November 19, 2025

ಭಟ್ಕಳ ತಾಲೂಕಿನಲ್ಲಿ ದೋಣಿ ದುರಂತ

ಭಟ್ಕಳ ; ಅಳ್ವೆಕೋಡಿ ಬಂದರಿನಿAದ ಬುಧವಾರ ಮೀನುಗಾರಿಕೆಗೆ ತೆರಳಿದ ಸಾಂಪ್ರದಾಯಿಕ ನಾಡದೋಣಿಯೊಂದು ಸಮುದ್ರದ ಅಲೆಗೆ ಸಿಲುಕಿ ಮುಳುಗಿದ್ದು, ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ.

ಬುಧವಾರ ಮದ್ಯಾಹ್ನ 6 ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದ ಅಲೆಗೆ ನಾಡದೋಣಿ ಮುಗಿಚಿದ್ದು ದೋಣಿಯಲ್ಲಿದ್ದವರು ನೀರುಪಾಲಾಗಿದ್ದರು. ಘಟನೆ ತಿಳಿದ ಸ್ಥಳಿಯ ಮೀನುಗಾರರು ನೀರು ಪಾಲಾದವರನ್ನು ರಕ್ಷಿಸಲು ಕಾರ್ಯಚರಣೆಗೆ ಇಳಿದಿದ್ದಾರೆ. ಈ ಸಂದರ್ಬದಲ್ಲಿ ದೋಣಿ ಮಾಲೀಕ ಮನೋಹರ ಮೊಗೇರ ಮತ್ತು ಬೆಳ್ನಿಯ ಮೂಲದ ರಾಮ ಖಾರ್ವಿ ಇಬ್ಬರನ್ನು ರಕ್ಷಿಸಿದ್ದಾರೆ. ಇವರನ್ನು ಕರಾವಳಿ ಭದ್ರತಾ ಪಡೆ ಪಿಎಸ್‌ಐ ವೀಣಾ ಚಿತ್ರಾಪುರ ನೇತೃತ್ವದಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಮಕೃಷ್ಣ ಮಂಜು ಮೊಗೇರ( 40) ಜಾಲಿಕೊಡಿ, ಸತೀಶ್ ತಿಮ್ಮಪ್ಪ ಮೊಗೇರ (26), ಅಳ್ವೆಕೋಡಿಯ, ಗಣೇಶ್ ಮಂಜುನಾಥ ಮೊಗೇರ (27) ಅಳ್ವೇಕೋಡಿ ಮುಗ್ರಿ ಮನೆಯ ಕನ್ನಡ ಶಾಲೆಯ ನಿಶ್ಚಿತ ಮೊಗೇರ( 30 )ಈ ನಾಲ್ಕು ಜನ ನಾಪತ್ತೆಯಾದವರಾಗಿದ್ದಾರೆ.

ಸ್ಥಳಕ್ಕೆ ಹರಿದು ಬಂದ ಜನಸಾಗರ;
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಾವಿರಾರು ಸಂಖ್ಯೆಯ ಜನರು ಜಮಾಯಿಸಿದ್ದಾರೆ. ಮೀನುಗಾರಿಕೆ ಇಲಾಖೆ ಎಡಿ ರೇಣುಕಾಸ್ವಾಮಿ, ಕರಾವಳಿ ಕೋಸ್ಟಲ್ ಪಡೆಯ ಸಿ.ಪಿ.ಐ ವಸಂತ ಆಚಾರ ಸೇರಿದಂತೆ ಇತರ ಅಧಿಕಾರಿಗಳು ಆಗಮಿಸಿದ್ದಾರೆ. ಪ್ರಕ್ಷÄಬ್ದ ಕಡಲಿನಲ್ಲೆ ರಕ್ಷಣಾ ಕಾರ್ಯ ಮುಂದುವರೆದಿದ್ದು, ಮೀನುಗಾರರು ಲೈಫ್ ಜಾಕೆಟ್ ಧರಿಸಿದ್ದರೆ ಪ್ರಾಣಾಪಾಯದಿಂದ ಪಾರಾಗುತ್ತಿದ್ದರು ಎನ್ನಲಾಗುತ್ತಿದೆ. ಕರಾವಳಿಯಾದ್ಯಂತ ಪದೆ ಪದೆ ಇಂತಹ ಘಟನೆಗಳು ನಡೆಯುತ್ತಿದ್ದು ಅಮೂಲ್ಯವಾದ ಜೀವವನ್ನು ಉಳಿಸಿಲು ಮೀನುಗಾರಿಕೆ ತೆರಳುವ ಸಂದರ್ಬದಲ್ಲಿ ಲೈಫ್ ಜಾಕೇಟ್ ಧರಿಸಿ ಹೋಗುವಂತೆ ಮನವಿ ಮಾಡಿದ್ದಾರೆ.

About The Author

error: Content is protected !!