ಭಟ್ಕಳ: ಕಪ್ಪೆಚಿಪ್ಪಿನ ದುರಂತದಲ್ಲಿ 11 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬಗಳಿಗೆ ಮಾನವೀಯ ನೆರವು ನೀಡುವ ಉದ್ದೇಶದಿಂದ ಭಟ್ಕಳ ತಾಲೂಕು ಆರ್ಯ ಈಡಿಗ ನಾಮಧಾರಿ ಬಿಲ್ಲವ ನೌಕರಿ ವೃಂದದ ವತಿಯಿಂದ ಸಂಗ್ರಹಿಸಲಾದ ಆರ್ಥಿಕ ಸಹಾಯಧನವನ್ನು ಸಂತ್ರಸ್ತ ಕುಟುಂಬಗಳಿಗೆ ವಿತರಿಸಲಾಯಿತು.
ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಂತ್ರಸ್ತ ಕುಟುಂಬಗಳ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ, ಒಟ್ಟು 9 ಕುಟುಂಬಗಳಿಗೆ ಸಂಗ್ರಹಿಸಲಾದ ನೆರವಿನ ಮೊತ್ತವನ್ನು ಸಮಾನವಾಗಿ ಹಂಚಿಕೆ ಮಾಡಿ ನೀಡಿದರು. ದುಃಖದ ಸಂದರ್ಭದಲ್ಲಿ ಸಮಾಜದ ವತಿಯಿಂದ ನೀಡಲಾದ ಈ ನೆರವು ಕುಟುಂಬಗಳಿಗೆ ಸಾಂತ್ವನ ಹಾಗೂ ಧೈರ್ಯ ತುಂಬುವ ಪ್ರಯತ್ನವಾಗಿದೆ ಎಂದು ಸಂಘಟನೆಯವರು ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಆರ್. ನಾಯ್ಕ, ಗೋಪಾಲ ನಾಯ್ಕ, ಮಂಜುನಾಥ ಎನ್. ನಾಯ್ಕ, ದೇವಿದಾಸ ನಾಯ್ಕ, ವಸಂತ ನಾಯ್ಕ, ವೆಂಕಟೇಶ ನಾಯ್ಕ, ರಾಮ ನಾಯ್ಕ ಸೇರಿದಂತೆ ಹಳೆಕೋಟೆ ದೇವಸ್ಥಾನದ ಅಧ್ಯಕ್ಷರು, ಕಾರ್ಯದರ್ಶಿಗಳು, ಮೊಕ್ತೇಸರರು ಹಾಗೂ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
About The Author


More Stories
ರಾಷ್ಟ್ರೀಯ ಪೊಲೀಸ್ ಬೈಕ್ ರ್ಯಾಲಿಗೆ ಅದ್ಧೂರಿ ಸ್ವಾಗತ; ‘ಮಾದಕವಸ್ತು ಮುಕ್ತ ಭಾರತ’ಕ್ಕೆ ಜಾಗೃತಿ
ಶಿರಾಲಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ತಾಲೂಕು ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆ
ಅಭಿಮಾನಿಯ ಮನೆಗೆ ಭೇಟಿ ನೀಡಿ ದುರ್ಗಾದೇವಿ ದರ್ಶನ ಪಡೆದ ಉಪಸಭಾಪತಿ ಮಂಕಾಳ ವೈದ್ಯ