June 7, 2026

ಹಿರೇಗುತ್ತಿ ಹೈಸ್ಕೂಲ್‌ನಲ್ಲಿ ರಜಾ ಅವಧಿಯ ವಿಶೇಷ ಉಪನ್ಯಾಸ ಕರ‍್ಯಕ್ರಮ

ಕುಮಟಾ: ವಿದ್ಯರ‍್ಥಿಗಳ ಶೈಕ್ಷಣಿಕ ಬೆಳವಣಿಗೆ ಹಾಗೂ ರ‍್ವಾಂಗೀಣ ವ್ಯಕ್ತಿತ್ವ ವಿಕಸನದ ಉದ್ದೇಶದಿಂದ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ವತಿಯಿಂದ ಏಪ್ರಿಲ್-ಮೇ ರಜಾ ಅವಧಿಯಲ್ಲಿ ವಿಶೇಷ ಉಪನ್ಯಾಸ ಹಾಗೂ ತರಬೇತಿ ಕರ‍್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕರ‍್ಯಕ್ರಮದಲ್ಲಿ ಹಿರೇಗುತ್ತಿ ಹೈಸ್ಕೂಲ್ ಹಾಗೂ ಸುತ್ತಮುತ್ತಲಿನ ವಿವಿಧ ಪ್ರಾಥಮಿಕ ಶಾಲೆಗಳ ವಿದ್ಯರ‍್ಥಿಗಳು ಉತ್ಸಾಹದಿಂದ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

ಕರ‍್ಯಕ್ರಮದಲ್ಲಿ ಮಾತನಾಡಿದ ಎನ್. ರಾಮು ಹಿರೇಗುತ್ತಿ, “ಶಾಲೆಯ ಆಡಳಿತ ಮಂಡಳಿಯವರು ಶಿಕ್ಷಣವು ಕೇವಲ ಶಾಲಾ ದಿನಗಳಿಗೆ ಸೀಮಿತವಾಗದೆ ರಜಾ ಅವಧಿಯಲ್ಲಿಯೂ ವಿದ್ಯರ‍್ಥಿಗಳಿಗೆ ಜ್ಞಾನರ‍್ಧಕ ಚಟುವಟಿಕೆಗಳು ದೊರೆಯಬೇಕು ಎಂಬ ಆಶಯ ಹೊಂದಿದ್ದಾರೆ. ವಿದ್ಯರ‍್ಥಿಗಳಲ್ಲಿ ಕಲಿಕೆಯ ಆಸಕ್ತಿ, ಆತ್ಮವಿಶ್ವಾಸ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ವಿಶೇಷ ಉಪನ್ಯಾಸ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.

ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಸಂಪನ್ಮೂಲ ವ್ಯಕ್ತಿ ಕಲ್ಪನಾ ನಾಯಕ “ಅವರು ಮೌಲ್ಯ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನ ವಿಷಯದ ಕುರಿತು ಉಪನ್ಯಾಸ ನೀಡಿ, ಉತ್ತಮ ಮೌಲ್ಯಗಳು ವಿದ್ಯರ‍್ಥಿಗಳ ಜೀವನದ ನಿಜವಾದ ಸಂಪತ್ತಾಗಿದ್ದು, ಶಿಕ್ಷಣದೊಂದಿಗೆ ಸಂಸ್ಕಾರವೂ ಅಷ್ಟೇ ಮುಖ್ಯ” ಎಂದು ತಿಳಿಸಿದರು. ಹೈಸ್ಕೂಲ್‌ನ ಚಿತ್ರಕಲಾ ಶಿಕ್ಷಕರಾದ ಬಾಲಚಂದ್ರ ಅಡಿಗೋಣ “ಅವರು ಅಂದವಾದ ಬರವಣಿಗೆ ಮತ್ತು ಕ್ರಾಫ್ಟ್ ಕಲೆ ಕುರಿತು ಪ್ರಾಯೋಗಿಕ ಮಾಹಿತಿ ನೀಡಿ, ವಿದ್ಯರ‍್ಥಿಗಳಲ್ಲಿ ಸೃಜನಶೀಲತೆ ಮತ್ತು ಕಲಾತ್ಮಕ ಕೌಶಲ್ಯಗಳ ಬೆಳವಣಿಗೆಯ ಮಹತ್ವವನ್ನು ವಿವರಿಸಿದರು”.

ಗಣಿತ ಶಿಕ್ಷಕರಾದ ಮದನ ಜಿ. ನಾಯಕ ಅವರು “ಗಣಿತ ವಿಷಯವನ್ನು ಸುಲಭ ಮತ್ತು ಆಸಕ್ತಿದಾಯಕವಾಗಿ ರ‍್ಥೈಸುವ ವಿಧಾನಗಳ ಕುರಿತು ಬೋಧನೆ ನಡೆಸಿ, ವಿದ್ಯರ‍್ಥಿಗಳಲ್ಲಿ ಗಣಿತದ ಬಗ್ಗೆ ಆತ್ಮವಿಶ್ವಾಸ ಮೂಡಿಸಿದರು.” ಮಹಿಮ ಗೌಡ ಅವರು “ವಿಜ್ಞಾನ ವಿಷಯದ ಕುರಿತು ಉಪನ್ಯಾಸ ನೀಡಿ, ದೈನಂದಿನ ಜೀವನದಲ್ಲಿ ವಿಜ್ಞಾನದ ಉಪಯೋಗ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವನ್ನು ತಿಳಿಸಿದರು”.

ಸ್ವಾತಿ ಗೌಡ, ಗೋರ‍್ಣ ಅವರು “ಇಂಗ್ಲಿಷ್ ವ್ಯಾಕರಣದ ಮೂಲಭೂತ ಅಂಶಗಳನ್ನು ಸರಳವಾಗಿ ವಿವರಿಸಿ, ವಿದ್ಯರ‍್ಥಿಗಳ ಭಾಷಾ ಕೌಶಲ್ಯ ವೃದ್ಧಿಗೆ ಮರ‍್ಗರ‍್ಶನ ನೀಡಿದರು.” ರಜಾ ಅವಧಿಯಲ್ಲಿ ಆಯೋಜಿಸಲಾದ ಈ ವಿಶೇಷ ತರಗತಿಗಳು ವಿದ್ಯರ‍್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಹಿರೇಗುತ್ತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಿದ್ಯರ‍್ಥಿಗಳು ಇದರ ಸದುಪಯೋಗ ಪಡೆದುಕೊಂಡರು. ಶಿಕ್ಷಣದ ಜೊತೆಗೆ ಮೌಲ್ಯಗಳು, ಕೌಶಲ್ಯಗಳು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಿದ ಈ ಕರ‍್ಯಕ್ರಮವು ವಿದ್ಯರ‍್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಿತು.

…… ವರದಿ: ಎನ್ ರಾಮು ಹಿರೇಗುತ್ತಿ

About The Author

error: Content is protected !!