ಭಟ್ಕಳ: ಜನರ ರಕ್ಷಣೆಯ ಜವಾಬ್ದಾರಿ ಹೊತ್ತು, ಕಾನೂನು-ಸುವ್ಯವಸ್ಥೆ ಕಾಪಾಡುವ ಹಾದಿಯಲ್ಲಿ ನಿರಂತರ ಒತ್ತಡ ಅನುಭವಿಸುತ್ತಿರುವ ಪೊಲೀಸರಿಗೆ ಮಾನಸಿಕ-ದೈಹಿಕ ಸದೃಢತೆ ಹಾಗೂ ಒತ್ತಡ ನಿರ್ವಹಣೆ ಕುರಿತ ಕಾರ್ಯಾಗಾರ ಭಟ್ಕಳದಲ್ಲಿ ಆಯೋಜನೆಯಾಯಿತು.
ಎ.ಕೆ. ಹಫೀಜ್ಕಾ ಮೆಮೋರಿಯಲ್ ಹಾಲ್‌ನಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಪ್ರೊ. ಪ್ರವೀಣ್ ವಿ.ಜಿ. ಅವರು ಮಾತನಾಡಿ, ಪೊಲೀಸರ ಬದುಕಿನಲ್ಲಿ ಮಾನಸಿಕ ಸಮತೋಲನದ ಅಗತ್ಯತೆಯನ್ನು ಒತ್ತಿ ಹೇಳಿದರು. ಸರಳ ವ್ಯಾಯಾಮ, ಆರೋಗ್ಯಕರ ಆಹಾರ ಪದ್ಧತಿ, ಮಧುಮೇಹ-ರಕ್ತದೊತ್ತಡ ನಿಯಂತ್ರಣ ಮಾರ್ಗಗಳನ್ನು ವಿವರಿಸಿ, ಆಕ್ಯೂಪ್ರೆಸ್ಸರ್ ಸಾಧನ ಬಳಕೆಯ ಕುರಿತು ತಿಳಿಸಿದರು.
ನಿರಂತರ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಕಾರ್ಯಪಟುವಿಗೆ ಇದು ಬಲ ತುಂಬುವ ಪ್ರಯತ್ನವಾಗಿದ್ದು, ಇಲಾಖೆಯಲ್ಲಿ ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಒತ್ತು ನೀಡಬೇಕಿದೆ ಎಂಬ ಸಂದೇಶ ಈ ಮೂಲಕ ಮತ್ತೊಮ್ಮೆ ಸ್ಪಷ್ಟವಾಯಿತು. ಕಾರ್ಯಕ್ರಮದಲ್ಲಿ ಸಿಪಿಐ ದಿವಾಕರ, ಸಿಪಿಐ ಮಂಜುನಾಥ ಲಿಂಗಾರೆಡ್ಡಿ, ಎಸ್‌ಐ ನವೀನ್ ನಾಯ್ಕ, ಎಸ್‌ಐ ರನ್ನುಗೌಡ, ಎಸ್‌ಐ ತಿಮ್ಮಪ್ಪ ಹಾಗೂ ಎಸ್‌ಐ ರಾಥೋಡ್ ಉಪಸ್ಥಿತರಿದ್ದರು.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ