ಭಟ್ಕಳ: ಸ್ಕೂಟರ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ವೃದ್ಧರೊಬ್ಬರು ಮೃತಪಟ್ಟ ಘಟನೆ ಎನ್.ಎಚ್-66ರಲ್ಲಿ ನಡೆದಿದೆ.
ನವಾಯತ್ ಕಾಲೋನಿಯ ನಿವಾಸಿ ನಿಸಾರ್ ಅಲಿ ಡಾಟಾ (78) ಮೃತಪಟ್ಟವರು.

ಮೆಹತಾಬ್ ಹುಸೇನ್ ಅವರು ಭಟ್ಕಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ನಿಸಾರ್ ಅಲಿ ಡಾಟಾ ಅವರು ನಮಾಜ್ ಸಲ್ಲಿಸಲು ಸುಜುಕಿ ಆಕ್ಸೆಸ್ ಸ್ಕೂಟರ್‌ನಲ್ಲಿ ಸಿಟಿ ಲೈಟ್ ಹೋಟೆಲ್ ಕ್ರಾಸ್ ಕಡೆಯಿಂದ ಎನ್.ಎಚ್-66 ರಸ್ತೆ ದಾಟುತ್ತಿದ್ದ ವೇಳೆ, ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬರುತ್ತಿದ್ದ ಸುಜುಕಿ ಬರ್ಗ್‌ಮನ್ ಸ್ಕೂಟರ್ ಸವಾರ ವಸಂತ ಮಂಜುನಾಥ ನಾಯ್ಕ ಅಲ್‌ತುರ್ಪಾ ಹೋಟೆಲ್ ಎದುರು ಡಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಿಕ್ಕಿಯ ಪರಿಣಾಮ ಇಬ್ಬರೂ ಸವಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ನಿಸಾರ್ ಅಲಿ ಡಾಟಾ ಅವರ ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ವಸಂತ ಮಂಜುನಾಥ ನಾಯ್ಕ ಅವರಿಗೂ ಗಾಯಗಳಾಗಿವೆ.
ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
About The Author


More Stories
AITM ಭಟ್ಕಳದಲ್ಲಿ IPR ಮತ್ತು ಪೇಟೆಂಟ್ಗಳ ಕುರಿತು ರಾಷ್ಟ್ರೀಯ ಮಟ್ಟದ ಆನ್ಲೈನ್ ಕಾರ್ಯಾಗಾರ
ಸತತ 5ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗೆದ್ದ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜು
ಯಶಸ್ವಿಯಾಗಿ ನಡೆದ ಶಿರಾಲಿ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟ: ಜನತಾ ವಿದ್ಯಾಲಯ ಸಮಗ್ರ ವೀರಾಗ್ರಣಿ