October 6, 2025

ಮುರುಡೇಶ್ವರ ಬೀಚ್ ಬಳಿ ಗಾಂಜಾ ಸೇವನೆ ತಮಿಳುನಾಡು ಯುವಕ ವಶಕ್ಕೆ

ಭಟ್ಕಳ: ಮುರುಡೇಶ್ವರ ಬೀಚ್ ಸಮೀಪ ಗಾಂಜಾ ಸೇವಿಸುತ್ತಿದ್ದ ತಮಿಳುನಾಡಿನ ಯುವಕನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೆಳಕಿಗೆ ಬಂದಿದೆ.
ಆರೋಪಿತ ಜೆ. ಹರಿಶಕುಮಾರ,ತಮಿಳುನಾಡು ನಿವಾಸಿ, ಮುರುಡೇಶ್ವರ ಬೀಚ್ ಎಡಬದಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದನೆಂಬ ಮಾಹಿತಿ ಆಧಾರದಲ್ಲಿ ಪಿಎಸ್‌ಐ ಹಣಮಂತ ಬಿರಾದಾರ ನೇತೃತ್ವದ ತಂಡ ದಾಳಿ ನಡೆಸಿ ವಶಕ್ಕೆ ಪಡೆದರು.

ನಂತರ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವರದಿಯಲ್ಲಿ ಆರೋಪಿತನು ಗಾಂಜಾ ಸೇವಿಸಿದ್ದಾನೆಂಬುದು ದೃಢಪಟ್ಟಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

About The Author

error: Content is protected !!