ಭಟ್ಕಳ: ತಾಲೂಕಿನ ಕೋಣಾರದ ವಸತಿ ಪ್ರದೇಶದಲ್ಲಿನ ಸಿಸಿಕ್ಯಾಮೆರಾದಲ್ಲಿ ಎರಡು ಚಿರತೆಗಳು ಓಡಾಡಿದ ದೃಶ್ಯ ಸೆರೆಯಾಗಿದ್ದು ಜನತೆ ತೀವ್ರ ಆತಂಕಕ್ಕೆ ಈಡಾಗಿರುವ ಘಟನೆ ವರದಿಯಾಗಿದೆ.

ಕೋಣಾರದ ಮಂಜುನಾಥ ಹೆಬ್ಬಾರ್ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಕ್ಯಾಮೆರಾದಲ್ಲಿ ಸುಮಾರು 2ರಿಂದ 3 ವರ್ಷ ವಯಸ್ಸಿನ 2 ಚಿರತೆಗಳು ಒಂದಾದ ನಂತರ ಒಂದರಂತೆ ಗಂಭೀರವಾಗಿ ನಡೆದು ಕೊಂಡು ಬರುತ್ತಿರುವ ದೃಶ್ಯ ದಾಖಲಾಗಿತ್ತು. ಇದನ್ನು ಕಂಡ ಮನೆಯವರು ಎಲ್ಲರಿಗೂ ಸುದ್ದಿ ಮುಟ್ಟಿಸಿದ್ದಾರೆ. ಹಾಗಾಗಿ ಗ್ರಾಮಸ್ಥರಲ್ಲಿ ಭಯ ಮೂಡಿದೆ ಎನ್ನಲಾಗಿದೆ. ಈಗಾಗಲೇ ಊರಿನಲ್ಲಿರುವ ನಾಯಿಯೊಂದು ಕಣ್ಮರೆಯಾಗಿದ್ದು ಚಿರತೆಗೆ ಆಹಾರವಾಯಿತೇ? ಎನ್ನುವುದು ಗ್ರಾಮಸ್ಥರ ಸಂಶಯವಾಗಿದೆ.
ಚಿರತೆ ಕಂಡಿರುವುದು ನಿಜ: ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆಯ ಓಡಾಟವನ್ನು ಇಲಾಖೆಯೂ ಗಮನಿಸಿದೆ. ಸಿಬ್ಬಂದಿ ರಾತ್ರಿ ಗಸ್ತು ಹೋಗುವ ಸಮಯ ದಲ್ಲಿ ಚಿರತೆ ಆ ಭಾಗದಲ್ಲಿ ಕಾಣಿಸಿಕೊಂಡಿದ್ದು ಇದ್ದು ಆಹಾರ ಅರಸಿ ಬರುತ್ತಿವೆ ಎಂದು ಹೇಳಿದ್ದಾರೆ. ಜನವ ಸತಿ ಪ್ರದೇಶಕ್ಕೆ ಬಂದರೆ ಹಾಗೂ ಜನ ಜಾನುವಾರುಗಳಿಗೆ ತೊಂದರೆ ಕೊಟ್ಟರೆ ಅವುಗಳನ್ನು ಅಲ್ಲಿಂದ ಸ್ಥಳಾಂತರಿಸಲು ಇಲಾಖೆ ಕ್ರಮ ಕೈಗೊಳ್ಳಲಿದೆ. ರಾತ್ರಿ ಗಸ್ತು ಹೆಚ್ಚು ಮಾಡಿ ಆ ಭಾಗದಿಂದ ದಟ್ಟಡವಿಯ ಕಡೆಗೆ ಹೋಗುವಂತೆ ಪಟಾಕಿ ಸಿಡಿಸುವ ಮೂಲಕ ಕ್ರಮ ಕೈಗೊಳ್ಳಲಾಗಿದೆ

More Stories
ಮುರ್ಡೇಶ್ವರದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಸ್ವರ್ಣ ಪಾದುಕಾ ಸಂಚಾರ
19 ಕೋಟಿ ರೂ. ಖಾರ್ಲಾಂಡ್ ಕಾಮಗಾರಿ ಉದ್ಘಾಟನೆ – ಸಚಿವ ಮಂಕಾಳ ವೈದ್ಯ
ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ 90ನೇ ವರ್ಷದ ಸಂಭ್ರಮ: ನೂತನ ಕಟ್ಟಡ ಉದ್ಘಾಟನೆ ಹಾಗೂ ಗುರುವಂದನಾ ಕಾರ್ಯಕ್ರಮ