September 11, 2025

ಸರಕಾರಿ ಪದವಿ ಪೂರ್ವ ಕಾಲೇಜು ಕಾರ್ಕಳ ರಂಗಮAದಿರ ಉದ್ಘಾಟಣೆ

ಕಾರ್ಕಳ : ಇಲ್ಲಿಯ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಿಎ ಕಮಲಾಕ್ಷ ಕಾಮತ್ ರವರು ತನ್ನ ತಂದೆ ತಾಯಿಯವರ ಸವಿ ನೆನಪಿನಲ್ಲಿ ನೂತನವಾಗಿ ನಿರ್ಮಿಸಿಕೊಟ್ಟ ರಂಗಮAದಿರದ ಉದ್ಘಾಟನಾ ಕಾರ್ಯಕ್ರಮ ದಿನಾಂಕ 04/09/2025ರ ಗುರುವಾರದಂದು ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ನಿವೃತ್ತ ಇಸ್ರೋ ವಿಜ್ಞಾನಿ ಶ್ರೀಯುತ ಇಡ್ಯಾ ಜನಾರ್ಧನ್ ವಹಿಸಿದ್ದರು. ದಾನಿಗಳಾದ ಕಮಲಾಕ್ಷ ಕಾಮತ್ ಹಾಗೂ ಕಟ್ಟಡದ ಇಂಜಿನಿಯರ್ ಶ್ರೀ ಪ್ರಸಾದ್ ಬೆಳ್ಳಿರಾಯರವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತ ಕಮಲಾಕ್ಷ ಕಾಮತ್ ರವರು ತಂದೆ ತಾಯಿ ತಮ್ಮ ಬದುಕಿಗೆ ನೀಡಿದ ಆದರ್ಶಗಳನ್ನು ಸ್ಮರಿಸಿ ಅದನ್ನು ವಿದ್ಯಾರ್ಥಿಗಳಿಗೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು. ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪದವಿ ಪೂರ್ವ ಇದರ ಉಪನಿರ್ದೇಶಕರಾದ ಶ್ರೀಯುತ ಮಾರುತಿ, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ, ಶ್ರೀಮತಿ ಗಿರಿಜಮ್ಮ, ಸಿ ಬಿ ಸಿ ಕೋಶಾಧಿಕಾರಿ ನಿತ್ಯಾನಂದ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕಾ ಅಡ್ಯಂತಾಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀ ವಿಜಯ ಶೆಟ್ಟಿ, ಸಿಬಿಸಿ ಸದಸ್ಯರಾದ ನಾಗೇಶ ದೇವಾಡಿಗ ಉಪಸ್ಥಿತರಿದ್ದರು.
ಶಾಂತಿ ವಿಟಲ್ ಟ್ರಸ್ಟ್ ವತಿಯಿಂದ ಕೊಡ ಮಾಡಲಾದ ವಿದ್ಯಾರ್ಥಿ ವೇತನವನ್ನು ಆಯ್ದ ಅರ್ಹ ಎಂಟು ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ರೂಪಾಯಿಯಂತೆ ನೀಡಲಾಯಿತು, ಫಲಾನುಭವಿಗಳ ಪಟ್ಟಿಯನ್ನು ಕನ್ನಡ ಉಪನ್ಯಾಸಕರಾದ ಶ್ರೀಮತಿ ಜ್ಯೋತಿ ವಾಚಿಸಿದರು. ಪ್ರಾಂಶುಪಾಲರಾದ ಶ್ರೀಮತಿ ಅನ್ನಪೂರ್ಣ ಕಾಮತ್ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯಸ್ಥರಾದ ಶ್ರೀಮತಿ ಮಲ್ಲಿಕಾ ವಂದಿಸಿದರು ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀ ಸದಾನಂದ ಕಾರ್ಯಕ್ರಮ ನಿರೂಪಿಸಿದರು.
ವರದಿ :ಅರುಣ ಭಟ್ ಕಾರ್ಕಳ

About The Author

error: Content is protected !!