August 30, 2025

ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ.

ಮುಂಡ್ಕೂರು: ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್( ರಿ). ಮುಂಡ್ಕೂರು ಇದರ ವತಿಯಿಂದ ಗಣೇಶ ಚತುರ್ಥಿಯ ಪ್ರಯುಕ್ತ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಮುಂಡ್ಕೂರು ಭಾರ್ಗವಿ ಸಮುದಾಯ ಭವನದಲ್ಲಿ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ರಾಮದಾಸ್ ಆಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೀಡಿದರು.

ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಬಂಧಕ ಅರುಣ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ತಮ್ಮಲ್ಲಿರುವ ಪ್ರತಿಭೆ ಅನಾವರಣಕ್ಕೆ ಇಂಥ ವೇದಿಕೆ ಪೂರಕವಾಗಲಿದೆ ಎಂದರು.

ವೇದಿಕೆಯಲ್ಲಿ ವರದಿಗಾರ ಉದಯ ಮುಂಡ್ಕೂರು ಗಾಯತ್ರಿ ಆಚಾರ್ಯ ಎಸ್.ಡಿ.ಪಿ.ಎಪ್ ಫ್ರೆಂಡ್ಸ್ ಕ್ಲಬ್ಬ್ ನ ಅಧ್ಯಕ್ಷ ಗಣೇಶ್ ಕಾರ್ಯದರ್ಶಿ ನಾಗರಾಜ್ ಕೋಶಾಧಿಕಾರಿ ಪ್ರತೀಕ್, ಉಪಾಧ್ಯಕ್ಷ ಪ್ರಶಾಂತ್ ಆಚಾರ್ಯ ಹರೀಶ್ ಸಪಳಿಗ ಅನಿಲ್ ಜೋಗಿ ಗಿರೀಶ್ ಆಚಾರ್ಯ ವರುಣ್ ಸಪಳಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ನಾಗರಾಜ ಸ್ವಾಗತಿಸಿ ,ನಿತೇಶ್ ರಾಜ ಮುಗುಳಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು 50 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ವರದಿ : ಅರುಣ ಭಟ್ ಕಾರ್ಕಳ

About The Author