ಶಿರಸಿ : ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ 1974 ರಿಂದ ನಡೆದು ಬಂದ ದಾರಿಯ ಸಮಗ್ರವಾದ ಮಾಹಿತಿ ಇರುವ ಸುವರ್ಣ ಪಥ ಸ್ಮರಣ ಸಂಚಿಕೆಯನ್ನು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹಾಗೂ ಸ್ಕೊಡವೆಸ್ ಮುಖ್ಯ ಕಾರ್ಯನಿರ್ವಾಹಕರಾದ ಡಾ.ವೆಂಕಟೇಶ ನಾಯ್ಕ ಅವರು ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಿದರು.
ಸುವರ್ಣಪಥ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಶ್ರೀನಿವಾಸ್ ಹೆಬ್ಬಾರ್ ಅವರು ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರು ಇಂದು ರಾಜ್ಯದ ಮತ್ತು ದೇಶದ ಅನೇಕ ಪತ್ರಿಕೆ ಮತ್ತು ದೃಶ್ಯ ಮಾದ್ಯಮಗಳಲ್ಲಿ ಉನ್ನತ ಸ್ಥಾನದಲ್ಲಿ ಕೆಲಸ ಮಾಡಿ ಸಮಾಜಕ್ಕೆ ಮಾದರಿ ಆಗಿದ್ದಾರೆ ಎಂದು ಹೇಳಿದರು.
ನಂತರ ಮಾತನಾಡಿದ ಡಾ: ವೆಂಕಟೇಶ ನಾಯ್ಕ ಅವರು ಪತ್ರಕರ್ತರಲ್ಲಿ ವಯಕ್ತಿಕವಾಗಿ ಹಲವಾರು ಸಮಸ್ಯಗಳಿದ್ದರೂ ಅವುಗಳನ್ನು ಬದಿಗೊತ್ತಿ ನ್ಯಾಯ ಮತ್ತು ಶ್ರಧ್ದೆಯಿಂದ ಕೆಲಸ ಮಾಡಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತಾರೆ ಎಂದು ಹೇಳಿದರು. ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ಸುಬ್ರಾಯ ಭಟ್ಟ ಬಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘವು 1974 ರಲ್ಲಿ ಅಂದಿನ ಹಿರಿಯರು ಸಾಕಿ ಬೆಳೆಸಿದ ಪರಿಶ್ರಮದ ಫಲದಿಂದ ಇಂತ ಒಂದು ಪತ್ರಿಕಾ ಭವನ ನಿರ್ಮಾಣ ಮಾಡಲು ಸಹಾಯಕಾರಿ ಯಾಗಿದೆ ಎಂದು ಹೇಳಿದರು .

More Stories
ನಾರಾಯಣ ಪಿ.ಭಾಗ್ವತ ಅವರಿಗೆ ಕನ್ನಡ ಜ್ಞಾನ ನೇಸರ ಪ್ರಶಸ್ತಿ
ಹಳಿಯಾಳದಲ್ಲಿ ಸಾಕು ನಾಯಿಗೆ ಸೀಮಂತ: ಪ್ರೇಮಾ ಪ್ರಭು ದಂಪತಿಗಳ ಅಪೂರ್ವ ಸಂಪ್ರದಾಯ
ಉತ್ತರ ಕನ್ನಡ ಜಿಲ್ಲಾ ಮಟ್ಟದ ಕೆಪಿಸಿಸಿ ಹಿಂದುಳಿದ ವರ್ಗಗಳ ಜಾಗೃತಿ ಅಭಿಯಾನ ಉದ್ಘಾಟಿಸಿದ ಶಾಸಕ ಭೀಮಣ್ಣ ಟಿ ನಾಯ್ಕ