮಧುಕರ ಪಾಟೀಲರವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ತನಿಖಾ ತಂಡದ ಉಸ್ತುವಾರಿಗಳಾದ ಜಿಲ್ಲಾ ಡಾಟ್ ಪ್ಲಸ್ ಮೇಲ್ವಿಚಾರಕರಾದ ಧರ್ಮು ಗೌಡ, ಜಿಲ್ಲಾ ಪಿಪಿಎಂ ಸಂಯೋಜಕ ಪ್ರಜ್ವಲ, ಹಿರಿಯ ಕ್ಷಯ ರೋಗ ಮೇಲ್ವಿಚಾರಕ ಉದಯಶಂಕರ ಭಂಡಾರಿ, ದತ್ತಾತ್ರೇಯ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

About The Author

error: Content is protected !!