November 18, 2025

ಶ್ರೀಮದ್ ಭುವನೇಂದ್ರ ಪ್ಫೌಢಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ

ಕಾರ್ಕಳ : ಯೋಗ್ಯವಾದ ದಾನ, ಸತ್ಪಾತ್ರರಿಗೆ ನೀಡಿದ ದಾನ ಮತ್ತು ಗುಪ್ತವಾಗಿ ಮಾಡಿದ ದಾನ ಇವುಗಳು ಅತ್ಯಂತ ಶ್ರೇಷ್ಠ ದಾನ ಎಂದು ಚಾರ್ಟರ್ಡ್ ಅಕೌಂಟೆAಟ್ ಕೆ. ಕಮಲಾಕ್ಷ ಕಾಮತ್ ಹೇಳಿದರು.

ಅವರು ಶ್ರೀಮದ್ ಭುವನೇಂದ್ರ ಪ್ಫೌಢಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮೇಲಿನ ಮಾತನ್ನು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್. ವಿ. ಎಸ್. ವಿ. ಫಂಡಿನ ಅಧ್ಯಕ್ಷ ಎ. ಯೋಗೀಶ ಹೆಗ್ಡೆ ವಹಿಸಿದ್ದರು. ಉದ್ಯಮಿ ಬೋಳ ರಘುರಾಮ ಕಾಮತ್ ಹಾಗೂ ಶಾಲಾ ಸಂಚಾಲಕ ನರೇಂದ್ರ ಕಾಮತ್ ಕೆ. ವಿದ್ಯಾರ್ಥಿವೇತನ ವಿತರಿಸಿದರು. ಮುಖ್ಯಶಿಕ್ಷಕ ನಾರಾಯಣ ಶೆಣೈ ಸ್ವಾಗತಿಸಿದರು. ಪೂರ್ಣಿಮಾ ಪ್ರಭು ದಾನಿಗಳ ಸ್ಮರಣೆ ಮಾಡಿದರು. ವೀಣಾ ಬಿ. ವಿದ್ಯಾರ್ಥಿವೇತನದ ವಿವರ ನೀಡಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ವಿದ್ಯಾ ಕಿಣಿ ವಂದಿಸಿದರು. ಶ್ರೀಲಕ್ಷ್ಮೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ವರದಿ : ಅರುಣ ಭಟ್ ಕಾರ್ಕಳ

About The Author

error: Content is protected !!