ಭಟ್ಕಳ: ಅವರು ಬಲ್ಸೆಯ ಮೋದಕಪ್ರಿಯ ಆವರಣದಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಬೀನಾ ವೈದ್ಯ ನೇತೃತ್ವದಲ್ಲಿ ಎರ್ಪಡಿಸಲಾಗಿದ್ದ ತಾಲೂಕಾ ಮಹಿಳಾ ಸಮಾವೇಶವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ರಾಜ್ಯದಲ್ಲಿರುವ ನಮ್ಮ ಸರಕಾರ 5 ಗ್ಯಾರೆಂಟಿಯನ್ನು ನುಡಿದಂತೆಯೇ ನೀಡಿ ನಡೆದುಕೊಂಡಿದೆ. ಇದರಿಂದ ಮಹಿಳೆಯವರು ಸ್ವಾವಲಂಬಿಗಳಾಗಲು ಸಹಕಾರಿಯಾಗಿದೆ. ಕೊಟ್ಟ ಭರವಸೆಯನ್ನು ಈಡೇರಿಸಿದ ನಮ್ಮ ಸರಕಾರ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿದೆ ಎಂದರು. ನನ್ನ ಕ್ಷೇತ್ರದಲ್ಲಿ ಸುಮಾರು 10 ಸಾವಿರ ಜನರಿಗೆ ಉದ್ಯೋಗ ಕೊಡುವ ಉದ್ದೇಶವನ್ನು ಹೊಂದಿದ್ದು ಅದಕ್ಕಾಗಿ ಈಗಾಗಲೇ ಜಾಗಾ ಖರೀಧಿ ಮಾಡಿದ್ದೇನೆ. ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು ಸೇರಿದಂತೆ ಮೆಡಿಕಲ್ ಹಬ್ ನಿರ್ಮಾಣಕ್ಕಾಗಿ ಸರಕಾರದ ನಿಯಮಾವಳಿಯಂತೆ 30 ಎಕರೆ ಜಾಗಾ ಕೇಳಿದ್ದೇನೆ. ಅದಕ್ಕೂ ಅಪಸ್ವರ ಎತ್ತಿದವರಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಜನತೆಯೇ ಉತ್ತರ ಕೊಡಲಿದ್ದಾರೆ ಎಂದ ವೈದ್ಯ ನನ್ನದೇನಿದ್ದರೂ ಕೂಡಾ ಜನರ ಕಾರ್ಯ ಮಾಡುವುದಾಗಿದೆ. ರಾಜಕೀಯವನ್ನು ನಾನು ಉದ್ಯೋಗವನ್ನಾಗಿ ಮಾಡಿಕೊಂಡಿಲ್ಲ, ನನ್ನ ಸಂಪಾದನೆಗೆ ನನ್ನದೇ ಆದ ಉದ್ಯೋಗ, ವ್ಯಾಪಾರ ವಹಿವಾಟುಗಳಿದೆ ಎಂದರಲ್ಲದೇ ನಾನು ಪ್ರಾಮಾಣಿಕವಾಗಿ ಟ್ಯಾಕ್ಸ್ ಕಟ್ಟಿ ಬಂದವನು. ಹಣ ಮಾಡುವುದಿದ್ದರೆ ಅದಕ್ಕೆ ಬೇರೆಯದೇ ದಾರಿ ಇತ್ತು ಎಂದು ಪರೋಕ್ಷವಾಗಿ ಠೀಕಾಕಾರರಿಗೆ ಉತ್ತರ ನೀಡಿದರು.
ಈಗಾಗಲೇ ಅನಂತವಾಡಿಯಲ್ಲಿ 10 ಎಕರೆ ಜಾಗಾ ತೆಗೆದುಕೊಂಡು ದೊಡ್ಡದೊಂದು ಗಾರ್ಮೆಂಟ್ ಫ್ಯಾಕ್ಟರಿಯನ್ನು ಮಾಡಲು ಮುಂದಾಗಿದ್ದೇನೆ. ಎಲ್ಲವೂ ಸರಿಯಾಗಿ ನಡೆದರೆ ಇನ್ನೊಂದು ವರ್ಷದಲ್ಲಿ ಉದ್ಘಾಟನೆಗೆ ಸಜ್ಜಾಗಲಿದೆ. ಅದರಲ್ಲಿ 10 ಸಾವಿರ ಜನಕ್ಕೆ ಉದ್ಯೋಗ ದೊರೆಯಲಿದೆ ಎಂದ ಅವರು ನಾನು ಭಟ್ಕಳದಲ್ಲಿ ವಿದ್ಯಾ ಸಂಸ್ಥೆ, ಮೆಡಿಕಲ್ ಕಾಲೇಜು, ಗಾರ್ಮೆಂಟ್ ಫ್ಯಾಕ್ಟರಿ ಮಾಡಲು ಹೊರಟ ಕಾರಣ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆಯನ್ನು ನೀಡುವ ಸಲುವಾಗಿ. ಇದನ್ನೇ ನಾನು ವಾಣಿಜ್ಯ ಉದ್ಧೇಶಕ್ಕೆ ಮಾಡುವುದೇ ಆಗಿದ್ದಲ್ಲಿ ದೊಡ್ಡ ದೊಡ್ಡ ನಗರದಲ್ಲಿ ಇದೇ ಹಣವನ್ನು ಹೂಡಿಕೆ ಮಾಡಿದ್ದರೆ ಕೋಟಿ ಕೋಟಿ ಆದಾಯ ಬರುತ್ತಿತ್ತು ಎಂದು ತಮ್ಮ ಸಮಾಜದ ಕಡೆ ಇರುವ ಕಾಳಜಿಯನ್ನು ಪ್ರಶ್ನಿಸುವವರಿಗೆ ಉತ್ತರ ನೀಡಿದರು.
ಮಹಿಳಾ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಬೀನಾ ವೈದ್ಯ ಮಹಿಳಾ ಕಾಂಗ್ರೆಸ್‌ನ್ನು ಭಟ್ಕಳದಲ್ಲಿ ಬಲ ಪಡಿಸುವ ಉದ್ದೇಶದಿಂದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ಸಮಾಜದಲ್ಲಿ ಮುಂದೆ ಬರಲು ಒಂದು ವೇದಿಕೆಯ ಅಗತ್ಯತೆ ಇರುವುದನ್ನು ಮನಗಂಡು ಮಹಿಳಾ ಕಾಂಗ್ರೆಸ್ ಮೂಲಕ ಮಹಿಳೆಯರ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಸಮಾವೇಶ ನಡೆಸಲಾಗಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಾವು ಒಗ್ಗಟ್ಟಾಗಿದ್ದೇವೆ ಎನ್ನುವುದನ್ನು ತೋರಿಸಿಕೊಡುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ಕೂಡಾ ಮುಂದಿನ ದಿನಗಳಲ್ಲಿ ನಾವು ತೋರಿಸಿಕೊಡಬೇಕಾಗಿದೆ ಎಂದರು. ಸಮಾಜದಲ್ಲಿ ಮಹಿಳೆಯು ಸ್ವಾಲಂಭಿಯಾದಲ್ಲಿ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದೂ ಹೇಳಿದ ಅವರು ಕಾಂಗ್ರೆಸ್ ಪಕ್ಷವೊಂದೇ ಮಹಿಳೆಯರಿಗೆ ಸಮಾನ ಸ್ಥಾನ-ಮಾನವನ್ನು ವದಗಿಸಿಕೊಡುವ ಪಕ್ಷವಾಗಿದೆ ಎಂದರು.

ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಹಾಗೂ ಆಡಳಿತೆ ನಿರ್ದೇಶಕಿ ಪುಷ್ಪಲತಾ ವೈದ್ಯ ಮಾತನಾಡಿ ಹೆಣ್ಣು ಸಮಾಜದ ಕಣ್ಣು ಎನ್ನುತ್ತಾರೆ, ಆದರೆ ಪುರುಷರು ಆ ಕಣ್ಣನ್ನು ಹೇಗೆ ರಕ್ಷಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಮಹಿಳಾ ಶಕ್ತಿ ಆಘಾದವಾದುದು. ಒಂದು ಮನೆಯನ್ನು ಹೇಗೆ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಾಳೋ ಅದೇ ರೀತಿಯಾಗಿ ಸಮಾಜವನ್ನು ಕೂಡಾ ನಿಭಾಯಿಸ ಬಲ್ಲಳು ಎಂದ ಅವರು ಸಮಾಜ ಹೆಣ್ಣಿಗೆ ಜವಾಬ್ದಾರಿಯನ್ನು ನೀಡುವಾಗಲೇ ಅನುಮಾನ ಪಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಗೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಗ್ಯಾರೆಂಟಿ ಸಮಿತಿ ಅಧ್ಯಕ್ಷ ರಾಜು ನಾಯ್ಕ ಕೊಪ್ಪ, ಜಿ.ಪಂ. ಮಾಜಿ ಸದಸ್ಯ ಅಲ್ಬರ್ಟ ಡಿಕೋಸ್ತ, ಜಿ.ಪಂ. ಮಾಜಿ ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ಮುಂತಾದವರು ಮಾತನಾಡಿದರು. ವೇದಕೆಯಲ್ಲಿ ಬೈಲೂರು ಗ್ರಾ. ಪಂ. ಅಧ್ಯಕ್ಷ ಕೃಷ್ಣಾ ನಾಯ್ಕ, ಮೋಹಿನಿ ಗೊಂಡ, ಸಾರಾ ಫರ್ಜಾನಾ, ಲಕ್ಷಾವತಿ, ಉಷಾ ನಾಯ್ಕ ಮಂಕಿ, ನಾಗರತ್ನಾ ಪಡಿಯಾರ್, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಧ್ಯಕ್ಷರು ಉಪಸ್ಥಿತರಿದ್ದರು. ರಾಧಾ ವೈದ್ಯ ಹಾಗೂ ಮೇಘನಾ ನಾಯ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

More Stories
ಬ್ಯಾಂಕ್ ಎಟಿಎಂ ಭದ್ರತೆ: ಮುರುಡೇಶ್ವರ ಠಾಣೆಯಲ್ಲಿ ಮುನ್ನೆಚ್ಚರಿಕಾ ಸಭೆ
ಮುರುಡೇಶ್ವರ ಸಮುದ್ರದಲ್ಲಿ ಅಲೆಗಳಿಗೆ ಸಿಲುಕಿ ಪ್ರವಾಸಿಗ ಸಾವು
ತಾಲೂಕಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೀನಾ ವೈದ್ಯ ಕಾಲೇಜು ವಿದ್ಯಾರ್ಥಿಗಳ ಸಾಧನೆ.